ಕೆರೆಗಳಿಗೆ ನೀರು ಪೂರೈಕೆಗೆ ಆಗ್ರಹ

ರಾಯಚೂರು, ಏ.೫- ಸಿರವಾರ ತಾಲೂಕಿನ ಕಲ್ಲೂರು ಗ್ರಾ.ಪ ವ್ಯಾಪ್ತಿಯ ಸಾರ್ವಜನಿಕ ಕುಡಿಯುವ ನೀರಿನ ಕೆರೆಗಳಿಗೆ ನೀರನ್ನು ಪೂರೈಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ )
ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸಿರವಾರ ತಾಲೂಕಿನ ಕಲ್ಲೂರು ಗ್ರಾ.ಪ ವ್ಯಾಪ್ತಿಗೆ ಒಳಪಟ್ಟಿರುವ ಕಲ್ಲೂರು,ಹಾಗೂ ಇತರೆ ಕ್ಯಂಪುಗಳಲ್ಲಿ ಇರುವ ಒಟ್ಟು ೧೨ ಸಾರ್ವಜನಿಕ ಕುಡಿಯುವ ನೀರಿನ ಕೆರೆಗಳಲ್ಲಿ ನೀರಿನ ಮಟ್ಟವು ದಿನೇ ದಿನೇ
ಕಡಿಮೆಯಾಗುತ್ತಿವೆ.ಹಾಗೂ ಅತೀ ಕನಿಷ್ಟ ಮಟ್ಟಕ್ಕೆ ಇಳಿದಿರುತ್ತದೇ ಫುಟ್ ವಲ್ವಿಗು ನೀರು ನಿಲುಕದಂತಾಗಿರುತ್ತದೆ ಎಂದು ದೂರಿದರು.
ಇತ್ತೀಚಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು , ನೀರಿನ ಬೇಡಿಕೆ ಕೂಡಾ ಹೆಚ್ಚಾಗುತ್ತಿದೆ.ಈ ನಿಟ್ಟಿನಲ್ಲಿ ಕುಡಿಯುವ ನೀರನ್ನು ಸಂಗ್ರಹಿಸುವುದು ತುಂಬಾ ಅವಶ್ಯಕ ವಾದೆ. ಜಾನುವಾರುಗಳಿಗೂ ಕೂಡ ನೀರಿನ ಅತೀವ ತೊಂದರೆ ಯಾಗಿದ್ದು ಆದ್ದರಿಂದ . ಸಾರ್ವಜನಿಕರ ಮತ್ತು ದನಕರುಗಳ ಕುಡಿಯುವ ನೀರಿನ ಹಿತದೃಷ್ಟಿಯಿಂದ ವಿತರಣಾ ಕಾಲುವ ೯೮ ಮತ್ತು ೯೯ ಗಳಲ್ಲಿ ಎರಡು ದಿನಗಳ ಮಟ್ಟಿಗೆ ಕುಡಿಯುವ ಸಲುವಾಗಿ ನೀರನ್ನು ಹರಿಸಲು ಸಂಭಂಧಪಟ್ಟ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಂತುಕುಮಾರ,ವಿನೋದ ಕುಮಾರ,ತೇಜೇಶ್ ಕುಮಾರ,ಕುಮಾರ,ಮಹೇಂದ್ರ,ಸೇರಿದಂತೆ ಅನೇಕರು ಇದ್ದರು.