ಕೆಲಸಗಳ ಒತ್ತಡ ಹಾಕದಂತೆ ಅಂಗನವಾಡಿ ನೌಕರರ ಆಗ್ರಹ

ಲಿಂಗಸುಗೂರು.ಏ.೨೧-ಅನ್ಯ ಇಲಾಖೆಗಳ ಕೆಲಸಗಳನ್ನು ಮಾಡುವಂತೆ ಒತ್ತಡ ಹಾಕಬೇಡಿ ಎಂದು ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಸಿಡಿಪಿಓಗೆ ಮನವಿ ಸಲ್ಲಿಸಿದರು.
೨೦೧೫ರಿಂದ ೨೦೨೦ರ ಅವಧಿಯಲ್ಲಿ ಮರಣ ಹೊಂದಿದ ಅಂಗನವಾಡಿ ಶಿಕ್ಷಕಿಯರ ಹಾಗೂ ಸಹಾಯಕಿಯರಿಗೆ ಹಾಗೂ ಅವರ ಕುಟುಂಬಕ್ಕೆ ನೀಡಬೇಕಾದ ಮರಣ ಪರಿಹಾರ ನೀಡಬೇಕು. ಗುರುತರ ಕಾಯಿಲೆಗಳ ನೀಡಬೇಕಾದ ವ್ಯದ್ಯಕೀಯ ಸೌಲಭ್ಯಕ್ಕಾಗಿ ಅರ್ಜಿ ನೀಡಿದವರಿಗೆ ಹಣ ಬಿಡುಗಡೆ ಮಾಡಬೇಕು. ಬೇರೆ ಕೇಂದ್ರಗಳ ಇನಚಾರ್ಜು ಆಗಿ ಕೆಲಸ ಮಾಡುತ್ತಿರುವ ಅಂಗನವಾಡಿ ಕೇಂದ್ರದ ಕಾರ್ಯಕರ್ತರಿಗೆ ನೀಡಬೇಕಾದ ಹಣ ನೀಡಬೇಕು. ಆಹಾರ ಧಾನ್ಯ ದಾಸ್ತಾನುಗಳನ್ನು ಬೇಡಿಕೆಗೆ ತಕ್ಕಂತೆ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ನೌಕರರ ಸಂಘದ ಗೌರವಾಧ್ಯಕ್ಷ ಶೇಕ್ಷಾಖಾದ್ರಿ, ಅಧ್ಯಕ್ಷೆ ಲಕ್ಷ್ಮೀ ನಗನೂರು, ಸುಜಾತ, ಪ್ರಮೀಳ, ತಿಪ್ಪಮ್ಮ, ರುದ್ರಮ್ಮ, ದುರಗಮ್ಮ, ಶಂಶಾದ ಬೇಗಂ, ಹಾಗೂ ಇನ್ನಿತರಿದ್ದರು.