ಕೆರೆಯಲ್ಲಿ ಶವ ಪತ್ತೆ; ಕೊಲೆ ಶಂಕೆ

ಬೆಂಗಳೂರು,ಜ.12-ಕೆ.ಆರ್ ಪುರ ಸಮೀಪದ ಆವಲಹಳ್ಳಿ ಎಲೆ ಮರಿಯಪ್ಪ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ರುಂಡ, ಕೈ-ಕಾಲು ಸೇರಿದಂತೆ ದೇಹದ ನಾನಾ ಭಾಗಗಳು ಕತ್ತರಿಸಿ ಶವವನ್ನು ತಂದು ಕೆರೆಗೆ ಎಸೆಯಲಾಗಿದೆ.
ಸ್ಥಳೀಯರು ಮಾಹಿತಿ ನೀಡಿದ ತಕ್ಷಣವೇ , ಸ್ಥಳಕ್ಕಾಗಮಿಸಿದ ಅವಲಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್​​​​ಪಿ ರವಿ ಡಿ. ಚನ್ನಣ್ಣವರ್​ ಪರಿಶೀಲನೆ ನಡೆಸಿ ಮಾತನಾಡಿ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬೇರೆಡೆ ಕೊಲೆ ಮಾಡಿ ನಿನ್ನೆ ರಾತ್ರಿ ಕೆರೆಗೆ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಚುರುಕುಗೊಳಿಸಿಲಾಗಿದೆ.
ಕೃತ್ಯದ ಪತ್ತೆಗೆ 4 ತಂಡಗಳನ್ನು ರಚಿಸಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದಿದ್ದಾರೆ.