ಕೆರಿಭೋಸಗಾ ಕೆರೆಯಲ್ಲಿ ರಾಷ್ಟ್ರೀಯ ಪಂಚಾಯತ್‍ರಾಜ್ ದಿವಸ್ ಆಚರಣೆ

ಕಲಬುರಗಿ:ಏ.24:ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರಿಭೋಸಗಾ ಕೆರೆಯಲ್ಲಿ ನೆರೇಗಾ ಕೂಲಿ ಕಾರ್ಮಿಕರ ಜೊತೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಬುಧವಾರ ಕೇಕ್ ಕತ್ತರಿಸುವ ಮೂಲಕ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್‍ನ್ನು ಆಚರಿಸಿದರು.

ನಂತರ ಅವರು ಮಾತನಾಡಿ, ಪ್ರಸ್ತುತ ಮೂರು ಹಂತದ ಪಂಚಾಯತ್‍ರಾಜ್ ವ್ಯವಸ್ಥೆಯು ಜಾರಿಯಲ್ಲಿದ್ದು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವ್ಯವಸ್ಥೆ ಜಾರಿಯಲ್ಲಿದೆ. ಎಲ್ಲರೂ ಗ್ರಾಮಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಭಾಗವಹಿಸಿದಾಗ ಮಾತ್ರ ಪಂಚಾಯತ್‍ರಾಜ್ ವ್ಯವಸ್ಥೆ ಜಾರಿಯಾದದ್ದು ಸಾರ್ಥಕವಾಗುತ್ತದೆ ಎಂದು ಗ್ರಾಮಸ್ಥರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ವಿ. ಚಳಗೇರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೈಯದ ಪಟೇಲ್, ಜಿ.ಪಂ. ಸಿಇಓ ಆಪ್ತ ಸಹಾಯಕ ಶರಣು ಅರಳಿಮರ, ಭೀಮಳ್ಳಿ ಗ್ರಾಮ ಪಂಚಾಯತ್‍ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾರತಿ ಮಣೂರೆ, ನರೇಗಾ ಐಇಸಿ ಸಂಯೋಜಕರಾದ ಮೋಸಿನ್ ಖಾನ್, ಸತೀಶ ನಿಲೂರೆ, ತಾಲೂಕ ಸಂಯೋಜಕರು ಮತ್ತು ಗ್ರಾಮ ಪಂಚಾಯತ ಸಿಬ್ಬಂದಿಗಳು ಎನ್‍ಆರ್‍ಎಲ್‍ಎಮ್ ಸಿಬ್ಬದಿಂಗಳು ಹಾಗೂ 267 ಜನ ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.