ಕೆರೆಯಲ್ಲಿ ಈಜಲು‌ ಹೋಗಿ ಮುಳುಗಿ ಮೂವರು ಸಾವು

ಹಾವೇರಿ,ಏ.4-ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ ನಡೆದಿದೆ.
ಮಂತಗಿ ಗ್ರಾಮದ ಅಖ್ತರ್ ರಜಾ ಯಳವಟ್ಟಿ (16), ಅಹ್ಮದ ರಜಾ ಅಂಚಿ (16) ಮತ್ತು ಸಾಹಿಲ್ ಡೊಂಗ್ರಿ (17) ಮೃತ ಬಾಲಕರಾಗಿದ್ದಾರೆ.
ಮೂವರು ಸೇರಿಕೊಂಡು ಕೆರೆಗೆ ಈಜಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ. ಸದ್ಯ ಮೂವರು ಬಾಲಕರ ಮೃತದೇಹಗಳನ್ನು ಸ್ಥಳೀಯರು ನೀರಿನಿಂದ ಹೊರತೆಗೆದಿದ್ದಾರೆ.
ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.