ಕೆರೆ ತುಂಬುವ ಯೋಜನೆಗೆ 160 ಕೋಟಿ ಅನುದಾನ ಮಂಜೂರುಃ ಸಂಸದ ಜಿಗಜಿಣಗಿ

ಇಂಡಿ, ಆ.2-ಕೃಷ್ಣಾ ಕೊಳ್ಳದ ಯೋಜನೆ ಆರಂಭವನ್ನು ತಿಕ್ಕೋಟಾದಿಂದ ಪ್ರಾರಂಭಿಸಿದ್ದು ಆ ಯೋಜನೆ ಕಾರ್ಯಗತಗೋಳಿಸಲು ನಾನು ಪ್ರಮಾಣಿಕ ಪ್ರಯತ್ನ ಮಾಡಿದ್ದೆನೆ ಆದರೆ ಆ ಪುಣ್ಯಾತ್ಮರು ನಾನೇ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ ಅದು ದೇವರಿಗೆ ಗೊತ್ತು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ತಾಲೂಕಿನ ತಡವಲಗಾ ಗ್ರಾಮದ ಕೆರೆತುಂಬಿದ ಪ್ರಯುಕ್ತ ಬಾಗಿನ ಸಮರ್ಪಿಸಿ ನಂತರ ಶ್ರೀಮರುಳಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿನೆಟ್ಟು ಮಾತನಾಡಿದ ಅವರು ಕೆರೆತುಂಬುವ ಹಾಗೂ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳು ಹಿಂದಿನ ಬಿಜೆಪಿ ಸರಕಾರದ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇದ್ದಾಗ ಆಗಿವೆ ಎಂದರು.
ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿಪರ ಕಾರ್ಯಗಳನ್ನು ಯಾವುದೇ ಪ್ರಚಾರ ಬಯಸದೆ ಮಾಡಿದ್ದೇನೆ ನನಗೆ ಅಭಿವೃದ್ದಿ ಮಾಡಲೂ ಯಾರೂ ಮನವಿ ಮಾಡದಿದ್ದರೂ ಸಹ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಏನು ಅವಶ್ಯಕ ಬೇಕು ಎಂಬುದನ್ನ ಅರಿತು ಯೋಜನೆಗಳು ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಪ್ರಮಾಣಿವಾಗಿ ಮಂಜೂರಿ ಮಾಡಿಸಿದ್ದೆನೆ ಎಂದು ಹೇಳಿದರು.
ಸೋಲಾಪೂರ ವಿಜಯಪೂರ ಚತುಷ್ಠತ ಹೆದ್ದಾರಿ ಪ್ರಮಖ ರಸ್ತೆಗಳ ಮೇಲ್ಸುತುವೆಗಳು ಹಾಗೂ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಬಾಳು ಹಸನಾಗಲಿ ಎಂಬ ಸಂಕಲ್ಪದಿಂದ ನಾನು ಯಾವುದೇ ರೈತರಿಂದ ಮನವಿ, ಅರ್ಜಿ ಪಡೇಯದೆ ನಾನು ಕೂಡಾ ಈ ಭಾಗದ ಮಗನಾಗಿರುವದರಿಂದ್ದ ಇಲ್ಲಿನ ಜನರ ಭವಣೆ ತಿಳಿದು ಭೀಮಾನದಿಗೆ ಅಡ್ಡಲಾಗಿ 9 ಬ್ಯಾರೇಜ, ಅಥರ್ಗಾ ಹಳ್ಳಕ್ಕೆ 11 ಬ್ಯಾರೇಜ ನಿರ್ಮಿಸಲಾಗಿದೆ ಎಂದು ಹೇಳಿದರು.
ನನ್ನ ಅವಧಿಯಲ್ಲಿ ಜಿಲ್ಲೆಯ ರೈಲು ಮಾರ್ಗವನ್ನು ಬ್ರೌಡ್ ಗೇಜ ಆಗಿ ಪರಿವರ್ತಿಸಿ ರೈಲು ಮಾರ್ಗ ಆಧುನಿಕರಣಗೋಳಿಸಿ ವಿದ್ಯುತ ಚಾಲನೆಯಿಂದ ಓಡುವಂತೆ ಮಾಡಲಾಗಿದ್ದು, ಜಿಲ್ಲೆಯ ಪ್ರಮುಖ ರಸ್ತೆಗಳನ್ನು ಆಧುನೀಕರಗೋಳಿಸಿ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಪರಿವರ್ತಿಸಿ ಅಭಿವೃದ್ದಿ ದಶೇಯಲ್ಲಿ ಸಾಗಿಸಿದ್ದೇನೆ ಎಂದರು.
ಅಥರ್ಗಾ, ತಡವಲಗಾ, ಹಂಜಗಿ ಕೆರೆಗಳ ಅಭಿವೃದ್ದಿಗಾಗಿ 110 ಕೋಟಿ ರೂ ಮಂಜೂರಾಗಿದ್ದು ಟೆಂಡರ್ ಪ್ರಕ್ರೀಯಯಲ್ಲಿದೆ ಇನ್ನು ಮುಂದೆ ಈ ಭಾಗದಲ್ಲಿ ಎಂತಹ ಬೇಸಿಗೆ ಇದ್ದರೂ ಸಹಿತ ಕುಡಿಯವ ನೀರಿನ ಸಯಾಗವದಿಲ್ಲಾ. ಹಂಜಗಿ ಗ್ರಾಮದ ಕೆರೆಯ ತುಂಬಿಸಲು ತಾಂತ್ರೀಕ ತೊಂದರೆ ಇದ್ದು ಅಧಿಕಾರಿಗಳನ್ನು ಕರೆದು ವಾಸ್ತವಿಕ ಸ್ಥಿತಿಗತಿ ತಿಳಿದು ಕರೆಯನ್ನು ತುಂಬಿಸಲಾಗುವುದು ನಾನು ಅಭಿವೃದ್ದಿಪರ ಸಾಧನೆಗಳನ್ನು ಹೇಳುತ್ತಾ ಸಾಗಿದರೆ ದೀನಾ ಸಾಲುವುದಿಲ್ಲಾ ಪ್ರಚಾರ ಬ್ಯಾಡ ಮಾರಾಯ್ರಾ ನಾವು ಮಾಡಿರುವ ಕೆಲಸಗಳು ಮಾತನಾಡಬೇಕು ಎಂದು ಹೇಳಿದರು.
ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಮಂಜೂರಿ ಮಾಡಿಸಿದ್ದೇನೆ ಅಂದಿನ ಲೋಕೋಪಯೋಗಿ ಸಚಿವ ಈಶ್ವರಪ್ಪ ಹಾಗೂ ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ಅಭಿನಂದನೆ ಸಲ್ಲಿಸುತ್ತೇನೆ. ಇದಕ್ಕೂ ಸಹಿತ ಕಾಂಗ್ರೇಸಿನವರು ಮಾಡಿದ್ದಾರೆ ಎನ್ನುವುದು ಎಷ್ಟು ಸೂಕ್ತ ಎಂದು ಕಾಂಗ್ರೇಸಿಗರ ಮೇಲೆ ಹರಿಹಾಯ್ದರು.
ಸ್ಥಳೀಯ ಸರಕಾರಿ ಶಾಲೆಗೆ 2 ಕೋಣೆಗಳ ಬೇಡಿಕೆ ಇದೆ ಹಾಗೂ ಶ್ರೀಮರಳು ಸಿದ್ದೇಶ್ವರ ಶಿಕ್ಷಣ ಸಂಸ್ಥೆಯವರು ಸಮುದಾಯ ಭವನ ಹಾಗೂ ಶೌಚಾಲಯಕ್ಕಾಗಿ ಬೇಡಿಕೆ ಸಲ್ಲಿಸಿದ್ದಾರೆ ಆದರೆ ಕೋವಿಡ -19 ರ ಕಾರಣ ಸಂಸದರ ನಿಧಿ 10 ಕೋಟಿ ಕರೋನಾ ರೋಗ ತಡೆಗಟ್ಟಲು ಕೇಂದ್ರ ಸರಕಾರ ಹಣ ಬಳಸಿಕೊಳ್ಳಲಾಗುತ್ತಿದೆ ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆ ಪ್ರಮಾಣಿಕವಾಗಿ ಇಡೇರಿಸುವದಾಗಿ ಭರವಸೆ ನೀಡಿದರು.
ತಡವಲಗಾ ಶ್ರೀಮಠ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆರ್ಶೀವಚನ ನೀಡಿದರು.
ವೇದಿಕೆಯಲ್ಲಿ ದಯಾಸಾಗರ ಪಾಟೀಲ್, ಕಾಸುಗೌಡ ಬಿರಾದಾರ, ಶೀಲವಂತ ಮರಾಣಿ, ಶಂಕರಗೌಡ ಪಾಟೀಲ್, ಮಲ್ಲಿಕಾರ್ಜುನ ಕೀವುಡೆ, ಹಣಮಂತರಾಯಗೌಡ ಪಾಟೀಲ್, ಮಲ್ಲಿಕಾರ್ಜುನ ಜೋಗುರ, ಸುನಂದಾ ವಾಲೀಕಾರ, ಶರಣಗೌಡ ಬಂಡಿ, ವೆಂಕಟೇಶ ಕುಲಕರ್ಣಿ, ಅಣ್ಣಾರಾಯ ಮದರಿ, ರಮೇಶ ಹೊಸಮನಿ, ಸಚೀನ ಇಂಡಿ, ಅರವಿಂದ ಗಿಡಗಂಟ್ಟಿ, ಸಂಜು ದಶವಂತ, ರಾಮಸಿಂಗ ಕನ್ನೋಳ್ಳಿ,ರವಿ ವಗ್ಗಿ, ಶಾಂತಪ್ಪ ಕಸ್ಕಿ, ಸುನೀಲ ರಬಶೇಟ್ಟಿ ಸೇರಿದಂತೆ ಅನೇಕರಿದ್ದರು.