ಕೆರೂರ ಪ.ಪಂ. ಉಪಾಧ್ಯಕ್ಷರಿಗೆ ಸನ್ಮಾನ

ಕೆರೂರ,ನ.5- ಪಟ್ಟಣ ಪಂಚಾಯತಿಗೆ ನೂತನವಾಗಿ ಉಪಾದ್ಯಕ್ಷರಾಗಿ ಆಯ್ಕೆಯಾದ ವಿಜಯಕುಮಾರ ಐಹೊಳ್ಳಿ ಹಾಗೂ ಧರ್ಮಪತ್ನಿ ಜಯಶ್ರೀ ಕು ಐಹೊಳ್ಳಿ ಅವರನ್ನು ಶಿವಶಿಂಪಿ ಸಮಾಜದ ಬಂಧುಗಳು ಶ್ರೀ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯಕುಮಾರ, ಪಪಂಗೆ ಮೂರು ವರ್ಷಗಳಿಂದ ಚುನಾಯಿತ ಆಡಳಿತ ಮಂಡಳಿ ಇರದೇ ಆಡಳಿತ ಯಂತ್ರ ಮಂಕಾಗಿತ್ತು. ಈಗ ಅದ್ಯಕ್ಷ ಮತ್ತು ಉಪಾದ್ಯಕ್ಷರ ಆಯ್ಕೆಯಾಗಿದ್ದು ಅಭಿವೃದ್ದಿ ಕಾರ್ಯಗಳನ್ನು ಪಕ್ಷಬೇದ ಮರೆತು ಕೈಗೊಳ್ಳುವದಾಗಿ ತಿಳಿಸಿದರು. ಪಟ್ಟಣದ ಎಲ್ಲ 20ವಾರ್ಡಗಳ ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡು ಪಟ್ಟಣದ ಮೂಲ ಭೂತ ಸೌಲಭ್ಯಗಳನ್ನು ಶಾಸಕ ಸಿದ್ದರಾಮಯ್ಯನವರ ಗಮನಕ್ಕೆ ತಂದು ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತೇವೆ. ಶುದ್ದ ಕುಡಿಯುವ ನೀರಿನ ಪೂರೈಕೆ ಹಾಗೂ ಇತರೆ ಸಮಸ್ಯೆಗಳನ್ನು ಶೀಘ್ರವೆ ಅದ್ಯಕ್ಷರೊಡಗೂಡಿ ಪರಿಹರಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ದುರೀಣ ಮಹಾಂತೇಶ ಮೆಣಸಗಿ, ಬಿಎನ್ ಬಂತಿ, ಆರ್ ಆರ್ ಶೆಟ್ಟರ, ಬಸವರಾಜ ಕಪಲಿ, ಶಂಕ್ರಪ್ಪ ತಾಳಿಕೋಟಿ, ಹನಮಂತ ಹೊಸಮನಿ, ಮಹಾಂತೇಶ ಐಹೊಳ್ಳಿ, ಈರಣ್ಣ ಹದ್ಲಿ, ಶಶಿಕಲಾ ಚೆನ್ನಿ, ಜ್ಯೋತಿ ಐಹೊಳ್ಳಿ, ಶ್ರೀದೇವಿ ಹದ್ಲಿ, ಭಾರತಿ ಕಪಲಿ, ಅನಸುಯ್ಯಾ ಕಪಲಿ, ಸೇರಿಂದತೆ ಸಮಾಜದ ಬಂದುಗಳು ಉಪಸ್ಥಿತರಿದ್ದರು. ರಾಜೇಶ್ವರಿ ತಾಳಿಕೋಟಿ ನೀರೂಪಿಸಿದರು ಅಕ್ಷತಾ ಚೆನ್ನಿ ವಂಧಿಸಿದರು.