ಕೆರೆ ಪಕ್ಕ ಬೋರವೆಲ್ ಕೊರೆಸಿದರೆ ಕ್ರಿಮಿನಲ್ ಪ್ರಕರಣ

ಇಂಡಿ:ಮಾ.6:ಕೆರೆಗಳ ಪಕ್ಕದಲ್ಲಿ ಆಗಲಿ,ಕೆರೆಯಲ್ಲಾಗಲಿ ಬೊರವೆಲ್ ಕೊರೆಯಿಸಿದರೆ ಹಾಗೂ ಬಾವಿ ತೊಡಿದರೆ ಅಂತವರ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.ಈಗಾಗಲೆ 4 ಜನರ ಮೇಲೆ ಪ್ರಕರಣ ದಾಖಲಿಸಿದ್ದು, 8 ಪಂಪಸೆಟ್ ಮೊಟಾರ್‍ಗಳನ್ನು ವಶಕ್ಕೆ ಪಡೆದಿದ್ದು, ಒಂದು ಬೊರವೆಲ್ ನಾಶ ಮಾಡಲಾಗಿದೆ.ಇನ್ನು ಮುಂದಾದರೂ ಸಾರ್ವಜನಿಕರು ಕೆರೆಯ ಸುತ್ತಮುತ್ತಲ್ಲಾಗಲಿ,ಕೆರೆಯಲ್ಲಾಗಲಿ, ಬೊರವೆಲ್,ಬಾವಿ ತೊಡಿದರೆ ಕಾನೂನು ಕ್ರಮ ಕೈಮ ಕೈಗೊಳ್ಳಲಾಗುತ್ತದೆ.ಬೀಕರ ಬೆಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೆರೆಗಳಿಗೆ,ಕಾಲುವೆಗಳಿಗೆ ನೀರು ಹರಿಸಲಾಗಿದೆ. ಕೆರೆಯಲ್ಲಿನ ನೀರು ಕುಡಿಯುವ ನೀರಿಗಾಗಿ ಮಾತ್ರ ಉಪಯೋಗಿಸಲಾಗುತ್ತದೆ ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿಯುವ ನೀರಿಗಾಗಿ ಇಂಡಿ ತಾಲೂಕಿನ ಹಂಜಗಿ,ಲೋಣಿ ಕೆಡಿ,ಸಂಗೋಗಿ,ಅರ್ಜನಾಳ ಹಾಗೂ ಸಿಂದಗಿ ತಾಲೂಕಿನ ಬಳಗಾನೂರ,ದೇವರ ಹಿಪ್ಪರಗಿ ತಾಲೂಕಿನಲ್ಲಿ ಬರುವ ಕೆರೆಗಳಲ್ಲಿ ಕುಡಿಯುವ ನೀರಿಗಾಗಿ ಮಾತ್ರ ನೀರು ಹರಿಸುತ್ತಿದ್ದು, ಈ ನೀರು ಯಾವುದೇ ಕಾರಣಕ್ಕೂ ಬಳಕೆ ಮಾಡಿಕೊಳ್ಳದೆ,ಕೇವಲ ಕುಡಿಯುವ ನೀರಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು,ಕೆರೆಗಳಿಗೆ ಪಂಪಸೆಟ್ ಅಳವಡಿಸುವುದಾಗಲಿ, ಬಾವಿ ತೊಡುವುದಾಗಿ,ಬೊರವೆಲ್ ಕೊರೆಸುವುದಾಗಿ ಯಾರೂ ಮಾಡಬಾರದು.ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇಂಡಿ,ಚಡಚಣ ತಾಲೂಕಿನ ಭೀಮಾ ನದಿಯ ದಂಡೆಯ ರೈತರು ಭೀಕರ ಬರಗಾಲದ ನಿಮಿತ್ಯ ಬರುವ ದಿನಗಳಲ್ಲಿ ಗ್ರಾಮಸ್ಥರಿಗೆ ಮತ್ತು ಜನ ಜಾನುವಾರುಗಳಿಗೆ ತೊಂದರೆ ಯಾಗದಂತೆ ಮಾನವೀಯ ಆಧಾರದ ಮೇಲೆ ಕೃಷಿಗೆ ನೀರು ಬಳಸಬಾರದು.
ಇಂಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಮಳೆ ಕಡಿಮೆ ಯಾಗಿರುವದರಿಂದ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ರೈತರು ಕೃಷಿಗೆ ನೀರು ಬಳಸಬಾರದು.
ಅದಲ್ಲದೆ ಇಂಡಿ ಮತ್ತು ಚಡಚಣ ತಾಲೂಕಿನ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ನೀರಿನ ಅವಶ್ಯಕತೆ ಇರುವದರಿಂದ ಇಂಡಿ ಮತ್ತು ಚಡಚಣ ತಾಲೂಕುಗಳ ಭೀಮಾ ನದಿಯ ದಡದಲ್ಲಿರುವ ಗ್ರಾಮಗಳ ರೈತರು ನೀರನ್ನು ಬಳಸದಂತೆ ಕಾನೂನಾತ್ಮಕ ನಿಭರ್ಂಧ ವಿಧಿಸಿದ್ದು ಮಾನವೀಯ ಆಧಾರದ ಮೇಲೆ ನೀರು ಬಳಸದಂತೆ 144ರನ್ವಯ ಆದೇಶ ಹೊರಡಿಸಿದೆ ಎಂದರು.
ಸಿಆರ್‍ಪಿಸಿ 1973(ಪರಿಷ್ಕøತ 1974)ರ ಕಲಂ 147 ರಡಿಯಲ್ಲಿ ಇಂಡಿ ಉಪ ವಿಭಾಗ ಮಟ್ಟದಲ್ಲಿ ಬರುವ ಸಂಗೊಗಿ,ತಡವಲಗಾ,ಹಂಜಗಿ,ಲೋಣಿ ಕೆಡಿ ಮತ್ತು ಅರ್ಜನಾಳ,ಬಳಗಾನೂರ,ಹೊನ್ನಳ್ಳಿ,ಯಂಕಂಚಿ ಗ್ರಾಮಗಳ ಕೆರೆಗಳ ಅಂಚಿನಿಂದ 30 ಮೀಟರ ಪರಿಧಿಯಲ್ಲಿನ ಎಲ್ಲ ನೀರಿನ ಮೂಲಗಳಾದ ಬಾವಿ,ಕೊಳವೆಬಾವಿ ಹಾಗೂ ಇತರೆ ಜಲಮೂಲಗಳನ್ನು ಮುಂದಿನ ಆದೇಶದವರೆಗೆ ಸರ್ಕಾರದ ಸುಪರ್ದಿಗೆ ಪಡೆಯಲಾಗಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಕೆರೆಗಳ ಸುತ್ತಲೂ ಬಾವಿ,ಬೊರವೆಲ್,ಪಂಪಸೆಟ್ ಅಳವಡಿಸದಂತೆ,ತೊಡದಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೆಬಿಜೆಎನ್‍ಎಲ್ ಎಇಇ ರಿಯಾಜ, ಎಂಐ ಎಇಇ ಕರೂರ,ಹೆಸ್ಕಾಂ ಎಇಇ ಆರ್.ಎಸ್.ಮೆಡೆಗಾರ,ಪಿಎಸೈ ಎಂ.ಎಸ್.ಸತಿಗೌಡರ ಈ ಸಂದರ್ಭದಲ್ಲಿ ಇದ್ದರು.