ಕೆಲವೇ ಬಸ್‌ಗಳ ಸಂಚಾರ ಆದರೂ ತಪ್ಪದ ಪರದಾಟ

ಬೆಂಗಳೂರು,ಏ.೧೭-ಆರನೇ ವೇತನ ಆಯೋಗದ ಅನ್ವಯ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ೧೧ನೇ ದಿನಕ್ಕೆ ಕಾಲಿಟ್ಟಿದ್ದು ಸರಕಾರದ ವಿರುದ್ಧ ನೌಕರರ ಸಮರ ಮುಂದುವರೆದಿದ್ದು ಪ್ರಯಾಣಿಕರ ಸಂಕಷ್ಟ ಮುಂದುವರೆದಿದೆ.
ವೇತನ ಜಾರಿ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಬ್ಬಂದಿ ನಡುವೆ ಉಂಟಾಗಿರುವ ಹಗ್ಗಜಗ್ಗಾಟ ಮುಂದುವರೆದಿದ್ದು ಬಸ್ ಗಾಗಿ ಪ್ರಯಾಣಿಕರ ಅನುಭವಿಸುತ್ತಿರುವ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ.
ಮುಷ್ಕರದ ಪರಿಣಾಮ ರಾಜ್ಯದಲ್ಲಿ ಕೆಎಸ್‌ಆರ್ ಟಿಸಿ ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ಬಸ್ ಗಳು ಪೂರ್ಣ ಪ್ರಮಾಣದಲ್ಲಿ ರಸ್ತೆಗಳಿದಿಲ್ಲ. ಅಧಿಕಾರಿಗಳ ಕಠಿಣ ಕ್ರಮಗಳಿಂದ ಶೇ ೩೦ ರಷ್ಟು ಮಾತ್ರ ಸಂಚಾರ ನಡೆಸಿವೆ.
ಕೆಎಸ್ ಆರ್ ಟಿಸಿಯ ೧೯೮೨ಬಿಎಂಟಿಸಿ ೭೪೫ ಸೇರಿದಂತೆ ೪೩೫೧ಬಸ್ ಗಳು ಇಂದು ಬೆಳಿಗ್ಗೆ ೧೧ರ ವೇಳೆಗೆ ಸಂಚರಿಸಿದ್ದು ಬಸ್ ಸಂಚಾರಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ನಡುವೆ ಸರ್ಕಾರದ ಅಸ್ತ್ರಗಳಿಗೆ ಪ್ರತಿ ಅಸ್ತ್ರಗಳನ್ನು ಪ್ರಯೋಗಿಸುತ್ತಿರುವ ನೌಕರರು ಬೀದಿಗಿಳಿದು ಹಲವೆಡೆ ಬೀದಿಗಿಳಿಯಲಿದು ಹೋರಾಟ ನಡೆಸಿ ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿದ್ದಾರೆ.ಇತ್ತ ಮುಷ್ಕರನಿರತ ಸಿಬ್ಬಂದಿ ಮೇಲೆ ಬಿಎಂಟಿಸಿ ಶಿಸ್ತು ಕ್ರಮ ಮುಂದುವರೆದಿದೆ.
೨೪೦ ಸಿಬ್ಬಂದಿಯನ್ನು ಮತ್ತೆ ಸೇವೆಯಿಂದ ವಜಾಗೊಳಿಸಿದೆ. ಕರ್ತವ್ಯಕ್ಕೆ ಬಾರದ ಸಿಬ್ಬಂದಿಯನ್ನು ವಜಾಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಕರ್ತವ್ಯಕ್ಕೆ ಗೈರು ಹಾಜರಾತಿ ಹಾಗೂ ಇತರೆ ನೌಕರರನ್ನು ಹಾಜರಾಗದಂತೆ ಪ್ರಚೋದನೆ ಮಾಡಿದ ನೌಕರರನ್ನೂ ವಜಾ ಮಾಡಿ ಬಿಸಿ ಮುಟ್ಟಿಸುತ್ತಿದೆ. ಇನ್ನು ಬೇರೆ ಜಿಲ್ಲೆಗಳಲ್ಲಿ ವರ್ಗಾವಣೆ ಭಾಗ್ಯ, ಕೆಲಸದಿಂದ ವಜಾ ಸೇರಿ ಇನ್ನಿತರ ಶಿಸ್ತು ಕ್ರಮಗಳನ್ನು ಅಲ್ಲಿನ ಸಾರಿಗೆ ಕೇಂದ್ರಗಳು ಕೈಗೊಳ್ಳುತ್ತಿದೆ.
ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ರಾಯಚೂರು, ಮಂಗಳೂರು, ಮೈಸೂರು, ಮಂಡ್ಯ, ಹಾಸನ ಸೇರಿ ರಾಜ್ಯದೆಲ್ಲೆಡೆ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ಸುಗಳು ನಿಂತಲ್ಲೇ ನಿಂತಿವೆ. ಮುಷ್ಕರವಿರುವುದು ಗೊತ್ತಾಗಿರುವುದರಿಂದ ಇಂದು ಬಹುತೇಕ ಪ್ರಯಾಣಿಕರು ಮನೆಯಿಂದ ಹೊರಗೆ ಬಂದಿಲ್ಲ.
ದಿನನಿತ್ಯದ ಹೋಗಬೇಕಾದವರು ಮಾತ್ರ ಖಾಸಗಿ ಬಸ್ಸು, ಟ್ಯಾಕ್ಸಿ, ಆಟೋಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಸರ್ಕಾರ ತಮ್ಮ ಬೇಡಿಕೆಗಳಿಗೆ ಮಣಿಯದಿರುವುದರಿಂದ ಪ್ರತಿಭಟನೆ, ಮುಷ್ಕರ ತೀವ್ರಗೊಳಿಸುತ್ತಿರುವ ಸಾರಿಗೆ ಇಲಾಖೆ ನೌಕರರ ಒಕ್ಕೂಟದ ವತಿಯಿಂದ ಪ್ರತಿಭಟನೆಗಳು ಮುಂದುವರೆದಿವೆ.
ಸಾರಿಗೆ ಇಲಾಖೆ ನೌಕರರ ಕುಟುಂಬ ಸದಸ್ಯರು ಚಳವಳಿಯಲ್ಲಿ ಭಾಗವಹಿಸಿ ಮುಷ್ಕರ ನಿರತ ನೌಕರರಿಗೆ ನೈತಿಕ ಬೆಂಬಲ ನೀಡತೊಡಗಿದ್ದಾರೆ.

೫೧೮೩ ಬಸ್ ಗಳು ಸಂಚಾರ

ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ನೌಕರರ ಮುಷ್ಕರದ ನಡುವೆಯೂ
೫೧೮೩ ಬಸ್ ಗಳು ಸಂಚರಿಸಿವೆ.
ಕೆಎಸ್‌ಆರ್ ಟಿಸಿಯ ೨೩೫೮ ಬಸ್ ಗಳು ಸಂಚರಿಸಿವೆ.
ಬಿಎಂಟಿಸಿ ೮೮೩ಎನ್ ಇ ಕೆಆರ್ ಟಿಸಿ ೧೦೯೨ ಎನ್ ಡಬ್ಲ್ಯೂ ಕೆಆರ್ ಟಿಸಿ ೮೫೦ ಬಸ್ ಗಳು ಸೇರಿ ೫೧೮೩ ಬಸ್ ಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ಸಂಚರಿಸಿವೆ