ಕೆರಕನಳ್ಳಿ ಗ್ರಾಮದಲ್ಲಿ ಕುಸಿದು ಬಿದ್ದ ಮನೆ ಪ್ರಾಣಪಾಯದಿಂದ ಪಾರಾದ ಕುಟುಂಬಸ್ಥರುಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಭೇಟಿ ಪರಿಶೀಲನೆ

ಅಫಜಲಪುರ: ಆ.5:ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿತ್ತಿರುವ ದಾರಕಾರ ಮಳೆಗೆ ತಾಲೂಕಿನ ಕೆರಕನಳ್ಳಿ ಗ್ರಾಮ ಹರಿಜನ ಬಡವಾಣೆಯ ನಿವಾಸಿ ದತ್ತಪ್ಪ ಹರಿಜನ ಅವರ ಮನೆಯೊಂದು ಕುಸಿದು ಬಿದ್ದಿದೆ ಮನೆಯಲ್ಲಿ ನಾಲ್ಕು ಜನ ಕುಟುಂಬಸ್ಥರು ಆತಂಕದ ಮದ್ಯದಲ್ಲಿ ಪ್ರಾಣಪಾಯದಿಂದ ಪಾರಾದ ಘಟನೆ ಜರುಗಿದೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತಾಲೂಕ ಕಂದಾಯ ಇಲಾಖೆ ಗ್ರಾಮಾಲೆಕ್ಕಾಧಿಕಾರಿ ದತ್ತು ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ತಹಸೀಲ್ದಾರರ ಗಮನಕ್ಕೆ ತಂದು ಹಾನಿಯಾದ ಮನೆಯ ಕುಟುಂಬಸ್ಥರಿಗೆ ಸರಕಾರದಿಂದ ಪರಿಹಾರ ಕೊಡಸುವುದಾಗಿ ಬರವಸೆ ನೀಡಿದರು. ಅಲ್ಲದೇ ಈ ವಾರ್ಡಿನಲ್ಲಿ ಇನ್ನು ಹಲವಾರು ಮನೆಗಳು ಮಳೆಗೆ ಬಿದ್ದಿವೆ ಅವು ಕೂಡ ಸಮೀಕ್ಷೆ ಮಾಡಿ ಪರಿಶೀಲನೆ ಮಾಡಿ ತಹಸೀಲ್ದಾರರ ಗಮನಕ್ಕೆ ತಂದು ಪ್ರಮಾಣಿಕವಾಗಿ ಈ ಪಲಾನುಬವಿಗಳಿಗೆ ಪರಿಹಾರ ಕೊಡುಸುವುದಾಗಿ ಬರವಸೆ ನೀಡಿದರು.