ಕೆಲ ದಿನಗಳಲ್ಲೇ ಖುಷಿ ಚಿತ್ರ ಬಿಡುಗಡೆ

ಹೈದರಾಬಾದ್,ಅ.೧೦-ವಿಜಯ್ ದೇವರಕೊಂಡ ಸಮಂತಾ ಅಭಿನಯದ ಖುಷಿ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ವಿಜಯ್-ಸಮಂತಾ ಪ್ರೀತಿ, ಗುದ್ದಾಟ, ಮುದ್ಧಾಟ,ಮುನಿಸು ಇಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಲಿದೆ. ಹೆಂಡತಿಗೆ ಗಂಡ ಹೇಗಿರಬೇಕು ಎಂಬುದನ್ನು ತೋರಿಸುವುದೇ ಸಿನಿಮಾದ ಉದ್ದೇಶ.
ಖುಷಿಯ ಫಸ್ಟ್ ಲುಕ್, ಹಾಡುಗಳು ಈಗಾಗಲೇ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತ್ತಿವೆ. ವಿಜಯ್-ಸ್ಯಾಮ್ ಜೋಡಿಯ ಝಲಕ್ ಚಿತ್ರದ ಟ್ರೇಲರ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ. ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್, ಬೇಗಂ ಎಂಬ ಮುಸ್ಲಿಂ ಯುವತಿಯನ್ನು ಭೇಟಿಯಾಗುತ್ತಾನೆ. ನಾಯಕ ವಿಜಯ್ ಅವಳನ್ನು ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ. ನಾಯಕಿ ಸಮಂತಾ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಎಂದು ನಂತರ ತಿಳಿಯುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ ಮತ್ತು ಹಿಂದೂ ಯುವತಿಯ ನಡುವಿನ ಪ್ರೇಮಕಥೆ. ಇಬ್ಬರ ಮದುವೆಗೆ ಮನೆಯಿಂದ ಒಪ್ಪಿಗೆ ದೊರೆಯುವುದಿಲ್ಲ.
ಇಬ್ಬರೂ ಮದುವೆಯಾಗುತ್ತಾರೆ ಆದರೆ ದೊಡ್ಡ ಸಮಸ್ಯೆಗಳು ಎದುರಾಗುತ್ತವೆ ಎಂದು ನಾಯಕಿಯ ತಂದೆ ಭವಿಷ್ಯ ನುಡಿದರು. ಆದರೆ ಅದೆಲ್ಲವನ್ನೂ ಮೀರಿ ಒಂದು ವರ್ಷ ಆದರ್ಶ ಜೋಡಿಯಾಗಿ ಬಾಳುತ್ತೇವೆ ಎಂಬ ಸವಾಲನ್ನು ಹೊತ್ತು ಇಬ್ಬರೂ ಮದುವೆಯಾಗುತ್ತಾರೆ. ಮದುವೆಯ ನಂತರ ಇಬ್ಬರ ನಡುವಿನ, ಜೀವನ ಜಗಳ, ತಮಾಷೆ ಕಥೆಯೇ ಹಂದರವೇ ಖುಷಿ ಚಿತ್ರ.ಇಂದಿನ ಯುವಕರು ಹೇಗೆ ಮದುವೆಯಾಗುತ್ತಾರೆ ಮತ್ತು ಭಿನ್ನಾಭಿಪ್ರಾಯಗಳಿಂದ ಏನಾಗುತ್ತದೆ ಎಂಬುದು ಖುಷಿ ಚಿತ್ರದ ಕಥೆ ಜೀವಾಳ.