ಮದ್ದೂರು: ಏ.16:- ಜಮೀನಿನ ಬಳಿ ಜಾನುವಾರು ಮೇಯಿಸಲು ತೆರಳಿದ್ದ ವೇಳೆ ಕೆರೆಗೆ ಈಜಲು ತೆರಳಿದ್ದ ವೇಳೆ ಇಬ್ಬರು ಮಕ್ಕಳು ಸೇರಿದಂತೆ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಜರುಗಿದೆ.
ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಮುತ್ತುರಾಜು ಅವರ ಪತ್ನಿ ಶೈಲಜಾ (30) ಪುತ್ರ ತೇಜಸ್ (11) ಹಾಗೂ ಅದೇ ಗ್ರಾಮದ ಶ್ರೀನಿವಾಸ್ ಎಂಬುವರ ಪುತ್ರ ಯೋಧನ್ (15) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಶನಿವಾರ ಬೆಳಿಗ್ಗೆ ಎಂದಿನಂತೆ ತಮ್ಮ ಜಾನುವಾರುಗಳನ್ನು ಜಮೀನಿನ ಬಳಿ ಮೇಯಿಸಲು ತೆರಳಿದ್ದ ತಾಯಿ ಶೈಲಜಾ ಮತ್ತು ಪುತ್ರ ತೇಜಸ್ ಹಾಗೂ ನೆರೆ ಮನೆ ನಿವಾಸಿ ಯೋಧನ್ ಮದ್ದೂರಮ್ಮನ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಕೆಸರಿಗೆ ಸಿಲುಕಿಕೊಂಡ ಮಕ್ಕಳನ್ನು ರಕ್ಷಿಸಲೆಂದು ತಾನು ಕೆರೆಗೆ ತೆರಳಿದ್ದ ವೇಳೆ ಕೆಸರಿಗೆ ಸಿಲುಕಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ವಳಗೆರೆಹಳ್ಳಿ ಗ್ರಾಮದ ಪ್ರಮೀಳಾವೀರಪ್ಪ ಪ್ರೌಢಶಾಲೆಯ ತೇಜಸ್ 8 ತರಗತಿ ವಿದ್ಯಾರ್ಥಿ ಮತ್ತು ಯೋಧನ್ 9ನೇ ತರಗತಿ ಉತ್ತೀರ್ಣಗೊಂಡು 10 ನೇ ತರಗತಿಗೆ ತೆರಳಬೇಕಾದ ವಿದ್ಯಾರ್ಥಿಗಳಾಗಿದ್ದು ಕೆಸರಿಗೆ ಸಿಲುಕಿದ ಮಕ್ಕಳ ಶವವನ್ನು ಸ್ಥಳೀಯ ಸಾರ್ವಜನಿಕರು ಮೇಲಕೆ ಸಾಗಿಸಿದರಲ್ಲದೇ ಮೃತ ಮಕ್ಕಳ ಸಂಬಂಧಿಕರ ಹಾಗೂ ಸ್ಥಳೀಯ ನಿವಾಸಿಗಳ ಆಕ್ರಂದನ ಎಂತಹವರ ಮನ ಕಲಕುವಂತಿತ್ತು.