ಕೆರೆತುಂಬಿಸಿದ ಸಂಸದ ರಮೇಶ ಜಿಗಜಿಣಗಿಯವರಿಗೆ ವಿವಿಧ ಗ್ರಾಮಗಳ ರೈತರಿಂದ ಸನ್ಮಾನ

ಇಂಡಿ: ನ.15: ತಾಲೂಕಿನ ಕೋಟ್ನಾಳ ,ಕ್ಯಾತನಕೇರಿ,ಲಿಂಗದಳ್ಳಿ, ಅಥರ್ಗಾ, ರಾಜನಾಳ, ದೊಡ್ಡಿ, ಬೋಳೆಗಾಂವ್ ,ಹಂಜಗಿ, ನಿಂಬಾಳ ತಡವಲಗಾ ಮುಂತಾದ ಗ್ರಾಮಗಳಿಗೆ ಜನ ಜಾನುವಾರುಗಳು ಸೇರಿದಂತೆ ಕುಡಿಯುವ ನೀರಿನ ಸಮಸ್ಯಯಿಂದ ಸಾಕಷ್ಟು ಈ ಭಾಗದ ರೈತಾಪಿ ವರ್ಗ ತೊಂದರೆ ಅನುಭವಿಸುತ್ತಿದ್ದರು. ಕೆರೆಗಳು ತುಂಬಿರುವುದರಿಂದ ಸಂತಸ ತಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ತಾಲೂಕಿನ ಕೋಟ್ನಾಳ ,ಕ್ಯಾತ ತನಕೇರಿ,ಲಿಂಗದಳ್ಳಿ, ಅಥರ್ಗಾ, ರಾಜನಾಳ, ದೊಡ್ಡಿ, ಬೋಳೆಗಾಂವ್ ,ಹಂಜಗಿ, ನಿಂಬಾಳ ತಡವಲಗಾ ಮುಂತಾದ ಗ್ರಾಮಗಳಿಂದ ಆಗಮಿಸಿದ ರೈತರು ಕೆರೆತುಂಬಿರುವುದರಿಂದ ಸಂಸದ ರಮೇಶ ಜಿಗಜಿಣಗಿಯವರಿಗೆ ಗ್ರಾಮಸ್ಥರು ಶಾಲು ಹೋದಿಸಿ ಸನ್ಮಾನಿಸಿದ ನಂತರ ಮಾತನಾಡಿದ ಅವರು ಈ ಭಾಗ ಸಮೃದ್ದಿಯಾಗಬೇಕು ಎಂಬುದು ಬಹುದಿನಗಳ ನನ್ನ ಕನಸು ಜೈ ಜವಾನ್ ಜೈ ಕಿಸಾನ ರೈತಹಾಗೂ ಸೈನಿಕ ಈ ದೇಶದ ಬೆನ್ನೇಲುಬು ರೈತ ನಕ್ಕರೆ ಸ್ವರ್ಗ ಅತರೆ ನರಕ ಎಂಬ ವಿಚಾಧಾರೆಯಿಂದ ರೈತರ ಬಾಳು ಸುಖ ಸಮೃದ್ದಿಯಾಗಲಿ ಎಂದು ತಾಲೂಕಿನ ವಿವಿಧ ಗ್ರಾಮಗಳಿಗೆ ಕರೆ ತುಂಬುವ ಯೋಜನೆಗೆ 110 ಕೋಟಿ ರೂ ದಲ್ಲಿ ಕೆರೆಗಳನ್ನು ತುಂಬಿಸಲಾಗಿದೆ. ಕೆರೆಗಳು ತುಂಬಿಸುವದರಿಂದ ಭೂಮಿಯಲ್ಲಿ ನೀರು ಅಂರ್ಜಲಮಟ್ಟ ಹೆಚ್ಚಾಗಿ ರೈತರ ಬೋರವೇಲ್‍ಗಳು, ತೆರೆದ ಭಾವಿಗಳು ತುಂಬುತ್ತವೆ ಇದರಿಂದ ರೈತರಿಗೆ ಅನುಕೂಲವಾಗಿದೆ.

ಕಳೆದ ಕ್ಯಾಬಿನೇಟ್‍ನಲ್ಲಿ ಪಾಸಾಗಿದ್ದು ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಇವರು ರೈತರ ಮೇಲಿನ ಕಾಳಜೀಯಿಂದ ತಾಲೂಕಿನ ಹೋರ್ತಿ ಭಾಗದ ಶ್ರೀರೇವಣಸಿದ್ದೇಶ್ವರ ಎತನಿರಾವರಿ ಯೋಜನೆ ಕಾಯಕಲ್ಪ ನೀಡಿದ್ದಾರೆ. ಟೆಂಡರ್ ಪ್ರಕ್ರೀಯೇ ಯಲ್ಲಿದೆ. ಈ ಯೋಜಯಿಂದ ಸಂರ್ಪೂಣ ನೀರಾವರಿಯಾಗಿ ರೈತರ ಬಾಳಿನಲ್ಲಿ ನವ ಚೇತನ್ಯ ತುಂಬಲಿದೆ. ಭಾರತ ವಿಶ್ವದಲ್ಲಿಯೇ ಬಲಾಢ್ಯೆದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸುಭದ್ರ ಸರಕಾರದ ಕನಸು ಕಂಡಿದ್ದಾರೆ. ಕೇಂದ್ರ,ರಾಜ್ಯ ಸರಕಾರಗಳು ಜಂಟಿಯಾಗಿ ಬಡವರ,ದೀನ ದುರ್ಬಲರ ಹಿಂದುಳಿದವರ ಪರವಾಗಿ ಅನೇಕ ಯೋಜನೆಗಳು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಕೂಡಾ ಇಡೀ ದೇಶದ ಬಿಜೆಪಿ ಮಯವಾಗುವುದರಲ್ಲಿ ಯಾವದೇ ಸಂದೇಹವಿಲ್ಲ.ನನ್ನ ಸುಧಿರ್ಘ ರಾಜಕೀಯ ಜೀವನದಲ್ಲಿ ವಿಜಯಪೂರ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ತಂದು ಲೋಕೋಪರ್ಣೆಗೋಳಿಸಿರುವೆ ಆದರೆ ಎಲ್ಲಿಯೂ ಗುದ್ದಲಿ ಪೂಜ್ಯ ,ಭೂಮಿ ಪೂಜೆ ಎಂದು ಹೋಗಿಲ್ಲ,ಹೇಳಿಕೊಂಡಿಲ್ಲ. ಜನ ಸೇವೆಕನಾಗಿ ದುಡಿದಿರುವೆ ನಿಮ್ಮೇಲ್ಲರ ಆರ್ಶೀವಾದ ಸದಾ ನನ್ನಮೇಲ್ಲಿರಲಿ ಎಂದು ವಿನಂತಿಸಿದರು.

ಪ್ರವೀಣ ಮೇತ್ರಿ, ಭೀಮು ಸಾಹುಕಾರ ಚವಡಿಹಾಳ, ಕಾಂತು ಸಾಹುಕಾರ ಕಟ್ಟಿ, ಅರವಿಂದ ಗಿಡಗಂಟ್ಟಿ, ಅಪ್ಪು ರೂಗಿ, ಶೇಖಯ್ಯಾಸ್ವಾಮಿ ಹಿರೇಮಠ, ಅಣ್ಣಪ್ಪಗೌಡ ಪಾಟೀಲ, ಬಸುಸಾಹುಕಾರ ಇಂಗಳೇಶ್ವರ, ಶಿವಯ್ಯಾ ಹಿರೇಮಠ, ಕುಲಪ್ಪ ಹಿಟ್ನಳ್ಳಿ, ನಾಗುಗೌಡ ಪಾಟೀಲ, ಅಶೋಕಗೌಡ ಬಿರಾದಾರ, ಶ್ರೀಶೈಲ ನಾಗಣಸೂರ, ಈರಪ್ಪ ಕೂಡಗಿ, ಸುನೀಲ ರಬಶೇಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 5ನೂರಕ್ಕಿಂತ ಹೆಚ್ಚು ರೈತರು ,ಮುಖಂಡರು ಇದ್ದರು.