ಕೆಬಿಜೆಎನ್‌ಎಲ್ ಅಧಿಕಾರಿಗಳು ಮೌನಕ್ಕೆ ಶರಣು? ಹಳ್ಳ ಹಿಡಿದ ನೀರಾವರಿ ಯೋಜನೆ

ದುರಗಪ್ಪ ಹೂಸಮನಿ.
ಲಿಂಗಸುಗೂರು.ನ.೨೨- ತಾಲೂಕಿನ ರಾಂಪುರ ಏತನೀರವಾರಿ ಯೊಜನೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ ಅಧಿಕಾರಿಗಳ ಬೇಜಾವ್ದಾರಿ ಕರ್ತವ್ಯದಿಂದ ನಿರ್ಲಕ್ಷ್ಯೆವಹಿಸಿ ರೈತರ ಬಾಳಲ್ಲಿ ಚೆಲ್ಲಾಟವಾಡುತ್ತಿದ್ದರೆ. ಸರಕಾರ ರೈತರಿಗಾಗಿ ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಅದರು ಕೂಡಾ ನೀರಾವರಿ ಯೋಜನೆ ರೈತರ ಹೂಲಗಳಿಗೆ ನೀರು ಹರಿಸದೇ ಕಣ್ಣುಮಚ್ಚಿದ್ದಾರೆ. ರೈತರು ಗೋಳು ಕೇಳುವರು ಇಲ್ಲಾದಂತಾಗಿದೆ.
ಲಿಂಗಸುಗೂರ ಶಾಸಕರು ಒಮ್ಮೆಯಾದರು ಐದನಾಳ ಗ್ರಾಮಕ್ಕೆ ಬೇಟಿ ನೀಡದೇ ಪಕ್ಷಪಾತ ದೋರಣೆ ಮಾಡುತ್ತಿದ್ದಾರೆ. ರೈತರು ತಮ್ಮ ಹೂಲಗಳಿಗೆ ನುಗ್ಗುವ ಬಸಿ ನೀರಿನ ಸಮಸ್ಯೆಯನ್ನು ಯಾರಿಗೆ ಹೇಳಬೇಕು ಐದನಾಳ ಗ್ರಾಮದ ರೈತರು ಇನ್ನು ೬ ತಿಂಗಳು ನಂತರ ಶಾಸಕರು ನಮ್ಮ ಹತ್ತಿರ ಮತ ಕೇಳಲು ಬಂದಾಗ ತಕ್ಕ ಪಾಠ ಕಲಿಸುತ್ತೇವೆ ಎಂದು ತಮ್ಮ ಆಕ್ರೋಶವನ್ನು ಶಾಸಕರ ವಿರುದ್ಧ ವ್ಯಕ್ತಪಡಿಸಿದರು.
ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತದ ಅಧಿಕಾರಿಗಳ ಕರ್ತವ್ಯೆ ನಿರ್ಲಕ್ಷ್ಯತನದಿಂದ ಕಾಲುವೆಗೆ ನೀರು ಬಿಟ್ಟಾಗ ಪ್ರತಿ ಬಾರಿಯು ಐದನಾಳ ಗ್ರಾಮದೊಳಗೆ ಪದೇ ಪದೇ ಕಾಲುವೆ ನೀರು ಹೊಕ್ಕು ಜನಜೀವನ ಅಸ್ತವ್ಯಸ್ಥವಾಗುತ್ತಿದೆ. ಅಧಿಕಾರಿಗಳ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ
ಕಾಲುವೆ ನೀರು ತಾಲೂಕಿನ ಐದನಾಳ ಗ್ರಾಮಕ್ಕೆ ಪ್ರತಿ ವರ್ಷವೂ ಕಾಲುವೆಗೆ ನೀರು ಬಂದರೇ ಸಾಕು ಪದೇ ಪದೇ ನೀರು ನುಗ್ಗುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ತೊಂದರೆ ಆಗುತ್ತಿ ದ್ದರೂ ಸಂಬಂಧ ಪಟ್ಟ ಇಂಜಿನಿಯರ್ ನಾಗೇಶ ಮಾತ್ರ ಮೌನಕ್ಕೆ ಶರಣಗಿದ್ದಾರೆ. ಸಾಕಷ್ಟು ಸಲ ಮನವಿ ಮಾಡಿದರೂ ಕೂಡ ಅಧಿಕಾರಿಗಳು ಮಾತ್ರ ತಮಗೆ ಸಂಬಂಧ ಇಲ್ಲ. ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇಲ್ಲಿನ ರೈತರಿಗೆ ಅನುಕೂಲ ವಾಗಲಿ ಎಂದು ಸರ್ಕಾರ ಏತನೀರಾ ವರಿ ಯೋಜನೆ ಜಾರಿಗೆ ತಂದಿದ್ದರೆ ಆದರೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದು, ಇಂಜಿನಿಯರ್ ನಾಗೇಶರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಐದನಾಳ ಗ್ರಾಮದ ಹತ್ತಿರ ಇರುವ ರಾಂಪುರ ಏತನೀರಾವರಿ ಯೋಜನೆಯ ಮುಖ್ಯ ಕಾಲುವೆ ನಿರ್ಮಾಣ ಹಂತದಲ್ಲಿಯೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರೈತರು ತಮ್ಮ ಜಮೀನುಗಳಿಗೆ ನೀರು ಪಡೆದುಕೊಳ್ಳಲು ಕಾಲುವೆಯ ಗುಂಡಿ ತಿರುವುತ್ತಾರೆ. ಆಗ ನೀರಿನ ಒತ್ತಡ ಕಾಲುವೆ ಯಲ್ಲಿ ಹೆಚ್ಚಾಗುತ್ತದೆ. ಹೆಚ್ಚುವರಿ ನೀರು ಗ್ರಾಮದೊಳಗೆ ನುಗ್ಗುತ್ತದೆ. ಹಳ್ಳದ ರೀತಿ ಗ್ರಾಮದ ಮುಖ್ಯರಸ್ತೆ ಯಲ್ಲಿ ಕಾಲುವೆ ನೀರು ಹರಿಯು ವದರಿಂದ ಸಾರ್ವಜನಿಕರು ಪದೇ ಪದೇ ತೊಂದರೆಗೆ ಒಳಗಾಗುತ್ತಿ ದ್ದಾರೆ. ತಾತ್ಕಾಲಿಕವಾಗಿ ತೇಪೆ ಸಾರಿಸಿದ ಅಧಿಕಾರಿಗಳು ಪುನಃ ನೀರು ಗ್ರಾಮದೊಳಗೆ ಬಂದ ಮಾಹಿತಿ ಕೇಳಿ ದರೂ ಇತ್ತ ಸುಳಿಯದೇ ನಿರ್ಲಕ್ಷ ವಹಿಸಿದ್ದಾರೆಂದು ಗ್ರಾಮಸ್ಥರು ದೂರುತ್ತಾರೆ.
೧ – ರುದ್ರಯ್ಯ ಸ್ವಾಮಿ , ಐದನಾಳ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಅಧ್ಯಕ್ಷ
ಕಾಲುವೆಯ ನಿರ್ವಹಣೆ ಮತ್ತು ಮೇಲುಸ್ತುವಾರಿ ವಹಿಸುವ ಇಂಜಿನಿಯರ್ ಮಾತ್ರ ಸಮಸ್ಯೆ ಪರಿಹಾರಕ್ಕೆ ಮುಂದಾಗದೇ, ಹಾರಿಕೆ ಉತ್ತರ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆನ್ನುವ ಆರೋಪಗಳು ಕೇಳಿ ಬರುತ್ತಿವೆ. ಶಾಸಕರು ಇತ್ತ ಗಮನ ಹರಿಸಿ ಕೂಡಲೇ ಪೋಲಾಗುತ್ತಿರುವ ನೀರು ಸಮರ್ಪಕವಾಗಿ ರೈತರಿಗೆ ಬಳಕೆಯಾಗುವಂತೆ ಕ್ರಮಕ್ಕೆ ಮುಂದಾಗಬೇಕು. ಕಾಲುವೆ ನಿರ್ಮಾ ಣದಲ್ಲಿ ತಪ್ಪು ಎಸಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗ ಬೇಕು.

  • ೨ರಾಂಪೂರ ಏತ ನೀರಾವರಿ ಎಇಇ ಚನ್ನಪ್ಪ
    ಕಾಲುವೇ ನೀರು ಗ್ರಾಮಕ್ಕೆ ಹೋಗುವುದು ಮಾಹಿತಿ ಇದೆ ಆದಷ್ಟೂ ಬೇಗ ಐದನಾಳ ಗ್ರಾಮಕ್ಕೆ ನೀರು ಹೋಗುದನ್ನು ತಡೆಯಲಾಗುತ್ತದೆ. ಇಂಜೀನಿಯರ ಗಮನಕ್ಕೆ ತಂದು ರಸ್ತೆ ನೀರು ಸರಿಪಡಿಸಿ ಗ್ರಾಮಸ್ಥರಿಗೆ ಅನು ಕೂಲ ಮಾಡಿಕೊಡಲಾಗುತ್ತದೆ.