ಕೆರೆಯಲ್ಲಿ ಮುಳಗಿ ಯುವಕ ಸಾವು

ರಾಯಚೂರು, ಏ.೨೮- ಈಜಲು ಹೋದ ಯುವಕನೊಬ್ಬ ಕರೆಯಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ತಾಲೂಕಿನ ವಡ್ಲೂರು ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿ ವಿಠಲ್ (೨೩) ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಸಂಪರ್ಕಕ್ಕೆ ಬೇಕಾದ ಮೊರಂ ಸಲುವಾಗಿ ೭೦ ಅಡಿ ಅಂತರದಲ್ಲಿ ಬಗೆದ ಕೆರೆಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿದ್ದೇನೆ ಎಂದು ಗ್ರಾಮಸ್ಥರು ದೂರಿದರು.
ಗುರುವಾರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಈಜಲೆಂದು ಕೆರೆಯಲ್ಲಿ ಇಳಿದಿದ್ದರು. ಈ ಸಂದರ್ಭ ನೀರಿನ ಸೆಳೆತಕ್ಕೆ ಸಿಕ್ಕು, ಈಜುಲು ಬಾರದೇ ಮುಳುಗಿ ಮೃತಪಟ್ಟರು ಎನ್ನಲಾಗಿದೆ.
ಮೃತ ಯುವಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜೊತೆ ಜೇಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ರಾಷ್ಟ್ರಿಯ ಹೆದ್ದಾರಿ ರಸ್ತೆ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದ್ದು ಮುನ್ನೆಚ್ಚರಕ್ಕಾಗಿ ಸೂಚನ ಫಲಕ ಅಳವಡಿಸಿಲ್ಲ ಪ್ರಾಧಿಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಶವ ಪತ್ತೆ ಹಚ್ಚಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.