ಕೆಲವು ದಿನಗಳ ನಂತರ “ಅಂಬುಜ” ಹಿಂದೆ ಶ್ರೀನಿ

“ಕೆಲವು ದಿನಗಳ ನಂತರ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಪ್ರತಿಭಾವಂತ ನಿರ್ದೇಶಕ ಶ್ರೀನಿ ಹನುಮಂತರಾಜು ಇದೀಗ ” ಅಂಬುಜ” ಹಿಂದೆ ಬಿದ್ದಾರೆ.

ಗ್ಲಾಮರಸ್ ಪಾತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿರುವ ನಟಿ ಶುಭಾ ಪೂಂಜಾ ” ಬಿಗ್ ಬಾಸ್ ” ಮನೆಯಿಂದ ಬರುವುದನ್ನು ಎದುರು ನೋಡುತ್ತಿದ್ದ ಶ್ರೀನಿ, “ಅಂಬುಜ”ಳನ್ನು ಒಲಿಸಿಕೊಳ್ಳುವ ಸಿದ್ದತೆಯಲ್ಲಿದ್ದಾರೆ.

ಅಂದಹಾಗೆ “ಅಂಬುಜ”ಶ್ರೀನಿ ನಿರ್ದೇಶನದ ಹೊಸ ಚಿತ್ರ. ಇದರಲ್ಲಿ ಶುಭಾ ಪೂಂಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ‌ ಇಷ್ಟರ ವೇಳೆಗೆ ಚಿತ್ರೀಕರಣ ನಡೆಯಬೇಕಾಗಿತ್ತು. “ಅಂಬುಜ” ಪಾತ್ರ ದಲ್ಲಿ ನಟಿಸಬೇಕಾಗಿದ್ದ ಶುಭಾ ಬಿಗ್ ಬಾಸ್ ಮನೆ ಸೇರಿದರೆ ಮತ್ತೊಂದು ಕಡೆ ಕೊರೋನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಂದಕ್ಕೆ ಹೋಗಿದೆ.

ಮೂಲತಃ ಉದ್ಯಮಿಯಾಗಿರುವ ಕಾಶೀನಾಥ್ ಡಿ ಮಡಿವಾಳರ್ ‌‌ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಲು ಮುಂದಾಗಿದ್ದಾರೆ.ಜೊತೆಗೆ ಹಾಡುಗಳನ್ನು ಬರೆಯುತ್ತಿರುವುದು ವಿಶೇಷ.

ಹಲವು ವರ್ಷಗಳ ಚಿತ್ರರಂಗದ ಒಡನಾಟವಿರುವ ನಿರ್ಮಾಪಕರು ಇದೇ ಮೊದಲ ಬಾರಿಗೆ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ.ಜೊತೆಗೆ ಕಥೆಯೂ ಅವರದೆ

ನಿರ್ದೇಶಕ ಶ್ರೀನಿ, ಕ್ರೈಮ್ ಥ್ರಿಲ್ಲರ್ ಜೊತೆಗೆ ಲವ್ ಸ್ಟೋರಿ ಇರುವ ವಿಭಿನ್ನ ಕಥೆಯನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ಕೊರೋನಾ ಅಲೆ ಕಡಿಮೆಯಾದ ಕೂಡಲೇ ಚಿತ್ರೀಕರಣಕ್ಕೆ ಹೊರಡಲು ಸಜ್ಜು ಮಾಡಿಕೊಂಡಿದ್ದಾರೆ.

ಚಿತ್ರವನ್ನು ಬೆಂಗಳೂರು ಮತ್ತು ಗದಗ , ಉಡುಪಿ ಚಿಕ್ಕಮಗಳೂರು ಸುತ್ತಾ-ಮುತ್ತ ಚಿತ್ರೀಕರಣ ಮಾಡಲು ಉದ್ದೇಶಿಸಿದ್ದಾರೆ.

ಚಿತ್ರದಲ್ಲಿ ಶುಭಾಪೂಂಜಾ, ಪದ್ಮಜಾರಾವ್, ಕಾಮಿಡಿಕಿಲಾಡಿ ಗೋವಿಂದೆಗೌಡ, ಶರಣಯ್ಯ, ಮಜಾ ಭಾರತ ಖ್ಯಾತಿಯ ಪ್ರಿಯಾಂಕ ಕಾಮತ್ ಮತ್ತಿತರು ಇದ್ದಾರೆ. ಇನ್ನಿಬ್ಬರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.ಅವರ ಆಯ್ಕೆ ಯಾಗಬೇಕಾಗಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಶ್ರೀನಿ , ಕಳೆದ ಫೆಬ್ರವರಿ ತಿಂಗಳಲ್ಲಿ ಚಿತ್ರೀಕರಣ ಆರಂಭಿಸು ಉದ್ದೇಶವಿತ್ತು.ಶುಭಾ ಪೂಂಜಾ ಬಿಗ್ ಬಾಸ್ ಗೆ ಹೋದರು.ಮಾರ್ಚ್- ಏಪ್ರಿಲ್ ನಲ್ಲಿ ಚಿತ್ರೀಕರಣ ಮಾಡೋಣ ಅಂದುಕೊಂಡೆವು. ಕೋರೊನಾ ಅಲೆ ಹೆಚ್ಚಾದರಿಂದ ಎಲ್ಲವೂ ಉಲ್ಟಾ‌ ಆಗಿದೆ. ಸೋಂಕು ಪೂರ್ಣ ಕಡಿಮೆಯಾದ ಬಳಿಕ ಚಿತ್ರೀಕರಣಕ್ಕೆ ತೆರಳುವ ಉದ್ದೇಶವಿದೆ.

ಮೊದಲ ಹಂತ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿತ್ತು.ಎರಡನೇ ಹಂತ ಗದಗ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡೋಣ ಅಂದುಕೊಂಡಿದ್ದೇವೆ.‌ನೋಡೋಣ ಪರಿಸ್ಥಿತಿ ನೋಡಿ ಕೊಂಡು ಚಿತ್ರೀಕರಣಕ್ಕೆ ತೆರಳುವ ಉದ್ದೇಶವಿದೆ ಒಟ್ಟು 35 ದಿನದ ಚಿತ್ರೀಕರಣದ ಉದ್ದೇಶವಿದೆ ಎಂದರು.

ಕ್ರೈಮ್ ಥ್ರಿಲ್ಲರ್

“ಅಂಬುಜ, ಕ್ರೈಮ್ ,ಥ್ರಿಲ್ಲರ್ ನಿಂದ ಕೂಡಿದ ಲವ್ ಸ್ಟೋರಿ ಇರುವ ವಿಭಿನ್ನ ಚಿತ್ರ.ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಚಿತ್ರೀಕರಣ ಆರಂಭವಾಗಬೇಕಾಗಿತ್ತು. ಕೊರೊನಾ ಕಾರಣದಿಂದ ವಿಳಂಬವಾಗಿದೆ. ಸದ್ಯದ ಪರಿಸ್ಥಿತಿ ತಿಳಿಯಾದ ನಂತರ ಚಿತ್ರೀಕರಣ ಮಾಡಲಾಗುವುದು,‌ ಬೆಂಗಳೂರು, ಗದಗ,ಉಡುಪಿ,ಚಿಕ್ಕಮಗಳೂರು ಸೇರಿದಂತೆ 35 ದಿನಗಳ ಕಾಲ ಚಿತ್ರೀಕರಣ ಮಾಡುವ ಉದ್ದೇಶವಿದೆ.”

– ಶ್ರೀನಿ ಹನಮಂತರಾಜು, ನಿರ್ದೇಶಕ