ಕೆರೆಗೆ ಈಜಲು ಹೋದ ಯುವಕರು ನೀರುಪಾಲು

ಮಂಡ್ಯ,ಜೂ.11-ಕೆರೆಗೆ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೆಆರ್ ಪೇಟೆ ತಾಲೂಕಿನ ಮೋದೂರು ಗ್ರಾಮದಲ್ಲಿ ನಡೆದಿದೆ.
ಮೋದೂರು ಗ್ರಾಮದ ರಮೇಶ್ ಅವರ ಪುತ್ರ ರಾಜು(19) ಹಾಗೂ ಪ್ರದೀಪ್ (21) ಮೃತ ಯುವಕರಾಗಿದ್ದಾರೆ. ಇಬ್ಬರೂ ಕೆರೆಯ ಕಡೆ ಹೋಗುತ್ತೇವೆ ಎಂದು ಹೇಳಿ ಮನೆಯಿಂದ ಹೋಗಿದ್ದು, ಬಳಿಕ ಕೆರೆಯ ಬಳಿ ಈಜಲು ಮುಂದಾಗಿದ್ದಾರೆ.
ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ಎರಡೂ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.