ಕೆರೆ ಬಿರುಕು ಪರಿಶೀಲಿಸಿದ ಶಾಸಕ ಡಾ.ಅವಿನಾಶ ಜಾಧವ

ಚಿಂಚೋಳಿ,ಆ.2- ತಾಲೂಕಿನ ನಾಗಾಯಿದ್ಲಾಯಿ ಗ್ರಾಮದ ಕೆರೆಗೆ ಬಿರುಕು ಬಿಟ್ಟಿರುವ ವಿಷಯವನ್ನು ಅರಿತ ಶಾಸಕರಾದ ಡಾ.ಅವಿನಾಶ ಜಾಧವ, ಅವರು, ನಾಗಾಇದ್ಲಾಯಿ ಗ್ರಾಮದ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಶಾಸಕರಾದ ಡಾ.ಅವಿನಾಶ ಜಾಧವ, ಅವರು, ನಾಗಾಯಿದ್ಲಾಯಿ ಗ್ರಾಮದ ಕೆರೆ ಹಳೆಯದಾಗಿದ್ದು, ಇದರಿಂದಾಗಿ ಇಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಕುರಿತು ನಾನು ಸಚಿವರ ಜೊತೆ ಮಾತನಾಡಿದ್ದೇನೆ ಮಂಡ್ಯದಿಂದ ಕೆರೆ ತಜ್ಞರನ್ನು ಕಳಿಸಿ ಕರೆಸಿ ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಆದಷ್ಟು ಬೇಗನೆ ಮೇಲಾಧಿಕಾರಿಗಳಿಗೆ ಸಂಪರ್ಕ ಮಾಡಿ ತಕ್ಷಣ ಪರಿಶೀಲನೆ ಮಾಡಿ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸುತ್ತಮುತ್ತ ಗ್ರಾಮಗಳಿಗೆ ಅಲೆಂಟ್ ಘೋಷಣೆ ಮಾಡಬೇಕೆಂದು ಸೂಚಿಸಿದರು,
ಈ ಸಂಧರ್ಭದಲ್ಲಿ ತಹಸೀಲ್ದಾರರಾದ ಅಂಜುಮ್ ತಬಸ್ಸುಮ್, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹಂಪಣ್ಣ ನಾಯಕ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾದ ಶಿವಶರಣಪ್ಪ ಕೇಶ್ವಾರ, ಡಿಸಿಸಿ ಬ್ಯಾಂಕ ನಿರ್ದೇಶಕರಾದ ಗೌತಮ ಪಾಟೀಲ, ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ, ಭೀಮಶೆಟ್ಟಿ ಮುರುಡಾ, ಕೆ.ಎಂ ಬಾರಿ, ಶ್ರೀಮಂತ ಕಟ್ಟಿಮನಿ, ಶಿವರಾಜ ಸಿಂದೋಲ, ಸಂಗಾರೆಡ್ಡಿ, ಉದಯ ಸಿಂಧೋಲ, ಶೇರಖಾನ, ಗಿರಿರಾಜ ನಾಟಿಕರ, ಅಭೀಷೇಕ ಮಲಕನೂರ, ಪವನ ಗೋಪನಪಲ್ಲಿ, ರಾಜಕುಮಾರ್ ಕೊಳೂರು, ಹಣಮಂತ ಭೋವಿ, ಮತ್ತು ಅನೇಕ ರೈತರು ಹಾಗೂ ಗ್ರಾಮಸ್ಥರು ಇದ್ದರು