ಕೆರೆಯಂತಾದ ಗದ್ದೆ, ನೀರಿನಲ್ಲಿ ಮುಳುಗಿದ ಭತ್ತ, ಲಕ್ಷಾಂತರೂಪಾಯಿ ನಷ್ಟ

ಮಾನ್ವಿ.ನ.೨೧-ತಾಲೂಕಿನ ಬ್ಯಾಗವಾಟ ಗ್ರಾಮದ ರೈತ ಮುತ್ತಪ್ಪ ತಂದೆ ಅಮರಪ್ಪ ಬೆಳೆದ ೩ ಎಕರೆ ಭತ್ತವೂ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಭಾರದಂತಾಗಿದೆ.
ನಿರಂತರವಾಗಿ ೧೦ ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ಬೆಳೆದ ಭತ್ತವೂ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ಸುಮಾರು ಲಕ್ಷಾಂತರ ರೂಪಾಯಿಗಳು ನಷ್ಟ ಅನುಭವಿಸುವಂತಾಗಿದೆ.
ಸಾಲಶೂಲ ಮಾಡಿ ೬ ತಿಂಗಳಿಂದ ನಿರಂತರವಾಗಿ ಬೆಳೆದ ಬೆಳೆಯೂ ರಾತ್ರಿ ಮುಗಿಯುವ ವರಗೆ ಇಂತಹ ಅನಾಹುತವಾಗಿ ಸುಮಾರು ೪ ರಿಂದ ೫ ಲಕ್ಷ ರೂಪಾಯಿಗಳು ನಷ್ಟವಾಗಿದೆ.
ನೊಡುವುದಕ್ಕೆ ಇದು ಗದ್ದೆಯೊ ಅಥವಾ ಕೆರೆಯೊ ಎನ್ನುವಾಗಿ ನೀರು ಗದ್ದೆಯಲ್ಲಿ ನಿರಂತರವಾಗಿ ಅರಿಯುತ್ತಿದೆ ಇದರಿಂದ ಮೂರು ಎಕರೆಯಲ್ಲಿ ಬೆಳೆದ ಭತ್ತವೂ ಕಾಣದಂತೆ ಸುಮಾರು ೪ರಿಂದ ೬ ಅಡಿ ನೀರು ಗದ್ದೆಯೊಳಗೆ ನುಗ್ಗಿದ್ದು ಬೆಳೆದ ಬೆಳೆಯೂ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ.ಅಲ್ಲದೆ ರೈತ ಕಣ್ಣಿರಿನಲ್ಲಿ ಕೈ ತೊಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಅಧಿಕಾರಿಗಳಿಗೆ ಮತ್ತು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಇದರ ಮಾಹಿತಿ ಕೊಟ್ಟಿದ್ದು ಬೇಟಿ ನೀಡುವುದಾಗಿ ತಿಳಿಸಿದ್ದಾರೆ ಸರಕಾರಕ್ಕೆ ಒತ್ತಾಯ ಮಾಡಿ ಪರಿಹಾರ ಕೊಡುವುದಾಗಿ ಹೇಳಿದ್ದಾರೆ.