
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಏ.23: ಕೆರೆಯಲ್ಲಿ ಎತ್ತುಗಳನ್ನು ಮೈ ತೊಳೆಯಲು ಹೋದಾಗ ಬಂಡಿ ಸಮೇತ ಎತ್ತುಗಳು ಗುಂಡಿಗೆ ಬಿದ್ದು ಎರಡು ಎತ್ತುಗಳು ಮೃತಪಟ್ಟು, ರೈತ ಅಸ್ವಸ್ಥಗೊಂಡ ಘಟನೆ ಮರಿಯಮ್ಮನಹಳ್ಳಿ ಹೋಬಳಿಯ ಚಿಲಕನಹಟ್ಟಿಯ ಮಾರ್ಗದಯ್ಯನ ಕೆರೆಯಲ್ಲಿ ಜರುಗಿದೆ.
ಹಾರುವನಹಳ್ಳಿ ಗ್ರಾಮದ ರೈತ ಹನುಮಂತಪ್ಪ ಎತ್ತುಗಳನ್ನು ತೊಳೆಯಲು ಬಂಡಿ ಸಮೇತ ಕೆರೆಗೆ ಹೋದಾಗ ಎತ್ತುಗಳು ಬೆದರಿ ಗುಂಡಿಗೆ ಬಿದ್ದಿವೆ. ಬಂಡಿಗೆ ಎತ್ತುಗಳನ್ನು ಕಟ್ಟಿದ್ದರಿಂದ ಅವುಗಳು ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿವೆ. ಹನುಮಂತಪ್ಪನು ನೀರಲ್ಲಿ ಮುಳುಗಿದ್ದರಿಂದ ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.