ಕೆರೆಬೂದೂರು : ಸಿಮೆಂಟ್ ಲಾರಿ ಪಲ್ಟಿ

ರಾಯಚೂರು.ನ.೨೧- ರಾಷ್ಟ್ರೀಯ ಹೆದ್ದಾರಿ ೧೬೭ ರ ಕೆರೆಬೂದೂರು ಗ್ರಾಮದ ಹತ್ತಿರ ಸಿಮೆಂಟ್ ಲಾರಿಯೊಂದು ಉರುಳಿ ಬಿದ್ದ ಘಟನೆ ನಡೆದಿದೆ.
ನಿನ್ನೆ ರಾತ್ರಿ ಸೇಡಂನಿಂದ ಹೊರಟ್ಟಿದ್ದ ಸಿಮೆಂಟ್ ಲಾರಿ ಇಂದು ಸಂಜೆ ವೇಳೆಗೆ ಆಂಧ್ರದ ಇಂದೂಪೂರಿಗೆ ಸೇರಬೇಕಾಗಿತ್ತು. ಆದರೆ, ನಿನ್ನೆ ರಾತ್ರಿ ಒಂದು ಘಂಟೆಗೆ ರಸ್ತೆಯ ಪಕ್ಕದಲ್ಲಿ ಪಲ್ಟಿಯಾಗಿದೆ. ಅದೃಷ್ಟಶವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ. ಚಾಲಕನಿಗೆ ಕುತ್ತಿಗೆ ಭಾಗದಲ್ಲಿ ಅಲ್ಪಪ್ರಮಾಣದ ಪೆಟ್ಟು ಬಿದ್ದಿದೆ.