ಕೆಲ್ಲಂಬಳ್ಳಿ ಗ್ರಾ.ಪಂ. ಸದಸ್ಯರಾಗಿ ಸೋಮಶೇಖರ್ ಆಯ್ಕೆ

ಚಾಮರಾಜನಗರ, ಜ.02- ತಾಲ್ಲೂಕಿನ ಭೋಗಾಪುರ ಗ್ರಾಮ ಪಂಚಾಯತಿ ಕೆಲ್ಲಂಬಳ್ಳಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಮಶೇಖರ್. ಕೆ.ಎಸ್. ರವರು ಭರ್ಜರಿ ಜಯಗಳಿಸಿದ್ದಾರೆ.
ಅವರು 613 ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ನಾಗರಾಜು ರವರನ್ನು 238 ಮತಗಳ ಅಂತರದಿಂದ ಸೋಲಿಸಿ ಭಾರಿ ಜಯಗಳಿಸಿದ್ದಾರೆ.
ಈ ವೇಳೆ ಮಾತನಾಡಿದ ಸೋಮಶೇಖರ್ ಅವರು, ನನ್ನ ಚುನಾಯಿತನನ್ನಾಗಿ ಮಾಡಿದ ಗ್ರಾಮದ ಎಲ್ಲಾ ವರ್ಗದ ಜನರಿಗೂ ಹಾಗೂ ಎಲ್ಲಾ ಮುಖಂಡರು, ಹಿರಿಯರಿಗೆ ನಾನು ತುಂಬಾ ಚಿರಋಣಿಯಾಗಿರುತ್ತೇನೆ ಎಂದÀು ಕೃತಜ್ಞತೆ ಸಲ್ಲಿಸಿದರು.
ಇನ್ನು ಮುಂದೆ ನಾನು ಎಲ್ಲರ ವಿಶ್ವಾಸವನ್ನು ಪಡೆದುಕೊಂಡು ಅಧಿಕಾರಿಗಳ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿಯಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಸಮರ್ಪಕ ರೀತಿಯಲ್ಲಿ ಸದ್ವಿನಿಯೋಗ ಮಾಡಿ ಕೆಲ್ಲಂಬಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.