೧. ನೆಗಡಿ ಕೆಮ್ಮಿಗೆ ಕಷಾಯದ ಪುಡಿ ( ಆeಛಿoಛಿಣioಟಿ ಠಿoತಿಜeಡಿ ಜಿoಡಿ ಛಿoಟಜ ಛಿough )
ಕಾಳುಮೆಣಸು ೫೦ ಗ್ರಾಂ, ಒಣ ಶುಂಠಿ ೫೦ ಗ್ರಾಂ, ಲವಂಗ ೫-೬, ಹಿಪ್ಪಲಿ ೨೫ ಗ್ರಾಂ, ಓರ್ಮ ೨೫ ಗ್ರಾಂ ಅತಿಮಧುರ ೫೦ ಗ್ರಾಂ ಇಷ್ಷನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಂಡು ನೆಗಡಿ ಕೆಮ್ಮು ಆದ ಸಮಯದಲ್ಲಿ ೧ ಲೋಟ ನೀರಿಗೆ ೧ ಚಮಚ ಪುಡಿ ಹಾಕಿ ಕಷಾಯ ಮಾಡಿ ಹಾಲು ಸಕ್ಕರೆ ಹಾಕಿ ಕುಡಿಯಿರಿ.
೨. ಆರೋಗ್ಯಪೂರ್ಣ ಚೂರ್ಣ ( ಊeಚಿಟಣhಥಿ heಚಿಟಣhಥಿ )
ಮೆಂತ್ಯ ೧೦೦ ಗ್ರಾಂ, ಜೀರಿಗೆ ೧೦೦ ಗ್ರಾಂ, ಓಮ ೧೦೦ ಗ್ರಾಂ ಸೋಂಪು, ಅಗಸೆ ಬೀಜ ೧೦೦ ಗ್ರಾಂ, ಕಪ್ಪು ಜೀರಿಗೆ ೧೦೦ ಗ್ರಾಂ ಎಲ್ಲ ಸೇರಿಸಿ ಪುಡಿಮಾಡಿಟ್ಟುಕೊಂಡು ಪ್ರತಿದಿನ ರಾತ್ರಿ ೧ ಚಮಚ ತಿಂದು ಬಿಸಿನೀರು ಕುಡಿಯಿರಿ.
೩.ಸ್ನಾನದ ಚೂರ್ಣ ( ಖಿhe bಚಿಣh is ಜಿuಟಟ )
ಹೆಸರುಕಾಳು ೧/೨ ಕೆ.ಜಿ, ಕಡಲೆಕಾಳು ೧/೨ ಕೆ.ಜಿ, ಕಸ್ತೂರಿ ಅರಿಶಿನ ೧೦೦ ಗ್ರಾಂ, ಕಚೂರ ೧೦೦ ಗ್ರಾಂ, ಶ್ರೀಗಂಧದ ಚೂರ್ಣ ೫೦ ಗ್ರಾಂ, ಬೇವಿನ ಎಲೆಯನ್ನು ಓಣಗಿಸಿ ಪುಡಿ ಮಾಡಿ ಇವಿಷ್ಟುನ್ನು ನುಣ್ಣಗೆ ಪುಡಿ ಮಾಡಿ ಸ್ನಾನ ಮಾಡುವಾಗ ಮೈಕೈಗೆಲ್ಲಾ ಹಚ್ಚಿ ಸ್ನಾನ ಮಾಡಿ ಚರ್ಮ ಆರೋಗ್ಯಪೂರ್ಣ ವಾಗಿರುತ್ತದೆ.
೪.ಕೀಲುನೋವಿಗೆ ( ಈoಡಿ ಚಿಡಿಣhಡಿiಣis )
ಕೊತ್ತಂಬರಿ ಬೀಜ ೧೦೦ ಗ್ರಾಂ, ಜೀರಿಗೆ ೧೦೦ ಗ್ರಾಂ, ಒಣಶುಂಠಿ ೧೦೦ ಗ್ರಾಂ, ಹುಣಸೇಬೀಜದ ಒಳಗಿನ ಬಿಳಿ ಪೊಪ್ಪು ೫೦ ಗ್ರಾಂ, ಎಲ್ಲವನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಂಡು ಇದನ್ನು ರಾತ್ರಿ ಮಲಗುವಾಗ ೧ ಲೋಟ ಬಿಸಿ ನೀರಿಗೆ ೧ ಚಮಚ ಪುಡಿಹಾಕಿ ಮುಚ್ಚಿಡಿ. ಬೆಳ್ಳಿಗೆ ಎದ್ದ ತಕ್ಷಣ ಮೇಲಿನ ತಿ:ಇ ನೀರನ್ನು ಸೇವಿಸಿ.
೫.ರಕ್ತದ ಒತ್ತಡಕ್ಕೆ ( ಖಿo bಟooಜ ಠಿಡಿessuಡಿe )
ಅಶ್ವಗಂಧದ ಪುಡಿ ೧೦೦ ಗ್ರಾಂ, ಶತಾವರಿ ೧೦೦ ಗ್ರಾಂ, ಸರ್ಪಗಂಧ ಬೇರು ೧೦೦ ಗ್ರಾಂ, ೩ ನ್ನೂ ಸೇರಿಸಿ ಮಿಶ್ರ ಮಾಡಿಟ್ಟುಕೊಳ್ಳಿ. ರಾತ್ರಿ ಮಲಗುವಾಗ ೧ ಚಮಚ ಪುಡಿ ಬಾಯಿಗೆ ಹಾಕಿಕೊಂಡು ಬಿಸಿನೀರು ಕುಡಿಯಿರಿ.
೬.Pಅಔಆ ಗೆ ಔಷಧಿ ( ಒeಜiಛಿಚಿಣioಟಿ ಜಿoಡಿ Pಅಔಆ )
ಕರಿಎಳ್ಳು ೧೦೦ ಗ್ರಾಂ, ಹಿಪ್ಪಲಿ ೫೦ಗ್ರಾಂ, ಒಣಶುಂಠಿ ೫೦ ಗ್ರಾಂ, ಬೆಲ್ಲ ೨೦೦ ಗ್ರಾಂ, ಇಂಗು ೨೫ ಗ್ರಾಂ, ಎಳ್ಳನ್ನು ಹುರಿದು ಪುಡಿ ಮಾಡಿಟ್ಟುಕೊಂಡು ಬೇರೆಯದೆಲ್ಲಾ ಹಾಗೆಯೇ ಪುಡಿ ಮಾಡಿಟ್ಟುಕೊಳ್ಳಿ. ಪ್ರತಿದಿನ ೧ ಚಮಚ ಪುಡಿಯನ್ನು ತುಪ್ಪದಲ್ಲಿ ಕಲಸಿ ಸೇವಿಸಿ ಬಿಸಿ ಹಾಲು ಅಥವಾ ಬಿಸಿ ನೀರು ಕುಡಿಯಿರಿ (ಬೆಳ್ಳಗೆ. ಸಂಜೆ ೨೧ ದಿನ )
೭. ಸ್ಥೂಲಕಾಯರಿಗೆ ( ಈoಡಿ ಣhe obese )
ದಾಲ್ಚಿನಿ ಚಕ್ಕೆ, ಕರಿ ಬೇವಿನಸೊಪ್ಪನ್ನು ಒಣಗಿಸಿಟ್ಟುಕೊಳ್ಳಿ. ದಾಳಿಂಬೆ ಬೀಜ ( ಒಣಗಿಸಿಟ್ಟುಕೊಳ್ಳಿ ). ಶುದ್ಧ ಅರಿಶಿನ, ಕಪ್ಪು ಜೀರಿಗೆ, ಅಗಸೆ ಬೀಜ, ಒಣಶುಂಠಿ, ಕಾಮಕಸ್ತೂರಿ ಬೀಜ ಎಲ್ಲವನ್ನು ನುಣ್ಣಗೆ ಪುಡಿ ಮಾಡಿ ಬೇರಸಿಟ್ಟುಕೊಳ್ಳಿ ಈ ಪುಡಿಯನ್ನು ಬೆಳಿಗ್ಗೆ ಬರೀ ಹೊಟ್ಟೆಗೆ ರಾತ್ರಿ ಮಲಗುವಾಗ ೨ ಬಾರಿ ೩ ತಿಂಗಳ ಕಾಲ ಸೇವನೆ ಮಾಡುತ್ತಾ ಬನ್ನಿ ಆರೋಗ್ಯವೂ ವೃದ್ಧಿಯಾಗುತ್ಥದೆ. ಕೊಬ್ಬಿನ ಅಂಶವೂ ಕರಗುತ್ತದೆ. ಈ ಸಮಯದಲ್ಲಿ ಬಿಸಿ ನೀರನ್ನು ಹೆಚ್ಚಾಗಿ ಸೇವಿಸಿ.
೮. ಖಿನ್ನತೆಗೆ ( ಖಿo ಜeಠಿಡಿessioಟಿ )
ಬೆಟ್ಟದ ನೆಲ್ಲಿಕಾಯಿ ಚೂರ್ಣ, ಪನ್ನೀರು ಗುಲಾಬಿ ಹೂವಿನ ದಳ, ಒಂದೆಲಗ ಸೊಪ್ಪು ಹಾಗೂ ತುಳಸಿಯನ್ನು ನೆರಳಲ್ಲಿ ಒಣಗಿಸಿಟ್ಟುಕೊಂಡು ಜೀರಿಗೆ ಹಾಗೂ ಹಿಪ್ಪಲಿ ಇವಿಷ್ಟನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಮಿಶ್ರ ಮಾಡಿಟ್ಟುಕೊಳ್ಳಿ ಇದನ್ನು ಪ್ರತಿನಿತ್ಯ ರಾತ್ರಿ ಮಲಗುವಾಗ ೧ ಚಮಚ ಸೇವಿಸಿ ಬಿಸಿ ಹಾಲು ಕುಡಿಯಿರಿ.
೯.ಎಲ್ಲಾ ರೀತಿಯ ಆರೋಗ್ಯಕ್ಕೆ ( ಈoಡಿ ಚಿಟಟ ಞiಟಿಜs oಜಿ heಚಿಟಣh )
ಧನಿಯಾ(ಕೊತ್ತಂಬರಿ ಬೀಜ ) ಜೀರಿಗೆ, ಓಮ (ಅಜವಾನ) ೩ ನ್ನೂ ಸ್ವಲ್ಪವೇ ಹುರಿದು ಪುಡಿಮಾಡಿಟ್ಟುಕೊಳ್ಳಿ. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ೧ ಲೋಟ ಕುದಿಸಿದ ನೀರಿಗೆ ೧ ಚಮಚ ಪುಡಿಯನ್ನು ಹಾಕಿ ಮುಚ್ಚಿಡಿ ಬೆಳಿಗ್ಗೆ ಎದ್ದ ತಕ್ಷಣ ಮೇಲಿನ ತಿಳಿ ನೀರನ್ನು ಕುಡಿಯಿರಿ. ಮತ್ತು ಪುನಃ ಇನ್ನೋಂದು ಲೋಟ ಬಿಸಿ ನೀರಿಗೆ ೧ ಚಮಚ ಪುಡಿ ಹಾಕಿ ಮುಚ್ಚಿಡಿ. ಅದನ್ನು ರಾತ್ರಿ ಮಲಗುವ ಮುನ್ನ ಕುಡಿಯಿರಿ. ಈ ರೀತಿ ಮಾಡುವುದರಿಂದ ವಾತ ಪಿತ್ತ, ಕಫ ಮೂರರ ಸಮತೋಲನ ಕಾಪಾಡುತ್ತದೆ. ಹೀಗಾಗಿ ಪರಿಪೂರ್ಣವಾದ ಆರೋಗ್ಯ ಉಂಟಾಗುತ್ತದೆ.
೧೦. ಗ್ಯಾಸ್ಟ್ರಿಕ್ ( ಉಚಿsಣಡಿiಛಿ )
ಬೇಕಾಗುವ ಸಾಮಗ್ರಿಗಳು : ೮-೧೦ ನಿಂಬೆಹಣ್ಣು, ಜೀರಿಗೆ, ಓಮ, ಕಪ್ಪು ಉಪ್ಪು, ಅರಿಶಿನ ಪುಡಿ ಈ ಎಲ್ಲವನ್ನು ಬೇರೆ ಬೇರೆಯಾಗಿ ಪುಡಿಮಾಡಿಕೊಂಡು ಎಲ್ಲವನ್ನು ಬೆರಸಿಟ್ಟುಕೊಳ್ಳಿ. ನಿಂಬೆಹಣ್ಣನ್ನು ಮಧ್ಯಭಾಗ ಕತ್ತರಿಸಿ ೨ ತುಂಡು ಮಾಡಿಕೊಳ್ಳಿ. ಅದಕ್ಕೆ ಬೆರಸಿಟ್ಟ ಈ ಪುಡಿಯನ್ನು ಚೆನ್ನಾಗಿ ತುಂಬಿ ಒಂದು ಕಡ್ಡಿಯ ಸಹಾಯದಿಂದ ಚುಚ್ಚಿ ಚೆನ್ನಾಗಿ ಒಣಗಿದ ನೋತರ ನಿಂಬೆಹಣ್ಣಿನ ಸಿಪ್ಪೆಯ ಸಹಿತ ನುಣ್ಣಗೆ ಪುಡಿಮಾಡಿ ಜರಡಿ ಹಿಡಿದು ತೆಗೆದಿಟ್ಟುಕೊಳ್ಳಿ. ಇದನ್ನು ಪ್ರತಿನಿತ್ಯ ಆಹಾರಕ್ಕೆ ಮುಂಚೆ ೧/೪ ಚಮಚ ಪುಡಿಯನ್ನು ಬಾಯಿಗೆ ಹಾಕಿಕೊಂಡು ಸ್ವಲ್ಪ ಬಿಸಿ ನೀರನ್ನು ಕುಡಿಯಿರಿ. ಇದು ಗ್ಯಾಸ್ಟ್ರಿಕ್ ಸಮಸ್ಯೆ, ವಾಯುವಿನ ಉಪದ್ರವ, ಎಲ್ಲಕ್ಕೂ ಉಪಯೋಗವಾಗುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧