
ರಾಯಚೂರು,ಆ.೧೮- ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಭೋದ್ ಯಾದವ್ ಅವರು ರಾಯಚೂರು ತಾಲೂಕಿನ ಉಡಮಗಲ್ ಪಂಚಾಯತಿಗೆ ಭೇಟಿ ನೀಡಿ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರೀಶಿಲಿಸಿದರು.
ಆ.೧೭ರ(ಗುರುವಾರ) ರಾಯಚೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆ ಹೂಳು ತೆಗೆಯುವ ಕಾರ್ಯದ ಮಾಹಿತಿ ಪಡೆದು ಕೆರೆ ಅಭಿವೃದ್ಧಿ ಸಂಬಂಧಿಸಿದ ಕಡತಗಳನ್ನು ಪರಿಶಿಲಿಸಿದರು.
ಕೆರಯಿಂದ ತೆಗೆದ ಹೂಳು ಮಣ್ಣನ್ನು ರೈತರ ಕೆರೆಗೆ ಬಳಸಿಕೊಲ್ಳುವ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡು ಕೆರೆಯ ಹೂಳಿನಿಂದ ಬೆಳೆಯಲ್ಲಿ ಹೆಚ್ಚಿನ ಫಸಲು ಬರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಜೊತೆಗೆ ಅಂತರ್ಜಲ ಮಟ್ಟ ಮತ್ತು ನೀರಿನ ತೇವಾಂಶವನ್ನು ಹಿಡಿದಿಟ್ಟು ಕೊಳ್ಳುವುದರಿಂದ ಹತ್ತಿ ಮತ್ತು ಮೆಣಸಿನಕಾಯಿಒ ಬೆಳೆಗೆ ತುಂಬಾ ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಪ್ರೊಬೇಶನರಿ ಐಎಎಸ್ ಅಧಿಕಾರಿ ಸಾಹಿತ್ಯ ಆಲದಕಟ್ಟಿ, ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾ ನಿರ್ದೇಶಕ ಪ್ರಕಾಶ.ವ್ಹಿ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ, ಸಹಾಯಕ ನಿರ್ದೇಶಕ (ಗ್ರಾ.ಉ), ವಿಜ್ಞಾನಿಗಳಾದ ಜ್ಯೋತಿ, ಜಯಪ್ರಕಾಶ, ಅನೀಶಾ, ಆಂಜನೇಯ್ಯಲು ಹಾಗೂ ಇತರೆ ಜಿಲ್ಲಾ ಮತ್ತು ತಾಲೂಕ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಹಾಗೂ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.