ಕೆಬಿಎನ್ ವಿವಿಯಲ್ಲಿ ಬೃಹತ್ ಉದ್ಯೋಗ ಮೇಳ

ಕಲಬುರಗಿ:ನ.3: ನಗರದ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯ ಮತ್ತು ಮುಸ್ಲಿಂ ವೃತ್ತಿಪರ ಸಂಘದ ಸಹಯೋಗದಲ್ಲಿ ಇದೇ ನ. 4ರಂದು ಬೆಳಿಗ್ಗೆ 10 ಗಂಟೆಯಿಂದ ಸಾ. 4 ಗಂಟೆ ವರೆಗೆ ಕೆಬಿಎನ್ ವಿಶ್ವವಿದ್ಯಾಲಯ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಈ ಮೇಳದಲ್ಲಿ ಅಮೆಜಾನ್, ಕೋಟಕ್, ಮಹಿಂದ್ರಾ ಮತ್ತು ಆಪೆÇಲೊ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಜಿಲ್ಲೆಯ ವಿದ್ಯಾರ್ಥಿಗಳು, ಯುವಕರು, ಉದ್ಯೋಗಾ ಕಾಂಕ್ಷಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೆಬಿಎನ್ ವಿವಿಯ ಸಮಕುಲಾಧಿಪತಿ ಜನಾಬ್ ಸಯ್ಯದ್ ಮಹಮ್ಮದ ಅಲಿ ಅಲ್ ಹುಸ್ಸೇನಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ https://www.ampindia.org/AMP_Job_Form or https://www.tinyurl.com/AMPJobForm ಮೂಲಕ ನೋಂದಾಯಿಸಿಕೊಳ್ಳಬೇಕು ಅಥವಾ ಮೇಳದ ದಿನದಂದು ಸ್ಥಳದಲ್ಲೇ ತಮ್ಮ ಹೆಸರು ನೋಂದಾವಣಿ ಮಾಡಿಕೊಳ್ಳಬಹುದು. ನೋಂದಣಿ ಉಚಿತವಾಗಿದ್ದು, ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ಬರಬೇಕು. ಹೆಚ್ಚಿನ ಮಾಹಿತಿಗಾಗಿ ಸಯ್ಯದ್ ತಾಕದ್ದಿನ್ (7815827815) ಇವರನ್ನು ಸಂಪರ್ಕಿಸಿಬಹುದು.