ಕೆರೆಕೊಂಡಾಪುರ ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾಧಿಕಾರಿ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ನ.18: ಇಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಗಳು ತಾಲೂಕಿನ ಕೆರೆಕೊಂಡಾಪುರಕ್ಕೆ ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡಲಿದ್ದಾರೆ.
ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾದ ದಿವ್ಯಾ ಪ್ರಭಾರವರು ಇಂದು ಮತ್ತು ನಾಳೆ ಕೆರೆ ಕೊಂಡಾಪುರದಲ್ಲೇ ವಾಸ್ತವ್ಯ ಮಾಡಿ, ಗ್ರಾಮದ ಮೂಲ ಸಮಸ್ಯೆಗಳ ಬಗೆ ಮತ್ತು ಜನರ ಸಮಸ್ಯೆ ಗಳ ಬಗೆ ತಿಳಿದು ಕೊಂಡು ಸ್ಥಳದಲ್ಲಿಯೇ  ಬಗೆಹರಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇಂದು ಬೆಳಿಗ್ಗಿನಿಂದಲೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವುದು ಕಂಡು ಬಂತು.
    ಜಿಲ್ಲಾಧಿಕಾರಿಗಳು ಇಂದು ಉಳಿದುಕೊಳ್ಳಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಇಂದಿರಾಗಾಂಧಿ ವಸತಿ ಶಾಲೆ ವ್ಯವಸ್ಥೆ ಮಾಡಲಾಗಿದೆ.
   ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಯೋಜನೆಯ ಉದೇಶವನ್ನು ಕೆರೆ ಕೊಂಡಾಪುರ ಗ್ರಾಮಸ್ಥರು  ಹೆಚ್ಚಿನ ಸಂಖ್ಯೆಯಲ್ಲಿ   ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ಅಧಿಕಾರಿಗಳ ಮುಂದೆ ವಿವರಿಸಿ ಮನವಿ  ನೀಡುವ ಮೂಲಕ  ಸದುಪಯೋಗ ಪಡೆದುಕೊಳ್ಳಬೇಕಾಗಿದೆ.