ಕೆರೆಯಲ್ಲಿ ಲೇಔಟ್ ನಿರ್ಮಾಣ : ಕ್ರಮಕ್ಕೆ ರಾಮಣ್ಣ ಆಗ್ರಹ

ರಾಯಚೂರು,ಸೆ.೧೩- ತಾಲೂಕಿನ ರಾಯಚೂರು ಹೋಬಳಿಯ ಯಕ್ಲಾಸಪುರ ಗ್ರಾಮದ ಪಟ್ಟಾ ಜಮೀನು ಸರ್ವೆ ನಂ ೩ ರಲ್ಲಿ ಕೆರೆ ಇದ್ದು,ಈ ಕೆರೆಯಲ್ಲಿ ಲೇಔಟ್ ಗಳನ್ನು ಮಾಡಿ ಲಕ್ಷಾನುಗಟ್ಟಲೆಗೆ ಮಾರಾಟ ಮಾಡುತ್ತಿದ್ದು,ಕ್ರಮ ಕೈಗೊಳ್ಳಬೇಕು ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯಾಧ್ಯಕ್ಷ ರಾಮಣ್ಣ ಆರ್.ಹೆಚ್.ಜೆ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸರ್ವೆ ನಂಬರ್ ೧,೨,೩,೧೦,೧೧/೧,೧೧/೩,೧೭೩,೧೭೪/೨,೨೯೮/೧,೨೯೯ ಹಾಗೂ ಒಟ್ಟು ೩೯೬ ಒಟ್ಟು ವಿಸ್ತೀರ್ಣ ೧೦೫-೨೩ ಗಂಟೆ ಇದೆ.ಕರ್ನಾಟಕ ಭೂ ಸುಧಾರಣೆ ಕಾಯ್ದೆ ಕಲಂ ೬೩ ಉಪಕಲಂ ೧೦ ರಂತೆ ಮೂಲತ ಭೂ ಹಿಡುವಳಿದಾರ ದಿ.ಬಸನಗೌಡ ಅವರು ಕಾನೂನು ಉಲ್ಲಘನೆ ಮಾಡಿದ್ದಾರೆ.ಸದರಿ ಭೂ ಸುಧಾರಣೆ ಕಾಯ್ದೆ ಜಾರಿಯಾದ ಮೇಲೆ ಸದರಿ ಬಸನಗೌಡ ಅವರು ಅರ್ಜಿ ನಮೂನೆ ೧೧ ನ್ನು ಸಲ್ಲಿಸದೆ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸದರಿ ಜಮೀನಿನ ಒಟ್ಟು ವಿಸ್ತೀರ್ಣ ೧೦೫-೨೩ ಗಂಟೆಯನ್ನು ಭೂ ಸುಧಾರಣೆ ಕಾಯ್ದೆ ಪ್ರಕಾರ ಹೆಚ್ಚುವರಿ ಜಮಿನೆಂದು ಘೋಷಣೆ ಮಾಡಿ ಭೂ ರಹಿತ ಬಡವರಿಗೆ ಹಂಚಿಕೆ ಮಾಡುವಂತೆ ಲಿಖಿತ ರೂಪದಲ್ಲಿ ಭೂ ನ್ಯಾಯ ಮಂಡಳಿಯ ಅಧ್ಯಕ್ಷ ವಿಭಾಗೀಯ ಆಯುಕ್ತರು ರಾಯಚೂರು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಗಿದೆ.ಆದರೆ ಇವರು ಭೂ ಮಾಲೀಕರ ಪರವಾಗಿದ್ದು,ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ.ಆದ್ದರಿಂದ ದಿನಗಳಲ್ಲಿ ಪಕ್ಷದಿಂದ ಸಹಾಯಕ ಆಯುಕ್ತರ ವಿರುದ್ದ ಹಂತ ಹಂತವಾಗಿ ಚಳುವಳಿಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಭೀಮಣ್ಣ ಮಹಾಲಿಂಗಪ್ಪ,ಸಿಮೋನ್ ಇದ್ದರು.