ಕೆಮ್ಮಿನ ಸಿರಫ್‌ನಿಂದಲೇ ಮಕ್ಕಳ ಸಾವು ದೃಢ

ವಾಷಿಗ್ಟಂನ್, ಮಾ. ೫-ಭಾರತ ಮೂಲದ ಮೇಡನ್ ಔಷಧ ತಯಾರಿಕಾ ಕಂಪನಿ ಲಿಮಿಟೆಡ್ ಉತ್ಪಾದನೆ ಮಾಡಿದ ಕೆಮ್ಮಿನ ಸಿರಫ್ ಸೇವಿಸಿ ಗ್ಯಾಂಬಿಯಾದಲ್ಲಿ ಮಕ್ಕಳು ಮೃತಪಟ್ಟಿರುವುದು ಖಚಿತವಾಗಿದೆ ಎಂದು ಅಮೇರಿಕಾದ ಹೇಳಿದೆ.
ಗ್ಯಾಂಬಿಯನ್ ಆರೋಗ್ಯ ಅಧಿಕಾರಿಗಳು ನಡೆಸಿದ ಹೊಸ ತನಿಖೆಯಲ್ಲಿ ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮು ಸಿರಪ್‌ಗಳ ನಡುವೆ ಕಲುಷಿತಗೊಂಡಿರುವುದೇ ಕಾರಣ ಎಂದು ಹೇಳಲಾಗಿದೆ.
ಔಷಧ ತಯಾರಿಕಾ ಕಂಪನಿಯಿಂದ ಗ್ಯಾಂಬಿಯಾಕ್ಕೆ ಸರಬರಾಜು ಮಾಡಲಾದ ನಾಲ್ಕು ಕೆಮ್ಮು ಸಿರಪ್‌ಗಳು ಕಳಪೆ ಗುಣಮಟ್ಟದ್ದಾಗಿವೆ ಇದರಿಂದ ಗ್ಯಾಂಬಿಯಾದಲ್ಲಿ ಅನೇಕ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದೀಗ ಅಮೇರಿಕಾ ಕೂಡ ಇದನ್ನೇ ಸ್ಪಷ್ಟಪಡಿಸಿದೆ.
ಕೆಲವು ರಾಸಾಯನಿಕಗಳಿಂದ ಕಲುಷಿತಗೊಂಡ ಔಷಧಿಗಳು ಮಕ್ಕಳ ಸಾವಿಗೆ ಕಾರಣವೆಂದು ಕಂಡುಬಂದಿದೆ. “ಗ್ಯಾಂಬಿಯಾಕ್ಕೆ ಆಮದು ಮಾಡಿಕೊಳ್ಳಲಾದ ಡೈಎಥಿಲೀನ್ ಗ್ಲೈಕಾಲ್ ಅಥವಾ ಎಥಿಲೀನ್ ಗ್ಲೈಕಾಲ್ ನೊಂದಿಗೆ ಕಲುಷಿತಗೊಂಡ ಔಷಧಿಗಳು ಮಕ್ಕಳಲ್ಲಿ ಈ ತೀವ್ರವಾದ ಮೂತ್ರಪಿಂಡದ ಸಮಸ್ಯೆಗೆ ಸಿಲುಕಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದೆ.
ಔಷಧಿ ಸೇವಿಸಿದ ಮಕ್ಕಳು ರೋಗಿಗಳು ತಲೆನೋವು ಮತ್ತು ಜಠರಗರುಳಿನ ರೋಗಲಕ್ಷಣಗಳನ್ನು ಒಳಗೊಂಡಂತೆ ಹಲವಾರು ಚಿಹ್ನೆಗಳು ಮತ್ತು ರೋಗಲಕ್ಷಣ ಅನುಭವಿಸಿದ್ದಾರೆ. ದೇಶೀಯವಾಗಿ ತಯಾರಿಸುವುದಕ್ಕಿಂತ ಹೆಚ್ಚಾಗಿ ಕಲುಷಿತ ಔಷಧಿಗಳನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗಿದೆ” ಎಂದು ಅಮೇರಿಕಾ ಹೇಳಿದೆ.
“ಏಕಕಾಲದಲ್ಲಿ, ಕಡಿಮೆ-ಸಂಪನ್ಮೂಲ ದೇಶಗಳು ಆಮದು ಮಾಡಿದ ಔಷಧಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪರೀಕ್ಷಿಸಲು ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಲ್ಲದಿರುವುದೇ ಅನಾಹುತಕ್ಕೆ ಕಾರಣ ಎಂದು ಹೇಳಲಾಗಿದೆ.
ಕಳೆದ ಸಂಸತ್ತು ಅಧಿವೇಶನದಲ್ಲಿ ಲೋಕಸಭೆಗೆ ನೀಡಿದ ಉತ್ತರದಲ್ಲಿ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಪರೀಕ್ಷೆಯ ನಂತರ ಗುಣಮಟ್ಟದ ಗುಣಮಟ್ಟ ಎಂದು ಘೋಷಿಸಲಾಗಿದೆ ಎಂದು ಹೇಳಿದ್ದರು. ಇದೀಗ ಅವು ಕಳೆಪೆ ಗುಣಮಟ್ಟದಿಂದ ಕೂಡಿವೆ ಎನ್ನುವುದು ಸಾಬೀತಾಗಿದೆ.