ಕೆರೆಗಳ ಹೂಳು ಎತ್ತುವ ಕಾರ್ಯ ಪರೀಶಿಲಿಸಿದ ಸಿ.ಎಸ್

ಕೆ.ಆರ್. ಪುರ.ಮಾ.೨೦- ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.
ಕೆರೆಗಳ ಉದ್ದಗಲಕ್ಕೂ ಸಂಚರಿಸಿ ಕೆರೆಗಳ ಅಭಿವೃದ್ದಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ತೆಗೆಯುತ್ತಿರುವ ಹೂಳು ಮತ್ತು ಯೋಜನೆಯ ಬಗ್ಗೆ ಮಾಹಿತಿ ಪಡೆದರು.
ಕೆರೆಯಲ್ಲಿ ಹೂಳು ತೆಗೆದು ಅಭಿವೃದ್ಧಿ ಮಾಡಲು ಕೆರೆಯ ಎರಡು ಅಂಚಿನಲ್ಲಿ ಕೊಳಚೆ ನೀರು ಹರಿದು ಹೋಗಲು ಕಾಲುವೆ ನಿರ್ಮಾಣ ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಕೆರೆ ಅಭಿವೃದ್ಧಿ ನಂತರ ಕೊಳಚೆ ನೀರನ್ನು ಶುದ್ದೀಕರಣ ಮಾಡಿ ಕೆರೆಗೆ ಹಾಯಿಸಲಾಗುತ್ತದೆ ಎಂದು ತಿಳಿಸಿದರು.
ಕೆರೆಗಳಲ್ಲಿ ತೆಗೆಯುತ್ತಿರುವ ಹೂಳನ್ನು ಉಚಿತವಾಗಿ ರೈತರಿಗೆ ನೀಡುವಂತೆ ಕೆರೆಸುತ್ತಮುತ್ತಲಿನ ರೈತರು ಮನವಿ ಮಾಡಿದರು.
ಅಲ್ಲದೆ ಬಪರ್ ಜೊನ್ ನಲ್ಲಿ ತಾತ್ಕಾಲಿಕವಾಗಿ ಸಾಕು ಪ್ರಾಣಿಗಳ ಶೆಡ್ ನಿರ್ಮಿಸಲು ಅವಕಾಶ ಮಾಡಿಕೊಡವಂತೆ.
ಹಾಗೂ ದನಗಳ ಸಾಕಾಣಿಕೆ ಕೆರೆಯ ಕೆಲವು ಕಡೆ ವೆಟ್ ಲ್ಯಾಂಡ್ಸ್ ನೀಡಬೇಕೆಂದು ರೈತರು ಮನವಿ ಮಾಡಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದೆಂದು ಎನ್ ಜಿ.ಟಿ ಅಧಿಕಾರಿಗಳು ತಿಳಿಸಿದರು.