ಕೆರೆಯಲ್ಲಿ ಮುಳುಗಿ ಯುವಕನ ಸಾವು


ಹುಬ್ಬಳ್ಳಿ,ನ.30: ಪೂಜೆಗೆಂದು ಕೆರೆಯಲ್ಲಿ ಈಜುತ್ತ ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಗರದ ಶ್ರೀ ಸಿದ್ದಾರೂಢಮಠದ ಆರಣದಲ್ಲಿರುವ ಕೆರೆಯಲ್ಲಿ ಸಂಭವಿಸಿದೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕಲ್ಲೂರಿನ ಉಮೇಶಪ್ಪ ಜಾಲಿಹಾಳ (22) ಎಂಬಾತನೇ ಸಾವನ್ನಪ್ಪಿದ ಯುವಕ.
ಪೂಜೆಗೆಂದು ಕೆರೆಯಲ್ಲಿ ಈಜುತ್ತ ಹೋದ ಈತ ನೀರಿನಲ್ಲಿ ಮುಳುಗಿ ಮೃತಪಟ್ಟನೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಹಾಗೂ ರಕ್ಷಣಾ ತಂಡ ಸಿಬ್ಬಂದಿ ಮೃತ ದೇಹವನ್ನು ಹೊರತೆಗೆದಿದ್ದಾರೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಗಳು ಭೇಟಿ ನೀಡಿ ಮುಂದಿನ ಕ್ರಮ ಕೈಕೊಂಡಿದ್ದಾರೆ.