ಕೆರೆ ಹೂಳೆತ್ತಲು ಅನುದಾನ; ಸ್ವಾಗತಾರ್ಹ

ಜಗಳೂರು.ಏ.೨೨; ತಾಲ್ಲೂಕಿನ 57 ಕೆರೆ ನೀರು ತುಂಬಿಸುವ ಯೋಜನೆ ಕಾಮಗಾರಿಯು ನಡೆಯುತ್ತಿದ್ದು ಮೊದಲ ಹಂತದಲ್ಲಿ ತುಪ್ಪದಹಳ್ಳಿ ಕೆರೆಗೆ ರಾಜ್ಯ ಸರ್ಕಾರ ಕೆರೆ ಹೂಳೆತ್ತುವುದು ಹಾಗೂ ಏರಿ ಅಭಿವೃದ್ದಿಗೆ 8 ಕೋಟಿ ಅನುದಾನ ಮುಂಜೂರು ಮಾಡಲಾಗಿದ್ದು ಈ ಕಾರ್ಯಕ್ಕೆ ಶ್ರಮಿಸುದ ತರಳುಬಾಳು ಶ್ರೀಗಳಿಗೆ ಮುಖ್ಯಮಂತ್ರಿ, ಸಂಸದರು, ಶಾಸಕರಿಗೆ ತಾಲ್ಲೂಕಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ.ಕಲ್ಲೇರುದ್ರೇಶ್ ಹೇಳಿದರು 
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು ಈ ಹಿಂದೆ 2018 ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅದಿಕಾರವದಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ತಾಂತ್ರಿಕ ಕಾರಣಗಳಿಂದ ಕಾರ್ಯವಾಗಲಿಲ್ಲ ಇದೀಗ ಯಡಿಯೂರಪ್ಪನವರು ಹಣ ನೀಡಿದ್ದಾರೆ ಎಂದರು 
ಉಳಿದ ಎಲ್ಲಾ ಕೆರೆಗಳಿಗೂ ಹಂತ ಹಂತವಾಗಿ ಹೋಳೆತ್ತಲು ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಕೆರೆಯಿಂದ ಗುಡ್ಡಕ್ಕೆ ನೀರು ಹತ್ತಿಸಲು ಈಗಿರುವ ಮೂವತ್ತು ಕಿ.ಮೀ ಗಿಂತ ಮತ್ತೆ ಐದು ಕಿ.ಮೀ ಹೆಚ್ಚಿಸುವಂತೆ ಸಂಬಂದಪಟ್ಟ ಎ.ಇ.ಇ.ಅವರಿಗೆ ತಿಳಿಸಲಾಗಿದೆ ಎಂದರು 
ಜನವರಿ ಪೆಬ್ರವರಿಗೆ ಮೊದಲ ಹಂತ ನೀರು ಬರುವ ನಿರೀಕ್ಷೆ ಇದೆ ತುಪ್ಪದ ಹಳ್ಳಿ ಕೆರೆಯಲ್ಲಿ ಸಬ್ ವಾಲ್ ಮತ್ತಷ್ಟು ಹೆಚ್ಚಿಸಬೇಕು ಭರಮಸಾಗರ ಹೋಬಳಿ ಕೆರೆ ನೀರು ತುಂಬಿಸುವ ಕೆರೆಗಳ ಮಾರ್ಗ ಇಲ್ಲೇ ಹಾದು ಹೋಗುವುದರಿಂದ ನೀರಿನ ಒತ್ತಡ ಹೆಚ್ಚಾಗಲಿದೆ 
ಆದ್ದರಿಂದ ಉತ್ತಮ ಕಾರ್ಯ ಮಾಡಬೇಕು ಎಂದು ಒತ್ತಾಯುಸಿದರು 12 ವರ್ಷಗಳ ಹಿಂದೆ ಮಾಜಿ ಸಚಿವರು ಹೆಚ್.ಡಿ.ರೇವಣ್ಣ ಅವದಿಯಲ್ಲಿ ಹಿರೇಮಲ್ಲನಹೊಳೆ  ಬಿಳಿಚೋಡು  ಬಿದರಿಕೆರೆ ಯಲ್ಲಿ ಮೂರು ವಿದ್ಯುತ್ತ ಸ್ಥಾವರ ಘಟಕ ಸ್ಥಾಪಿಸಿದ್ದು ಅದು ಬಿಟ್ಟರೆ ಮತ್ತು ಯಾರು ಪ್ರಾರಂಭಿಸಿಲ್ಲ ಎಂದರು