ಕೆಲಸ ಮಾಡುವ ತಾಖತ್ ಇರುವುದು ಬಿಜೆಪಿಗೆ, ಅದು ಕಾಂಗ್ರೆಸ್‍ಗಿಲ್ಲ: ಕೆ.ಅಣ್ಣಾಮಲೈ ಕಿಡಿ

ಚಾಮರಾಜನಗರ, ಏ.01:- ಕೆಲಸ ಮಾಡುವ ತಾಖತ್ ಇರುವುದು ಬಿಜೆಪಿಗಷÉ್ಟೀ. ಅದು ಕಾಂಗ್ರೆಸ್‍ಗಿಲ್ಲ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಗಷÉ್ಟೀ ಜನರ ಕೆಲಸ ಮಾಡುವ ತಾಖತ್ ಇರುವುದು, ಕಾಂಗ್ರೆಸ್ ಒಂದು ಪರಿವಾರದ ಪಕ್ಷ, ನಮ್ಮದು ಜನರ ಪಕ್ಷ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.
ಕರ್ನಾಟಕದ ಕಾಂಗ್ರೆಸ್ ಪಕ್ಷಇರುವುದು ಗಾಂಧಿ ಕುಟುಂಬದ ಸೇವೆ ಮಾಡಲು, ಗಾಂಧಿ ಪರಿವಾರದ ಕೆಲಸ ಮಾಡಲಷÉ್ಟೀ ಇಲ್ಲಿನ ಅವರು ಪ್ರತಿ ಸಾರಿ ಗಾಂದಿ üಕುಟುಂಬವನ್ನೂ ಹೇಗೆ ಖುಷಿ ಗೊಳಿಸಬೇಕೇಂದೆ ಯೋಚನೆ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಅಣ್ಣಾಮಲೈ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಆ ಕೆಲಸ ಮಾಡುತ್ತೇವೆ, ಈ ಕೆಲಸ ಮಾಡುತ್ತೇವೆ ಎನ್ನುತ್ತಾರೆ. 70 ವರ್ಷದಲ್ಲಿ 60 ವಷರ್À ಆಡಳಿತ ನಡೆಸಿ ಏನು ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಬಿಜೆಪಿ ವಿರುದ್ಧ ಟೀಕೆ ಮಾಡಲು ಬಸ್‍ನಲ್ಲಿ, ಕಾರ್‍ನಲ್ಲಿ ಎಲ್ಲಾ ಕಡೆ ಹೋಗುತ್ತಿದ್ದಾರೆ ಎಂದು ಅಣ್ಣಾ ಮಲೈ ಟೀಕಿಸಿದರು.
ಬಿಜೆಪಿ ಸರ್ಕಾರ ಬಂದ ಬಳಿಕ ಮೀಸಲಾತಿಯನ್ನು ಬದಲಿಸಿದೆ: ಮೀಸಲಾತಿ ವಿಚಾರವನ್ನು iÀiÁರು ಮುಟ್ಟುತ್ತಿರಲಿಲ್ಲ, ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಮೀಸಲಾತಿಯನ್ನು ಬದಲಿಸಿದೆ. ಒಳ ಮೀಸಲಾತಿಕೊಟ್ಟಿದ್ದೇವೆ, ಹಿಂದೆ ಸರ್ಕಾರ ನಡೆಸಿದ್ದ ಪಕ್ಷಗಳಿಗೆ ಜನರ ಮತ ಬೇಕಿತ್ತು. ಆದರೆಅವರಅಭಿವೃದ್ಧಿ ಬೇಕಿರಲಿಲ್ಲ, ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನಪರವಾಗಿ ಮೀಸಲಾತಿ ತಂದಿದ್ದಾರೆ, ಇದು ಕೇವಲ ಟ್ರೈಲರ್ ಅಷÉ್ಟೀ ಬದಲಾಯಿಸಬೇಕಾದದ್ದು ಬಹಳಷ್ಟಿದೆ ಎಂದರು.
ನಾವು ಎಲ್ಲಾ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿಲ್ಲ, ಮಾಡಬೇಕಾದ ಕೆಲಸ ಬಹಳಷ್ಟಿದೆ, ಡಬಲ್ ಇಂಜಿನ್ ಸರ್ಕಾರದ ವೇಗ ನೋಡಿದ್ದೀರಿ, 100, 120, 107 ಹೀಗೆ ಈ ಸಂಖ್ಯೆ ಬೇಡ, 150 ಸ್ಥಾನ ಕೊಡಿ ಬಳಿಕ ನಿಮ್ಮ ಮನೆ ಬಾಗಿಲಿಗೆ ಅಭಿವೃದ್ಧಿ ಪರ್ವ ನೋಡಿ, ಈ ಬಾರಿ ಚಾಮರಾಜನಗರದಲ್ಲಿ ನಾಲ್ಕು ಸ್ಥಾನದಲ್ಲೂ ಬಿಜೆಪಿ ಪತಾಕೆ ಹಾರಿಸಿ ಎಂದು ಮತದಾರರಲ್ಲಿಅಣ್ಣಾಮಲೈ ಮನವಿ ಮಾಡಿದರು.
ತಮಿಳಿನಲ್ಲೂ ಭಾಷಣ ಮಾಡಿದ ಅಣ್ಣಾಮಲೈ: ಹನೂರುಕ್ಷೇತ್ರದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ತಮಿಳುನಲ್ಲೂ ಅಣ್ಣಾಮಲೈ ಭಾಷÀಣ ಮಾಡಿದರು. ಅಭಿವೃದ್ಧಿ ಕೇವಲ ಬೆಂಗಳೂರಿನಲ್ಲಷÉ್ಟೀ ಇರಬಾರದು ಅದು ಚಾಮರಾಜನಗರದಲ್ಲೂ ಆಗಬೇಕು, ಬೀದರ್‍ನಲ್ಲೂ ಆಗಬೇಕು ಅದಕ್ಕಾಗಿ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜನಾಶ್ರಯ ವೆಂಕಟೇಶ್, ನಿಶಾಂತ್, ದತ್ತೇಶ್ ಹಾಗೂ ಡಾ.ಪ್ರೀತಂ ನಾಗಪ್ಪಇತರರು ಉಪಸ್ಥಿತರಿದ್ದರು.