ಕೆರವಡಿ ಗ್ರಾ.ಪಂ: ಚುನಾವಣಾ ಫಲಿತಾಂಶ ಪ್ರಕಟ

ಬ್ಯಾಡಗಿ,ನ.1: ತಾಲೂಕಿನ ಕೆರವಡಿ ಗ್ರಾಮ ಪಂಚಾಯತಿಯ 17ಸ್ಥಾನಗಳಿಗೆ ಕಳೆದ ಶುಕ್ರವಾರ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯವು ಸೋಮವಾರ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗಿದೆ.
ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳ ವಿವರ ಇಂತಿದೆ.
ಜಯಪ್ಪ.ಎನ್.ಮಾಸಣಗಿ, ರೇಣುಕಾ ಕರಿಯಮ್ಮನಪೂಜಾರ, ವಿನೋದಾ ಅಶೋಕ ಓಲೇಕಾರ.(ಕಳಗೊಂಡ ಗ್ರಾಮದ 3ಸ್ಥಾನಗಳಿಗೆ), ಗಿರಿಜವ್ವ ಚನ್ನಪ್ಪಗೌಡ ಪಾಟೀಲ, ಪೈರೋಜಖಾನ ಬಾಬಾಜಾನ ಬಿಸಲಹಳ್ಳಿ, ದ್ರಾಕ್ಷಾಯಣವ್ವ ಸೋಮಪ್ಪ ಎಲಿಗಾರ, ರಾಜು ಮಹಾದೇವಪ್ಪ ತರೇದಹಳ್ಳಿ, ಜಮಾಲಬಿ ಬಶೀರಸಾಬ ಬಿಸಲಹಳ್ಳಿ, ವಿನಾಯಕ ವೀರಭದ್ರಪ್ಪ ಬ್ಯಾಡಗಿ, ಶಾರದವ್ವ ನಾಗಪ್ಪ ಕರೂರ.(ಕೆರವಡಿ ಗ್ರಾಮದ 8 ಸ್ಥಾನಗಳಿಗೆ), ರೇಣುಕಾ ಮಾಲತೇಶ ಮಾದರ, ಸೋಮಲಿಂಗಪ್ಪ ಶಿವಪುತ್ರಪ್ಪ ಗೌಡ್ರ, ರೂಪಾ ಗುಡ್ಡಪ್ಪ ದೇವಸೂರ, ವೀಣಾ ಶಾಂತಕುಮಾರ ಕಡೂರ, ಶಿದ್ದಪ್ಪ ಹುಚ್ಚಪ್ಪ ಚವಟಿ.(ಚಿನ್ನಿಕಟ್ಟಿ ಗ್ರಾಮದ 5ಸ್ಥಾನಗಳಿಗೆ) ಹಾಗೂ ಮಂಜಪ್ಪ ಶೇಖಪ್ಪ ಹೊನ್ನಾಳಿ.(ತಿಪಲಾಪುರ ಗ್ರಾಮದ 1ಸ್ಥಾನಕ್ಕೆ) ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ ಎಸ್.ಎ.ಪ್ರಸಾದ ತಿಳಿಸಿದ್ದಾರೆ.
ವಿಜಯೋತ್ಸವ:
ಕೆರವಡಿ ಗ್ರಾಮ ಪಂಚಾಯತಿಯ 17ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲಿತ 9ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು, ಕಾಂಗ್ರೆಸ್ ಬೆಂಬಲಿತ 5ಅಭ್ಯರ್ಥಿಗಳು ಹಾಗೂ 3ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ವಿಜೇತ ಅಭ್ಯರ್ಥಿಗಳ ಪರ ಘೋಷಣೆಗಳೊಂದಿಗೆ ಮೆರವಣಿಗೆಯನ್ನು ನಡೆಸಿ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿಲಾಯಿತು.