ಕೆರೆಯ ಕೃಷಿ ನಿಶ್ಚಿತ ಆದಾಯ : ರೈತನಲ್ಲಿ ಖುಷಿ

????????????????????????????????????

ಮಾರೆಪ್ಪ ನಾಯಕ
ಸಿರುಗುಪ್ಪ, ಜೂ.07: ಭಾರತದಲ್ಲಿ ಮಾನ್ಸೂನ್ ಮಾರುತಗಳು ಅನಿಶ್ಚಿತವಾದ್ದರಿಂದ ಮಳೆಗಾಲದಲ್ಲಿ ಮಳೆ ನೀರು ಹಿಡಿದಿಡುವುದು ಅತ್ಯವಶ್ಯಕವೆಂದು ಪ್ರಾಚೀನ ಕೃಷಿಕರು ಯೋಚಿಸಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿದ್ದರು.
ವಿಶೇಷವಾಗಿ ಕೃಷಿಗೆ, ಪ್ರಾಣಿ ಪಕ್ಷಿಗಳಿಗೆ, ದೈನಂದಿನ ಚಟುವಟಿಕೆಗೆ ಹೆಚ್ಚು ನೀರು ಅವಶ್ಯಕತೆಗಾಗಿ ಕೆರೆಗಳ ನಿರ್ಮಾಣವಾಗುತ್ತಿದ್ದವು. ಬದಲಾದ ಕೃಷಿ ಪರಿಸ್ಥಿತಿ ಅಂತರ್ಜಲದಯಥೇಚ್ಚವಾಗಿ ಬಳಕೆ, ಕೆರೆಯ ಜಲಾನಯನ ಪ್ರದೇಶದ ಒತ್ತುವರಿ, ಕೆರೆಗಳ ಮಾಲಿನ್ಯ, ಹೂಳು ಎತ್ತುವುದರಲ್ಲಿ ನಿರ್ಲಕ್ಷ್ಯ ಇತರೆ ಕಾರಣಗಳಿಂದ ಕೆರೆಗಳ ಸಂರಕ್ಷಣೆಗೆ ಅನೇಕ ಅಡಚಣೆಗಳು ಎದುರಾದಗ ಕೆರೆಗಳು ಮುಚ್ಚಿ ಮರೆಯಾದವು.
ಕೃಷಿಗಾಗಿ ಕೆರೆಗಳ ಮೇಲಿನ ಅವಲಂಬನೆ ಸ್ವಾತಂತ್ರ್ಯ ನಂತರ ವಿಶೇಷವಾಗಿ 70ರದಶಕದಲ್ಲಿ ಕಡಿಮೆಯಾಗುತ್ತಾ ಬಂತು, ಕೊಳವೆ ಬಾವಿಗಳ ಆದ್ಯತೆ ಹೆಚ್ಚಾಗಿ ಕೆರೆಯ ಪರಿಸರದ ಬಗ್ಗೆ ನಿರ್ಲಕ್ಷ್ಯ ಉಂಟಾಯಿತು. ಕೆರೆ ನೀರು ಸಂಗ್ರಹಣ ಸಾಮಾಥ್ರ್ಯ ಕಡಿಮೆಯಾಗಿ ಅಧಿಕ ಹೂಳು ತುಂಬಿಕೊಂಡು, ಅಧಿಕ ಮಳೆಯಾದಗ ಎಷ್ಟೋ ಕೆರೆಗಳು ಕಟ್ಟೆ ಒಡೆದು ಹೋದವು, ಬರಗಾಲ ಬಂದಾಗ ಕೆರೆಗಳು ಬತ್ತಿಹೋದವು, ಅಂತರ್ಜಲದ ಮಟ್ಟವೂ ಕುಸಿತು, ಕೆರಗಳನ್ನು ಆಧರಿಸಿದ ಜೀವವೈವಿಧ್ಯವು ನಾಶವಾಯಿತು, ಅನೇಕ ರೋಗಳು ಹುಟ್ಟಿಕೊಂಡವು.
ಸಿರುಗುಪ್ಪ ತಾಲೂಕಿನ ಹೊರವಲಯದಲ್ಲಿ ಪ್ರಗತಿಪರ ರೈತ ಜಗನಮೋಹನ್ ರೆಡ್ಡಿಯವರು ಭತ್ತವನ್ನು ಬೆಳೆಯಲು ಕಾಲುವೇ ನೀರನ್ನು ಅವಲಂಬಿಸಿಕೊಂಡು ಬೆಳೆಯನ್ನು ಬೆಳೆಯುತ್ತಿದ್ದರು, ಕಾಲನುಕ್ರಮೇಣ ಕಾಲುವೇಗೆ ನೀರು ಬಾರದಂತೆಯಾಗಿ ಬೆಳೆ ನಾಶವಾಯಿತು, ಬೆಳೆ ಇಲ್ಲದೆ ಮುನ್ನೇ ಇರದೆ ಪ್ರಾಚೀನ ಕೆರೆ ಕೃಷಿಯನ್ನು ಅವಲೋಕನ ಮಾಡಿಕೊಂಡು ತಮ್ಮ ಸ್ವಂತ ಜಮೀನಿನಲ್ಲಿ ವೈಜ್ಞಾನಿಕ ಪದ್ದತಿಯಲ್ಲಿ 2ಎಕರೆಯ 50ಅಡಿ ಅಳದ ಕೆರೆಯನ್ನು ನಿರ್ಮಿಸಿಕೊಂಡು ಮಳೆ ನೀರು ಮತ್ತು ಇತರೆ ಆಧಾರದ ನೀರನ್ನು ಕೆರೆಯಲ್ಲಿ ಸಂಗ್ರಹಿಸಿಕೊಂಡು ಬೆಳೆಯನ್ನು ಬೆಳೆಯುತ್ತಿದ್ದಾರೆ.
ಭತ್ತಕ್ಕೆ ಬಳಸುವ ಕೆರೆಯ ನೀರು ಆರೋಗ್ಯಕರವಾಗಿ ಉತ್ತಮವಾಗಿರಲು ಮೀನುಸಾಕಣಿಕೆಯಿಂದ ಮಾತ್ರ ಸಾಧ್ಯವೆಂದು ಅರಿತು ಸಣ್ಣ ಪ್ರಮಾಣದಲ್ಲಿ ಆರು ಜಾತಿಯ ಮೀನು ಸಾಕಣಿಕೆ ಪ್ರಾರಂಭಿಸಿದರು, ಇದರಿಂದ ಅನೇಕ ಜಲಾಚಾರಗಳು, ವಿವಿಧ ಪಕ್ಷಿಗಳು ಕೆರೆಯ ಆಶ್ರಯ ಪಡೆದವು, ಜಲಾಚಾರಗಳಿಂದ ನೀರು ಉತ್ತಮವಾಗಿ, ಪಕ್ಷಿಗಳಿಂದ ರೋಗ ತರುವ ಕೀಟಗಳು ನಾಶವಾಗ ತೊಡಗಿದಾಗ ಬೆಳೆಯು ಉತ್ತಮವಾಗಿ ಇಳುವರಿ ಬಂತು.
ಕೆರೆಯಲ್ಲಿ 6ಜಾತಿಯ ಮೀನು ಸಾಕಣಿಕೆ, ಕೆರೆಯ ಸುತ್ತಾ ಇರುವ 5ರಿಂದ7 ಅಡಿ ವಡ್ಡು ಜಾಗವು ವ್ಯರ್ಥವಾಗದಂತೆ 02 ಎರೆಹುಳು ತೊಟ್ಟಿ, ವಿವಿಧ ತಳಿಯ 15 ಮಾವಿನ ಮರಗಳು, 10 ಸಪೋಟ, 30 ಬಾಳೆ, 15 ನುಗ್ಗೆ, 02 ದಾಳಿಂಬೆ, 03 ಪೇರಲ, 01ಮೇಹಂದಿ, 03 ನೇಲ್ಲಿಕಾಯಿ, 02 ಅಂಜುರ, 02 ಸೀತಾಫಲ, 01 ನೆರಳೆ, ಬಾರೆ, 02 ಬೀದಿರು, 01 ಹುಣಸೇ, ಕವಳೆಮರ, 02 ಪಪಾಯಿ, ವಿವಿಧ ಹೂವುಗಳು ಇವುಗಳನ್ನು ಕೆರೆಯ ಯು ಆಕಾರದಲ್ಲಿ ನಾಟಿ ಮಾಡಿ ಸತತವಾಗಿ 5ವರ್ಷಗಳಿಂದ ಕಾಲಕ್ಕನುಗುಣವಾಗಿ ಶೂನ್ಯ ಬಂಡವಾಳದಲ್ಲಿ ಅಧಿಕಾ ಲಾಭವನ್ನು ತೆಗಿಯುತ್ತಿದ್ದಾರೆ.
ಕೆರೆಯಲ್ಲಿ ನೀರು ಕೆರೆಯ ಸುತ್ತ ಮರಗಳು ಇರುವುದರಿಂದ ವಿವಿಧ ಪಕ್ಷಿಗಳು ನೆಲಸಿ ಬೆಳೆಗೆ ಮತ್ತು ಹಣ್ಣಿನ ಮರಗಳಿಗೆ ಕೀಟಾ ಬಾದೆಯನ್ನು ತಪ್ಪಿಸುವುದು ವಿಶೇಷವಾಗಿದೆ. ಇದರಿಂದ ರೈತನು ಉತ್ತಮ ಇಳುವರಿ ಪಡೆಯುತ್ತಿದ್ದಾನೆ.

ಭತ್ತ ಬೆಳೆಯುವಲ್ಲಿ ಹೆಚ್ಚಿನ ಆಸಕ್ತಿ ಕಾಲುವೇ ನೀರು ಆಧಾರವಾಗಿ ಭತ್ತ ಬೆಳೆಯುತ್ತಿರುವಾಗ ಕಳೆದ 8-9ವರ್ಷಗಳ ಹಿಂದೆ ಬಾರಗಾಲದಿಂದಾಗಿ ಬಾಗೇವಾಡಿ ಕಾಲುವೇಗೆ ನೀರು ಇಲ್ಲದೆ ಬೆಳೆಯು ಸಾಧ್ಯವಾಗಲಿಲ್ಲ, ನಮ್ಮ ಜಮೀನಿನಲ್ಲಿ ಕೆರೆಯನ್ನಯ ತೆಗಿಸಿ, ಹಿಂದಿನ ಕೆರೆ ಆಧಾರಿದ ಕೃಷಿಯನ್ನು ಮೈಗೂಡಿಸಿಕೊಂಡು ಭತ್ತವನ್ನು ಬೆಳೆಯಲು ಪ್ರಾರಂಭಿಸಿದೆ, ಕೆರೆ ನೀರು ಕೆಲ ದಿನಗಳ ನಂತರ ಮಾಲಿನ್ಯವಾದವು, ಕೆರೆಯ ನೀರನ್ನು ಒಬ್ಬ ವಿಜ್ಞಾನಿಗೆ ತೋರಿಸಿದಾಗ ಅವರ ಮಾರ್ಗದರ್ಶನದಲ್ಲಿ ಕೆರೆಗೆ ಮೀನುಗಳನ್ನು ಸಾಕಣಿಕೆ ಮಾಡಿದಾಗ ನೀರು ಆರೋಗ್ಯವಾಗಿ ಬೆಳೆಗೆ ಉತ್ತಮವಾದವು, ಕಾಲಿರುವ ಜಾಗದಲ್ಲಿ ಏನಾದರು ಮಾಡಬೇಕೆಂದು ಕಾಲಕ್ಕನುಗುಣವಾಗಿ ದೊರೆಯುವ ಹಣ್ಣಗಳ ಸಸಿಗಳನ್ನು ನಾಟಿ ಮಾಡಿ, ಜತೆಗೆ ಮನೆಗೆ ಅವಶ್ಯಕವಿರುವ ತರಕಾರಿಗಳು, ಹೂವುಗಳು ಬೆಳೆಯಲು ಪ್ರಾರಂಭಿಸಿದಾಗ ನಮಗೆ ಹೆಚ್ಚಾಗಿ ಉಳಿದ ಫಲವನ್ನು ಕೆರೆಗೆ ಹಾಕುವುದರಿಂದ ನಿರ್ಸಗದತ್ತವಾಗಿ ಮೀನುಗಳು ಬೆಳೆಯಲು ಪ್ರಾರಂಭಿಸಿದವು, ಸಾವಯವದಲ್ಲಿ ಬೆಳೆದ ತರಕಾರಿ, ಹಣ್ಣುಗಳು, ಮೀನುಗಳು ಬೆಳೆದು ತಿನ್ನುತ್ತಿದ್ದೆವೆ, ಖರ್ಚುವೆಚ್ಚವಿಲ್ಲದೆ ನಿಶ್ಚಿತ ಆದಾಯವು ಬರುವ ಕೃಷಿ ಚಟುವಟಿಕೆಯಿಂದ ಇಂತಹ ಕರೋನಾ ಸಂದರ್ಭದಲ್ಲಿ ನಮ್ಮ ಜಮೀನಿನಲ್ಲಿ ಶುದ್ದ ಆಮ್ಲಜನಕದೊಂದಿಗೆ ಸಂತೋಷವಾಗಿದೆ ಮತ್ತು ಆರೋಗ್ಯವಾಗಿದ್ದವೆ.
ಜಗನ್‍ಮೋಹನ ರೆಡ್ಡಿ, ಪ್ರಗತಿ ಪರ ರೈತ ಸಿರುಗುಪ್ಪ,
ಹೆಚ್ಚು ಜಮೀನು ಇರುವ ರೈತರು ಒಂದು ಭಾಗದಲ್ಲಿ ಕರೆಯನ್ನು ನಿರ್ಮಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡುವುದರಿಂದ ಅಂತರ್ಜಲ ಹೆಚ್ಚುವುದರೊಂದಿಗೆ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರನ್ನು ಹರಿಸಿಕೊಳ್ಳು ಸಾಧ್ಯವಾಗುತ್ತದೆ. ಬೆಳೆ ನಷ್ಟವನ್ನು ತಡೆಯಬಹುದು.
ಎಂ.ಎ.ಬಸವಣ್ಣೆಪ್ಪ, ಕೃಷಿ ತಜ್ಞರು, ಕೃ.ಸಂ.ಕೇಂ. ಸಿರುಗುಪ್ಪ
ರೈತರು ಬರಿ ಭತ್ತ ಬೆಳೆಯನ್ನು ಬೆಳೆಯದೆ ಜಮೀನಿನ ಬದುಗಳು ದೊಡ್ಡದಾಗಿ ನಿರ್ಮಿಸಿಕೊಂಡು ಆ ಬದುವಿನಲ್ಲಿ ಮನೆಗೆ ಅವಶ್ಯಕತೆ ಇರುವ ತರಕಾರಿ, ಹಣ್ಣುಗಳನ್ನು ಬೆಳೆಯುವುದರಿಂದ ಆದಾಯವು ಉಳಿಸಿದಂತಾಗುತ್ತದೆ, ಖರ್ಚು ಕಡಿಮೆ ಆದಾಯ ಹೆಚ್ಚಾಗುತ್ತದೆ.
ವಿಶ್ವನಾಥ, ಹಿರಿಯ ಸಹಾಯಕ ನಿದೇರ್ಶಕ, ತೋಟಗಾರಿಕೆ ಇಲಾಖೆ, ಸಿರುಗುಪ್ಪ
ನಮ್ಮ ತಾಲೂಕಿನ ಸುತ್ತ ನೀರಾವರಿರುವುದರಿಂದ ಭತ್ತವನ್ನು ಬಿಟ್ಟು ಬೇರ ಬೆಳೆಯನ್ನು ಬೆಳೆಯುವಲ್ಲಿ ರೈತರು ಆಸಕ್ತಿ ತೋರುತ್ತಿಲ್ಲ, ಭತ್ತ ಕಟಾವು ನಂತರ ಜಮೀನಿಗೆ ಮುಖಮಾಡದೆಲ್ಲ, ಇಂತಹ ಕಠಿಣ ಸಮಯದಲ್ಲಿ ಜಮೀನಿನ ಕೆರೆಯ ಸುತ್ತಾ ಶೂನ್ಯ ಬಂಡವಾಳದಲ್ಲಿ ನಿಶ್ಚಿತ ಆದಾಯ ಮಾಡುವುದು ಇನ್ನೊಬ್ಬ ರೈತರಿಗೆ ಮಾದರಿಯಾಗಿದೆ.
ನಜೀರ್ ಅಹ್ಮದ್, ಸಹಯಕ ನಿದೇರ್ಶಕರು, ಕೃಷಿ ಇಲಾಖೆ , ಸಿರುಗುಪ್ಪ.