ಕೆಲಸದ ಮುಖಾಂತರ ಜನತೆಯ ಮನಸು ಗೆಲ್ಲುವೆ: ದರ್ಶನಾಪುರ

ಕೆಂಭಾವಿ:ಜ.12:ಪಟ್ಟಣದಲ್ಲಿ ಇಂದು ಉತ್ತಮ ಗುಣಮಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗಿದೆ ಇದನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಹೋಗುವ ಜವಬ್ಧಾರಿ ಪ್ರತಿಯೊಬ್ಬರ ಮೇಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ೫.೮೦ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಅವರು ಆಸ್ಪತ್ರೆಗೆ ಸಿಬ್ಬಂದಿ ಕೊರತೆ ಇದ್ದು, ಸಿಬ್ಬಂದಿ ಕೊರತೆ ನೀಗಿದಾಗ ಆಸ್ಪತ್ರೆಗೆ ಲಕ್ಷಣ ಬರುವುದು ಆ ನಿಟ್ಟಿನಲ್ಲಿ ಪ್ರಯತ್ನಸುವೆ. ಜಿಲ್ಲೆಯ ಯಾವ ತಾಲೂಕು ಕೇಂದ್ರದಲ್ಲಿಯೂ ಇಲ್ಲದಂತ ಸುಸಜ್ಜಿತ ಕಟ್ಟಡ ಇದಾಗಿದೆ ಎಂದ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಇಲ್ಲಿನ ಪ್ರೌಢ ಶಾಲೆ, ಪ್ರಾಥಮಿಕ ಮತ್ತು ಉರ್ದು ಶಾಲೆಗಳ ಕಟ್ಟಡಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಷೇತ್ರ ಅಭಿವೃದ್ಧಿ ವಿಷಯದಲ್ಲಿ ಸರಕಾರ ಪಕ್ಷ ಬೇದದೊಂದೊಗೆ ತಾರತಮ್ಯ ಮಾಡುತ್ತಿದೆ. ಆದರೂ ಕೆಲಸದ ಮುಖಾಂತರ ಜನತೆಯ ಮನಸು ಗೆಲ್ಲುವ ಕೆಲಸ ನಾನು ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪುರ ಮಾತನಾಡಿ ಶಾಸಕ ದರ್ಶನಾಪುರ ರವರ ಪ್ರಯತ್ನದಿಂದ ಪಟ್ಟಣದಲ್ಲಿ ಸುಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣವಾಗಿದ್ದು ಅರೋಗ್ಯದ ದೃಷ್ಟಿಯಿಂದ ವಲಯದ ಜನತೆಗೆ ಹೆಚ್ಚು ಉಪಯುಕ್ತವಾಗಲಿದೆ ಸರ್ವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ನಗನೂರು ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣರು ಸಾನಿಧ್ಯವಹಿಸಿದ್ದರು. ಪುರಸಭೆ ಅಧ್ಯಕ್ಷೆ ಮಾಸಮ್ಮ ನಿಂಗಪ್ಪ ಹಲಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊ.ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧರ್ಮರಾಜ ಹೊಸಮನಿ, ಡಾ. ನ್ಯಾಮಗೊಂಡ, ಶಾಖಾಧಿಕಾರಿ ರಾಘವೇಂದ್ರ ಕುಲ್ಕರ್ಣಿ, ಪಿ ಎಸ್ ಆಯ್ ಸುದರ್ಶನ ರೆಡ್ಡಿ ವಾಮನರಾವ್ ದೇಶಪಾಂಡೆ, ಪುರಸಭೆ ಸದಸ್ಯರಾದ ವಿಕಾಸ ಸೊನ್ನದ, ಬಾಬುಗೌಡ ಮಾಲಿ ಪಾಟೀಲ್, ರಾಘವೇಂದ್ರ ದೇಶಪಾಂಡೆ, ಬಸನಗೌಡ ಹೊಸಮನಿ, ಶಿವಮಾಂತ ಚಂದಾಪುರ, ಖಾಜಾಪಟೇಲ್ ಕಾಚೂರ, ಸಂಜೀವರಾವ್ ಕುಲ್ಕರ್ಣಿ, ಪುರಸಭೆ ಸದಸ್ಯರು, ಇಲಾಖೆ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.