ಕೆಬಿಎನ್ ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಫ್ಯಾಕಲ್ಟಿ ನೌಕರರ ಸಂಘ ಅಸ್ತಿತ್ವಕ್ಕೆ

ಕಲಬುರಗಿ,ಡಿ.4-ಇಲ್ಲಿನ ಖಾಜಾಬಂದಾನವಾಜ್ ಯುನಿವರ್ಸಿಟಿ ಫ್ಯಾಕಲ್ಟಿ ಆಫ್ ಇಂಜನಿಯರಿಂಗ್ ಆಂಡ್ ಟೆಕ್ನಾಲಜಿ ಎಂಪ್ಲಾಯಿಸ್ ಅಸೋಸಿಯೇಷನ್ ಕಳೆದ ನವೆಂಬರ್ 12 ರಂದು ಅಸ್ತಿತ್ವಕ್ಕೆ ಬಂದಿದೆ.
ಇಂಜಿನಿಯರಿಂಗ್ ಕಾಲೇಜುಗಳ ಬೋಧಕವರ್ಗಗಳ ಸಂಘದ (ಇ.ಸಿ.ಎಫ್.ಎ) ರಾಜ್ಯ ಅಧ್ಯಕ್ಷ ರಾಜಶೇಖರ ವಿ.ಎನ್.ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಂಘದ ಸ್ಥಾಪನೆಯಿಂದಾಗಿ ಎಲ್ಲ ಬೋಧಕ ವರ್ಗದವರ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ಅಲ್ಲದೇ ಕೆಲಸ ನಿರ್ವಹಣೆಗೆ ಉತ್ತಮ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದರು.
ಉದ್ಯೋಗ ಭದ್ರತೆ, ಉತ್ತಮ ಸಂಬಳ, ಸೌಲಭ್ಯಗಳನ್ನು ಪಡೆದುಕೊಳ್ಳುವ ದಿಸೆಯಲ್ಲಿ ಮಾತುಕತೆ ನಡೆಸಲು ಅನುಕೂಲವಾಗಲಿದೆ ಎಂದ ಅವರು, ತಮ್ಮ ಸಂಘಟನೆಯಿಂದಲೂ ಕೆಬಿಎನ್ ಫ್ಯಾಕಲ್ಟಿ ಸಂಘಕ್ಕೆ ಸಹಾಯ, ಸಹಕಾರ ನೀಡಲಾಗುವುದೆಂದು ಭರವಸೆಯಿತ್ತರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಈ ಆಂಡ್ ಐ ವಿಭಾಗದ ಮುಖ್ಯಸ್ಥ ಡಾ.ಅನಿಲಕುಮಾರ ಪಾಟೀಲ ಮಾತನಾಡಿ, ಯುವ ಬೋಧಕವರ್ಗದವರು ಹೊಸ ಸಂಘ ರಚಿಸಿದ್ದಕ್ಕಾಗಿ ಅಭಿನಂದಿಸಿದರು.
ಕೆಬಿಎನ್ ವಿವಿ ಇಂಜಿನಿಯರಿಂಗ್ ಫ್ಯಾಕಲ್ಟಿ ಸಂಘದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರೊ.ಮೊಹ್ಮದ್ ಮಝರ್ ಹುಸೇನ್ (ಅಧ್ಯಕ್ಷ), ಪ್ರೊ.ಮಂಜುನಾಥ ಡಿ.ಸಿ. (ಉಪಾಧ್ಯಕ್ಷ), ಮೊಹ್ಮದ ಮನ್ಸೂರ ಅಹ್ಮದ್ (ಪ್ರಧಾನ ಕಾರ್ಯದರ್ಶಿ) ಹಾಗೂ ಶೇಖ್ ಅಬ್ದುಲ್ ಮಾಜಿದ್ (ಖಜಾಂಚಿ) ಆಯ್ಕೆಯಾದರು. ನೂತನ ಅಧ್ಯಕ್ಷ ಪ್ರೊ.ಮಝರ್ ಹುಸೇನ್ ಅವರು ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ, ಸಂಘದ ಸಂಘಟನಾ ಕಾರ್ಯದರ್ಶಿ ಪ್ರೊ.ವಿಶಾಲದತ್ತ ವಿ.ಕೋಹಿರ್ ಮಾತನಾಡಿದರು. ಜಂಟಿ ಕಾರ್ಯದರ್ಶಿ ಪ್ರೊ.ಸಾಯಿನಾಥ ವೈದ್ಯ, ಪ್ರೊ.ಜಮ್ ರುದ್ ತಾಜ್, ಪ್ರೊ.ಮೊಹ್ಮದ್ ಯೂಸೂಫ್, ಪ್ರೊ.ಝೂಹ್ರಾ ಬೇಗಂ, ಪ್ರೊ.ವಿಕಾಸ ಅಣಕಲ್, ಪ್ರೊ.ಮೊಹ್ಮದ್ ಸಿರಾಜ್ ಅಹ್ಮದ್, ಪ್ರೊ.ಸಮದ್ ಸಯೀದ್, ಉಮಾದೇವಿ, ಕನಿತಾ ಇಶ್ರತ್ ಉಪಸ್ಥಿತರಿದ್ದರು.