ಕೆಬಿಎನ್ ವಿಶ್ವವಿದ್ಯಾನಿಲಯದಲ್ಲಿ ವಿಶ್ವ ವಿಟಲಿಗೋ ದಿನ ಆಚರಣೆ

ಕಲಬುರಗಿ:ಜೂ.28:ಕೆಬಿಎನ್ ವಿಶ್ವವಿದ್ಯಾನಿಲಯದ ಚರ್ಮರೋಗ ವಿಭಾಗವು ಮಂಗಳವಾರ ರಂದು ವಿಶ್ವ ವಿಟಲಿಗೋ ದಿನವನ್ನು ಆಚರಿಸಿತು.

ವಿಟಲಿಗೋ ಅರ್ಥ, ಅದರ ಪರಿಣಾಮ ಮತ್ತು ಅದರ ನಿರ್ವಹಣೆಯಲ್ಲಿನ ಪ್ರಗತಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡರ್ಮಟಾಲಜಿ ವಿಭಾಗದ ಡಾ. ಹುಮೇರಾ ಅನ್ಸಾರಿ ಅವರು ರೋಗದ ವಿವಿಧ ಅಂಶಗಳು, ಅದರ ಚಟುವಟಿಕೆ ಮತ್ತು ಲಭ್ಯವಿರುವ ಇತ್ತೀಚಿನ ಚಿಕಿತ್ಸಾ ಆಯ್ಕೆಗಳನ್ನು ಚರ್ಚಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿಇಒ ಡಾ ಪಿ . ಎಸ್ ಶಂಕರ್, ಡೀನ್ ಡಾ.ಸಿದ್ದೇಶ್, ಸಂಶೋಧನಾ ಡೀನ್ ಡಾ.ರಾಜಶ್ರೀ ಪಾಲಾಡಿ, ಎಚ್‍ಒಡಿ ಚರ್ಮರೋಗ ಡಾ.ಗುರುಪ್ರಸಾದ್, ವೈದ್ಯಕೀಯ ಅಧೀಕ್ಷಕ ಡಾ.ಸಿಡ್ಲಿಂಗ್ ಚೆಂಗ್ಟಿ ಮತ್ತು ಇತರ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಡಾ ಗುರುಪ್ರಸಾದ ಸಂವಾದದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳು ತಮ್ಮ ಅನುಮಾನಗಳನ್ನು ಸ್ಪಷ್ಟಪಡಿಸಲು ಮತ್ತು ವಿಟಲಿಗೋ ನಿರ್ವಹಣೆಗೆ ಮೌಲ್ಯಯುತವಾದ ಜ್ಞಾನವನ್ನು ಪಡೆದುಕೊಂಡರು.

2022ನೇ ಸಾಲಿನ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕøತ ಡಾ ಪಿ ಎಸ್ ಶಂಕರ್ ಅವರನ್ನು ಸನ್ಮಾನಿಸಲಾಯಿತು.

ಡಾ.ಗುರುಪ್ರಸಾದ್ ಪೆÇ್ರ ಮತ್ತು ಮುಖ್ಯಸ್ಥ ಸ್ವಾಗತಿಸಿದರು.ಡಾ.ಸೋನಾಲಿ ರೇವಣಕರ್ ವಂದಿಸಿದರು. ಡಾ.ಗುರುಪ್ರಸಾದ್ ನಿರೂಪಿಸಿದರು.