
ಬ್ಯಾಡಗಿ,ಮಾ.11: ಕೆರೆಗಳ ಅಭಿವೃದ್ಧಿಯಾಗದೆ ಅಂತರ್ಜಲ ಮಟ್ಟ ಸುಧಾರಣೆ, ಕುಡಿಯುವ ನೀರು ಸೇರಿದಂತೆ ರೈತರು ಬೆಳೆಯುವ ಬೆಳೆಗಳಿಗೆ ಸಾಕಷ್ಟು ನೀರು ನೀಡಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ತಾಲೂಕಿನ ಮತ್ತೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆರೆ ಅಭಿವೃಧ್ದಿ ಪ್ರಾಧಿಕಾರದ ಅಡಿಯಲ್ಲಿ ಶ್ರೀಕರಿಯಮ್ಮದೇವಿ ಕೆರೆ ಬಳಕೆದಾರ ಸಂಘದ ವತಿಯಿಂದ ಕೈಗೆತ್ತಿಕೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಂತರ್ಜಲ ಮಟ್ಟ ಹೆಚ್ಚಿಸುವದಷ್ಟೆ ಅಲ್ಲದೇ ಅದನ್ನು ಸದಾ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು. ಹರಿವ ನೀರಿಗೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿ ನೀರು ಇಂಗಿಸುವ ಕೆಲಸ ಮಾಡಬೇಕು. ಅಳಿವಿನಂಚಿನಲ್ಲಿರುವ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಅಂತರ್ಜಲ ವೃದ್ಧಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕರಿಯಮ್ಮದೇವಿ ಕೆರೆ ಬಳಕೆದಾರ ಸಂಘದ ಅಧ್ಯಕ್ಷ ಮಾಲತೇಶ ಹೊಸಳ್ಳಿ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಹರಿಜನ, ಉಪಾಧ್ಯಕ್ಷ ಕರಿಯಪ್ಪ ಹೊಸಳ್ಳಿ, ರಾಜ್ಯ ಪಿಕಾರ್ಡ್ ಬ್ಯಾಂಕ್ ಸದಸ್ಯ ಸುರೇಶ ಯತ್ನಳ್ಳಿ, ಪುರಸಭೆ ಸದಸ್ಯ ವಿನಯ್ ಹಿರೇಮಠ, ಸಂಘದ ಕಾರ್ಯದರ್ಶಿ ನಿಂಗಪ್ಪ ಅರಳಿಕಟ್ಟಿ, ಎಸ್.ಎನ್.ಜಿಗಳಿಕೊಪ್ಪ, ಶಿವಯೋಗೆಪ್ಪ ಉಕ್ಕುಂದ, ಹನುಮಂತಪ್ಪ ಪುಟ್ಟಣ್ಣನವರ, ಶಿವಪ್ಪ ಮಟ್ಟಿಮನಿ, ಪಿಡಿಓ ಶೋಭಾ ನಾಯಕ್, ಇಲಾಖೆಯ ಅಧೀಕ್ಷಕ ಲಿಂಗಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.