ಕೆರೆ ಸಂಜೀವಿನ ಕಾರ್ಯಕ್ರಮಕ್ಕೆ ಚಾಲನೆ

ಗಂಗಾವತಿ ಏ 02 : ತಾಲೂಕಿನ ವಿಠಲಾಪೂರ ಗ್ರಾಮದ ಕೆರೆಯ ಹೂಳೆತ್ತುವ ಕೆಲಸಕ್ಕೆ ಚಾಲನೆ ಮಾಡಲಾಯಿತು.
ಸರಕಾರ ಕೆರೆ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಕೆರೆ ಹೂಳೆತ್ತುವ ಕೆಲಸದಿಂದ ರೈತರ ಹೊಲಕ್ಕೆ ಫಲವತ್ತಾದ ಮಣ್ಣು ಉಪಯೋಗವಾಗುತ್ತಿದೆ. ಹಾಗೇ ನೀರು ಸಂಗ್ರಹ ಣೆ ಹೆಚ್ಚಿನ ಮಟ್ಟದಲ್ಲಿ ಆಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಬಿಜೆಪಿಯ ಗ್ರಾಮ ಘಟಕದ ಮಾಜಿ ಅಧ್ಯಕ್ಷ ಡಿಕೆ ಕರೆಕಲ್ಲ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ದೊಡ್ಡಬಸವ, ವೆಂಕೋಬ ಯಾದವ, ಕೆರೆ ಅಭಿವೃದ್ಧಿ ಅಧ್ಯಕ್ಷ ರಾಮಣ್ಣ ಅಂಗಡಿ, ಕೆರೆ ಅಭಿವೃದ್ಧಿಯ ಕಾರ್ಯದರ್ಶಿ ದುರುಗಪ್ಪ ವಟಪರ್ವಿ, ಗ್ರಾಮದ ಮುಖಂಡರಾದ ದೇವೇಂದ್ರ ಗೌಡ ಪೊ.ಪಾಟೀಲ, ರುದ್ರಪ್ಪ ಅಂಗಡಿ, ನಾಗರಾಜ ಹೊಸಗುಡ್ಡ, ಸಗರಪ್ಪ ಜಲ್ಲಿ , ಯಮನಪ್ಪ ವೆಂಕಟಗಿರಿ, ರಾಮಪ್ಪ ನೆಲಜೇರಿ, ವಿರುಪಣ್ಣ ಪೊ.ಪಾಟೀಲ, ನಿಂಗಪ್ಪ , ವೀರೇಶ ಗಂಗಾವತಿ ಮತ್ತಿತರರು ಇದ್ದರು.