ಕೆರೆಗಳು ರೈತರ ಜೀವನಾಡಿಗಳಿದ್ದಂತೆ: ಸಚಿವ ನಾರಾಯಣಗೌಡ

ಕೆ.ಆರ್.ಪೇಟೆ, ನ.22: ಕೆರೆಗಳು ರೈತರ ಜೀವನಾಡಿಗಳಿದ್ದಂತೆ. ಅವುಗಳ ಅಭಿವೃದ್ದಿಯೇ ನನ್ನ ಗುರಿ.
ಕೆರೆಗಳು ಆಧುನೀಕರಣಗೊಂಡು ನೀರು ಸಂಗ್ರಹವಾಗಿ ತುಂಬಿತುಳುಕುತ್ತಿದ್ದರೆ ಅದನ್ನು ನೋಡುವುದೇ ಒಂದು ಸೊಬಗು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಿಳಿಸಿದರು.
ಅವರು ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಹಾಳಾಗಿದ್ದ ಶೀಳನೆರೆ ಹೋಬಳಿಯ ಸಿಂಧಘಟ್ಟ ಕೆರೆ ಮತ್ತು ಹರಳಹಳ್ಳಿ ಕೆರೆಯ ಕಾಮಗಾರಿಗೆ 1.3 ಕೋಟಿ ವೆಚ್ಚದಲ್ಲಿ ದುರಸ್ಥಿ ಕಾರ್ಯ ಕೈಗೊಂಡಿದ್ದು ಕಾಮಗಾರಿ ಮುಗಿದು ಅವುಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಬಹಳ ವರ್ಷಗಳಿಂದಲೂ ನಮ್ಮ ತಾಲ್ಲೂಕು ಅರೆನೀರಾವರಿಯಾಗಿದ್ದು ಕೆರೆಕಟ್ಟೆಗಳು ತುಂಬಿದರೆ ಉತ್ತಮ ಫಸಲು ಬೆಳೆದು ರೈತರು ನೆಮ್ಮದಿಯಾಗಿ ಇರುತ್ತಾರೆ ಆದರೆ ಕೆಲವು ವರ್ಷಗಳಲ್ಲಿ ಮಳೆ ಕೈಕೊಟ್ಟಾಗ ಕೆರೆಗಳು ತುಂಬುವುದೇ ಇಲ್ಲ ನನ್ನ ಮೊದಲ ಆದ್ಯತೆ ನೀರಾವರಿ ರಸ್ತೆ, ಕುಡಿಯುವ ನೀರು ಇವುಗಳಾಗಿದ್ದು ನನ್ನ ಶಕ್ತಿಮೀರಿ ನನ್ನ ತಾಲ್ಲೂಕಿನ ಕೆರೆಕಟ್ಟೆಗಳ ಅಭಿವೃದ್ದಿ ಮಾಡುತ್ತೇನೆ.
ಈಗಾಗಲೇ ಸಂತೇಬಾಚಹಳ್ಳಿ ಹೋಬಳಿಯ ಕೆರೆಕಟ್ಟೆಗಳನ್ನು ತುಂಬಿಸಲು ಕಾಮಗಾರಿ ಆರಂಭವಾಗಿದ್ದು ಶೀಳನೆರೆ ಮತ್ತು ಬೂಕನಕೆರೆ ಹೋಬಳಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದ್ದು ಹಣ ಕೂಡ ಬಿಡುಗಡೆಯಾಗಿದೆ ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ. ರೈತರು ನೆಮ್ಮದಿಯಿಂದ ಇದ್ದರೆ ಮಾತ್ರ ನಾಡು ಸುಭಿಕ್ಷವಾಗಿರುತ್ತದೆ. ಹಾಗಾಗಿ ರೈತರ ಏಳಿಗೆಗಾಗಿ ಯಾವ ತ್ಯಾಗಕ್ಕಾದರೂ ಸಿದ್ದನಿದ್ದೇನೆ. ಕೆರೆಕಟ್ಟೆಗಳು ತುಂಬಿದರೆ ಅಂತರ್ಜಲ ಹೆಚ್ಚಾಗಿ ಕೊಳವೆಬಾವಿಗಳೂ ಸಹ ಅಭಿವೃದ್ದಿಯಾಗುತ್ತವೆ. ಆಗ ರೈತರು ಉತ್ಕøಷ್ಟವಾದ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂಡ ಅದ್ಯಕ್ಷ ಕೆ.ಶ್ರೀನಿವಾಸ್, ಜಿ.ಪಂ.ಮಾಜಿ ಉಪಾದ್ಯಕ್ಷ ಅಂಬರೀಶ್, ಸೂಪರಿಂಡೆಂಟ್ ಇಂಜಿನಿಯರ್ ಮಂಜುನಥ್, ಎಇಇ ಈರಣ್ಣ ಸಚಿವರ ಆಪ್ತ ಕಾರ್ಯದರ್ಶಿ ದಯಾನಂದ ಸೇರಿದಂತೆ ಗ್ರಾಮದ ಮುಖಂಡರುಗಳು ಹಾಜರಿದ್ದರು.