ಕೆಬಿಎನ ವಿಶ್ವವಿದ್ಯಾಲಯದಲ್ಲಿ ವಿಶ್ವ ಕುಷ್ಠರೋಗ ದಿನಾಚರಣೆ

ಕಲಬುರಗಿ:ಜ.31: ವಿಶ್ವ ಕುಷ್ಠರೋಗ ದಿನಾಚರಣೆ 2024ರ ನಿಮಿತ್ತ ಕೆಬಿಎನ ವಿಶ್ವವಿದ್ಯಾನಿಲಯದ ಚರ್ಮರೋಗ ವಿಭಾಗವು ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹಯೋಗದಲ್ಲಿ ಮಂಗಳವಾರ ಉತ್ಸಾಹಭರಿತ ವಾಕಥಾನ ಆಯೋಜಿಸಿತ್ತು.

ವಾಕಥಾನ ಕೆಬಿಎನ ಆಸ್ಪತ್ರೆಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ಚೌಕವರೆಗೆ ಜರುಗಿತು.

ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಗುರುಪ್ರಸಾದ್ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ತಿಳಿ ಹೇಳಿದರು. ಕುಷ್ಠರೋಗವನ್ನು ಗುಣಪಡಿಸಬಹುದಾಗಿದೆ, ಕುಷ್ಠರೋಗವು ನಿಕಟ ಸಂಪರ್ಕದ ಮೂಲಕ ಹರಡುವುದಿಲ್ಲ. ಕುಷ್ಠರೋಗದ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತ ಮತ್ತು ಬಾಡು ಸುಲಭವಾಗಿ ಲಭ್ಯವಿದೆ. ಆರಂಭಿಕ ಪತ್ತೆಯು ಅಂಗವೈಕಲ್ಯಗಳನ್ನು ತಡೆಯುತ್ತದೆ. ದೇಹದ ಮೇಲೆ ಕಾಣುವಂತಹ ಬಿಳಿ ಮಚ್ಚೆ ಅಥವಾ ಸ್ಪರ್ಶಜ್ಞಾನದ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ಕಾಣಬೇಕು. ಕುಷ್ಠರೋಗವು ಶಾಪ ಅಥವಾ ಪಾಪವಲ್ಲ. ಕುಷ್ಠರೋಗವು ಕೌಟುಂಬಿಕರೋಗವಲ್ಲ ಎಂದು ತಿಳಿ ಹೇಳಿದರು.

ಐಕ್ಯೂಎಸಿ ನಿರ್ದೇಶಕರಾದ ಡಾ. ಎಂ ಎ ಬಸೀರ್ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕುಷ್ಠರೋಗದ ಜಾಗೃತಿಯ ಮಹತ್ವವನ್ನು ಒತ್ತಿಹೇಳುವ ಕರಪತ್ರಗಳನ್ನು ಸ್ಥಳೀಯ ಸಮುದಾಯಕ್ಕೆ ಹಂಚಲಾಯಿತು.

ಮೆಡಿಕಲ ಡೀನ ಡಾ ಸಿದ್ದೇಶ, ಐಕ್ಯೂಎಸಿ ನಿರ್ದೇಶಕ ಡಾ. ಎಂ ಎ ಬಸೀರ್, ಆಡಳಿತಾಧಿಕಾರಿ ಡಾ ರಾಧಿಕಾ, ನಾಡೊಜ ಡಾ. ಪಿ ಎಸ್ ಶಂಕರ್,ಕೆಬಿಎನ ಸುಪ್ರೀಟೆಂಡೆಂಟ ಡಾ ಸಿದ್ಧಾಲಿಂಗ ಚೇಂಜ್ಟಿ ಮತ್ತು ಇತರ ವಿವಿಧ ವಿಭಾಗಗಳ ಸಿಬ್ಬಂದಿಗಳು, ಸ್ನಾತಕೋತ್ತರ ಪದವೀಧರರು, ಇಂಟರ್ನಿಗಳು ಮತ್ತು ಸರಿಸುಮಾರು 100 ವಿದ್ಯಾರ್ಥಿಗಳು ವಾಕಥಾನ್‍ನಲ್ಲಿ ಸಕ್ರಿಯವಾಗಿ ಭಾಗವಹಿಸಿದರು.