ಕೆರೆಗೆ ಹಾರಿ ಯುವಕ ಆತ್ಮಹತ್ಯೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.20: ಪಟ್ಟಣದ ಕೆರೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಟ್ಟಣದ ಮನ್ಸೂರ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವಕನು ಮನೆಯಲ್ಲಿ ಖರ್ಚಿಗೆ  ಹಣ ಕೇಳಿದ್ದನು ಮನೆಯವರು ನೀನು ಮುಂದಿನ ವಿದ್ಯಾಭ್ಯಾಸ ಮಾಡಲು ಧಾರವಾಡಕ್ಕೆ ಹೋದರೆ ಹಣ ಕೊಡುವುದಾಗಿ ಹೇಳಿದ್ದರಂತೆ, ಅಂದಿನಿಂದ ಯುವಕ ಮನೆ ಬಿಟ್ಟು ಹೋಗಿದ್ದಾನೆ, ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಆ ಯುವಕನ ದೇಹ ಪತ್ತೆಯಾಗಿದೆ, ಈ ಸಾವಿಗೆ ನಿಕರವಾದ ಮಾಹಿತಿ ತಿಳಿದು ಬಂದಿಲ್ಲ, ಈ ಪ್ರಕರಣ ಠಾಣೆಯಲ್ಲಿ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪಿ ಎಸ್ ಐ ವೆಂಕಟೇಶ್  ತಿಳಿಸಿದರು.