ಕೆಲಸದಲ್ಲಿ ಪ್ರಾಮಾಣಿಕೆ ಇದ್ದರೆ ಸಮಾಜ ಗುರುತಿಸುತ್ತದೆ:ಪತ್ತಾರ

ತಾಳಿಕೋಟೆ:ಜು.24:ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆಯಿಂದ ಯಾರು ಸಮಾಜಕ್ಕಾಗಿ ಬಧುಕುತ್ತಾರೋ, ಯಾರು ದೇಶಕ್ಕಾಗಿ ಬದುಕುತ್ತಾರೋ ಅಂತವರನ್ನು ಸರ್ಕಾರ ಮತ್ತು ಸಮಾಜವು ಗುರುತಿಸುತ್ತದೆ ಎಂದು ಜೆಎಸ್‍ಜಿ ಪಧವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಅವರು ನುಡಿದರು.

ಶನಿವಾರರಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಇಲಾಖೆ ಹಾಗೂ ಶ್ರೀ ಎಚ್.ಎಸ್.ಪಾಟೀಲ ಸ್ವತಂತ್ರ ಪಧವಿಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆದ ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಗೆ 2ನೇ ದಿನದ ಕಾರ್ಯಾಗಾರ ಹಾಗೂ ಶ್ರಮದಾನ ಶಿಬಿರ ಹಾಗೂ ಸ್ವಚ್ಚ ಗ್ರಾಮ ಸ್ವಸ್ಥ ಗ್ರಾಮ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದ ಅವರು ಎನ್‍ಎಸ್‍ಎಸ್ ಅನ್ನುವದು ರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ ಈ ಸಂಸ್ಥೆಯು ಪ್ರತಿಯೊಬ್ಬರನ್ನು ಹೆಮ್ಮೆರ ಭಾರತೀಯರನ್ನಾಗಿಸುವದರ ಜೊತೆಗೆ ಭರತಭೂಮಿಯಲ್ಲಿ ಹುಟ್ಟಿನ ನಾನು ಏಷ್ಟು ಪುಣ್ಯವಂತ ಎನ್ನುವದನ್ನು ಕಲಿಸುತ್ತದೆ ನಮ್ಮ ದೇಹವನ್ನು ಹಾಗೂ ನಮ್ಮ ಮನೆಯನ್ನು ನಾವು ಹೇಗೆ ಸ್ವಚ್ಚವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೆ ನಮ್ಮ ಸುತ್ತಲಿನ ಪರಿಸರವೂ ಕೂಡಾ ಅಷ್ಟೇ ಸ್ವಚ್ಚಂದವಾಗಿರಲಿ ಎಂಬ ದೃಢ ನಿರ್ಧಾರ ಮತ್ತು ನಂಬಿಕೆಯನ್ನು ಹುಟ್ಟುಹಾಕುತ್ತದೆ ಎಂದ ಅವರು ನಿಜವಾದ ಸುಖಃ ಸ್ವಾತಂತ್ರ್ಯದಲ್ಲಿಲ್ಲಾ ನಿಜವಾದ ಸುಖಃ ತ್ಯಾಗವೆಂಬುದರಲ್ಲಿ ಅಡಗಿದೆ ಇದನ್ನು ಮನಗಂಡ ಮಹಾತ್ಮಾ ಗಾಂಧಿಜಿ ಅವರು ನನ್ನ ದೇಶದ ಜನರು ಸರಿಯಾಗಿ ಸ್ವಾತಂತ್ರ್ಯದಿಂದ ಬಧುಕಲು ಆಗುತ್ತಿಲ್ಲಾ ನಾನು ಮೈತುಂಬಾ ಬಟ್ಟೆ ಏಕೆ ತೊಡಬೇಕೆಂದು ತಮ್ಮ ಉಡುಗೆಗಳನ್ನು ಬದಲಾವಣೆಗೊಳಿಸಿಕೊಂಡರು ನಮ್ಮ ಬಧುಕಿನ ರಂಗವನ್ನು ಆಯ್ಕೆ ಮಾಡಿಕೊಳ್ಳುವದು ನಮ್ಮ ಮೇಲಿದೆ ನಾವು ಯಾವ ರೀತಿ ಬಧುಕಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೋ ಅದರ ಮೇಲೆ ನಮ್ಮ ಜೀವನ ಅಡಗಿರುತ್ತದೆ ವಿದ್ಯಾರ್ಥಿಗಳು ಬಧುಕಿನ ಬಣ್ಣ ಬದಲಾದರೂ ದಾರಿ ಬದಲಾಗಬಾರದು ಎನ್‍ಎಸ್‍ಎಸ್ ಘಟಕದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಘಟಕದ ಉದ್ದೇಶಗಳನ್ನು ಮೊದಲು ಅರೀತುಕೊಳ್ಳಬೇಕು ಎನ್‍ಎಸ್‍ಎಸ್ ಘಟಕವು ಯಾವಾಗಲೂ ದೇಶದ ಉಳುವಿಗಾಗಿ, ದೇಶದ ಸಂಪತ್ತು ಉಳುವಿಗಾಗಿ, ಭಾರತ ದೇಶ ವಿಶ್ವ ಗುರು ಆಗುವ ಹಂಬಲಿನತ್ತ ಕೆಲಸ ಮಾಡುತ್ತಾ ಸಾಗಿದೆ ಎಂದ ಪತ್ತಾರ ಅವರು ಅನ್ಯಾಯ ಕಂಡಾಗ ಎದ್ದು ಹೋಗುವವರು ಆಗದೇ ಅನ್ಯಾಯ ನಡೆದ ಸ್ಥಳದಲ್ಲಿ ಎದ್ದು ನಿಂತು ಪ್ರಶ್ನೀಸುವಂತಹ ಕಾರ್ಯವಾಗಲಿ ಸ್ವಚ್ಚ ಸುಂದರ ನಗರವನ್ನು ಕಟ್ಟಲು ಎನ್‍ಎಸ್‍ಎಸ್ ಸಹಕಾರಿಯಾಗಿದ್ದು ಇದು ವಿಧ್ಯಾಥಿಗಳ ಜೀವನದ ಹಾದಿಯನ್ನು ಬದಲಿಸಿ ತುಂಬಾ ಎತ್ತರ ಮಟ್ಟಕ್ಕೆ ಒಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಎಸ್.ಎಸ್.ವಿಧ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ವಹಿಸಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಶಾಲಾ ಆವರಣದಲ್ಲಿ ಶ್ರಮದಾನ ಮೂಲಕ ಶೌಚಾಲಯ ನಿರ್ಮಾಣದ ಕೆಲಸ ಹಾಗೂ ಆವರಣದಲ್ಲಿ ಸ್ವಚ್ಚತೆಯ ಕೆಲಸವನ್ನು ಶಿಬಿರಾರ್ಥಿಗಳು ಕೈಗೊಂಡರು.

ಪ್ರಾಂಶುಪಾಲರಾದ ಶ್ರೀಮತಿ ಎಂ.ಎಸ್.ಬಿರಾದಾರ, ಶಿಕ್ಷಕ ಭೀಮಣ್ಣ ಅರಕೇರಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ ಪಾಟೀಲ, ಸುನೀಲ ಪಾಟೀಲ, ಕಿರಣ ಪಾಟೀಲ, ಪ್ರಾಚಾರ್ಯ ಅಶೋಕ ಕಟ್ಟಿ, ಎಸ್.ವ್ಹಿ.ಜಾಮಗೊಂಡಿ, ಎಸ್.ಸಿ.ಗುಡಗುಂಟಿ, ಎನ್.ಬಿ.ಪಾಟೀಲ, ಎಂ.ಎಸ್.ರಾಯಗೊಂಡ, ಎಸ್.ವ್ಹಿ,ಮಂಗ್ಯಾಳ, ವ್ಹಿ.ಎಚ್.ಘಟನೂರ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಕುಮಾರಿ ಜ್ಯೋತಿ ಪೊಲೀಸ್‍ಪಾಟೀಲ, ಜೆ.ಎಂ.ಕೊಣ್ಣೂರ, ಮುತ್ತು ಬಿರಾದಾರ, ವಿಠ್ಠಲ ವಿಜಾಪೂರ, ಎಸ್.ಎಸ್.ಪಾಟೀಲ, ಕುಮಾರಿ ಆರ್.ಎಚ್.ಯರದಿಹಾಳ, ವ್ಹಿ.ಎಸ್.ಬಿರಾದಾರ, ಪ್ರಕಾಶ ಪಾಟೀಲ, ಆರ್.ಬಿ.ಪಾಟೀಲ, ಶ್ರೀಮತಿ ಎಸ್.ಬಿ.ಸಾತಕೇಡ, ಎಸ್.ಎಸ್.ಬಿದರಕುಂದಿ, ಶಿವು ನಾಯಕ, ಎಸ್.ಎಂ.ಸಜ್ಜನ, ಜಿ.ಎಸ್.ಹೆಸರೂರ, ಶ್ರೀಮತಿ ಸನಾ ಪಠಾಣ, ಎಸ್.ಎಂ.ಖಿಂಡಿಮನಿ, ಪ್ರಕಾಶ ವಾಲಿಕಾರ, ಮೊದಲಾದವರು ಇದ್ದರು.

ಪ್ರಕಾಶ ಪಾಟೀಲ ಸ್ವಾಗತಿಸಿದರು. ಹಿರಿಯ ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿ ವಂದಿಸಿದರು.