ಕೆರೆಗುಡಿಹಳ್ಳಿ ದೇವರ ದೇವಸ್ಥಾನಗಳಿಂದ ಧಾರ್ಮಿಕ, ಶೈಕ್ಷಣಿಕ ಸೇವೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ :ಮೇ,4- ತಾಲೂಕಿನ ಕೆರೆಗುಡಿಹಳ್ಳಿ ದೇವರ ದೇವಸ್ಥಾನಗಳು ಧಾರ್ಮಿಕ ಚಿಂತನೆಗಳ ಮೂಲಕ ಮಾನಸಿಕ ನೆಮ್ಮದಿ ನೀಡುವ ಕೇಂದ್ರಗಳಾಗಿದ್ದರೆ, ಶಿಕ್ಷಣ ಹಾಗೂ ಶಾಲೆಗಳು ಬದುಕಿಗೆ ದಾರಿದೀಪವಾಗಿದೆ ಎಂದು ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಗ್ರಾಮದ ಕೊನ್ನಪುರ ಚೌಡಮ್ಮದೇವಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆಯನ್ನು ಮೀರಿ ಎಲ್ಲಾರ ಸಹಕಾರದಿಂದ ನಿರ್ಮಾಣವಾಗುವ ದೇವಸ್ಥಾನ ಭಕ್ತಿಯ ತಾಣವಾಗಳು ಸಾಧ್ಯ. ಜಗತ್ತು ಪ್ರಸಿದ್ಧವಾಗಿರುವ ದೇವಸ್ಥಾನ, ಮಠಮಾನ್ಯಗಳನ್ನು ದಾನ, ಧರ್ಮಗಳಿಂದ ಅಭಿವೃದ್ಧಿ ಪಡಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಕೆರೆಗುಡಿಹಳ್ಳಿ ಗ್ರಾಮದಿಂದ ಹೊರಭಾಗದಲ್ಲಿರುವ ದೇವಸ್ಥಾನಕ್ಕೆ 108 ಕುಂಭಮೇಳದ ಮೂಲಕ ತೆರಳಿದರು. ಡೊಳ್ಳು, ಭಜನೆ, ಸಮೇಳ ಹಾಗೂ ಹಲವು ವಾದ್ಯಗಳು ಮೆರಗು ಹೆಚ್ಚಿಸಿದ್ದವು.
ಬೆಳಿಗ್ಗೆ ಗಂಗೆ ಪೂಜೆ, ಮಂಟಪ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹವಾಚನ, ನಂದಿ ಹಾಗೂ ಪ್ರಮುಖ ದೇವತಾ ಕಳಸ ಸ್ಥಾಪನೆ, ನವಗ್ರಹ ಹೋಮ ನಡೆದವು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕವಿತಾ ವೀರೇಶ್, ವಿ.ತಿಮ್ಮೇಶ್, ವೆಂಕಟೇಶ್, ಸಲಾಂ ಸಾಬ್, ಶಿವಶಂಕರ್, ಮಲ್ಲೇಶ್, ಮಹಾಂತೇಶ್, ಚಂದ್ರಪ್ಪ, ಶಿವಣ್ಣ, ರುದ್ರಾಚಾರಿ, ಮೌನಚಾರಿ, ಅಜ್ಜಯ್ಯ, ವೀರೇಶ್, ಶೇಖರಪ್ಪ, ನಂದೀಶ್, ದತ್ತಾತ್ರೇಯ ಇದ್ದರು.

One attachment • Scanned by Gmail