ಕೆಬಿಎನ್ ವಿವಿಯಲ್ಲಿ ನ್ಯಾಕ ಕಾರ್ಯಾಗಾರ

ಕಲಬುರಗಿ :ಜೂ.2: ರಾಜ್ಯದ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಸಾಧನೆ ಮತ್ತು ಬೋಧನೆ, ಸಂಶೋಧನೆಗಳಲ್ಲಿ ಉನ್ನತ್ತೀಕರಣ ಹೊಂದಿ ಗುರಿ ಸಾಧಿಸಲು ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ ಅತಿ ಅವಶ್ಯಕವಾಗಿದೆ ಎಂದು ಕುವೆಂಪು ವಿಶ್ವ ವಿದ್ಯಾಲಯದ ಅನ್ವಯಿಕ ಭೂವಿಜ್ಞಾನ ವಿಭಾಗದ ಪ್ರಾದ್ಯಾಪಕ ಪೆÇ್ರ. ಆಶಫಕ್ ಅಹ್ಮದ್ ಅಭಿಪ್ರಾಯಪಟ್ಟರು. ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ “ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನ್ಯಾಕ್ ಮಂಡಳಿ ಸಕಾಲದಲ್ಲಿ ರೂಪಿಸುವ ನಿಯಮಗಳಿಂದ ವಿಶ್ವಾವಿದ್ಯಾಲಯ ಮತ್ತು ಕಾಲೇಜುಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸದಾ ಚಟುವಟಿಕೆಯಿಂದಿರುತ್ತಾರೆ. ಅದರ ಜೊತೆಗೆ ಸಂಶೋಧನೆ ಮತ್ತು ವಿಶೇಷ ಇತರೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಕಲಿಕೆಯಲ್ಲಿ ಆಸಕ್ತಿ ಮತ್ತು ಕ್ರಿಯಾಶೀಲತೆ ಬೆಳೆಯುತ್ತದೆ ಎಂದರು.

ಕೆಬಿಎನ್ ವಿವಿಯ ಉಪ ಕುಲಪತಿಗಳಾದ ಪೆÇ್ರೀ ಅಲಿ ರಜಾ ಮೂಸ್ವಿ ಅಧ್ಯಕ್ಷತೆವಹಿಸಿ ಮಾತನಾಡಿ ಕೆಬಿಎನ್ ವಿಶ್ವವಿದ್ಯಾಲಯದ ಸಮಗ್ರ ಶೈಕ್ಷಣಿಕ ಬೆಳವಣಿಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಎಲ್ಲಾ ವಿಭಾಗಗಳ ಪ್ರಾಧ್ಯಾಪಕರು ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಬೇಕಿದೆ. ನ್ಯಾಕ್ ಮಾನ್ಯತೆ ಶ್ರೇಣಿಯಯಲ್ಲಿ ಉತ್ತಮ ಸ್ಥಾನಗಳಿಸಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ ಅತ್ಯುತ್ತಮ ಯೋಜನೆಗಳನ್ನು ಪಡೆಯುವ ಮೂಲಕ ವೈಯಕ್ತಿಕ ಸಾಧನೆ ಮತ್ತು ಸಂಸ್ಥೆಯ ಪ್ರತಿಷ್ಠೆಯನ್ನು ಉನ್ನತಿ ಸಾಧನೆಗೆ ಆದ್ಯತೆ ನೀಡಿದಂತಾಗುತ್ತದೆ. ಅಲ್ಲದೇ ವಿವಿ ಬಗ್ಗೆ ಕೂಡ ಧನಾತ್ಮಕತೆ ಬೆಳೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಭಾಗದ ಡೀನ್ ಡಾ ನಿಶಾತ ಆರೀಫ್ ಹುಸೇನಿ, ವೈದ್ಯಕೀಯ ನಿಕಾಯದ ಡೀನ ಡಾ. ಸಿದ್ದೇಶ್ ಮತ್ತು ಇಂಜಿನಿಯರಿಂಗ್ ನಿಕಾಯದ ಡೀನ ಪೆÇ್ರ. ಮೊಹಮ್ಮದ್ ಅಜಮ ಹಾಗೂ ಕೆಬಿಎನ್ ವಿವಿಯ ಎಲ್ಲ ನಿಕಾಯದ್ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಹಫೀಜ್ ಸಮೀರ್ ಹುಸೇನಿ ಪ್ರಾರ್ಥಿಸಿದರು. ಐಕ್ಯೂಎಸಿ ಘಟಕದ ನಿರ್ದೇಶಕ ಡಾ. ಮೊಹಮ್ಮದ ಅಬ್ದುಲ್ ಬಷೀರ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಕೆಬಿಎನ್ ವಿವಿಯ ಕುಲಸಚಿವೆ ಡಾ. ರುಕ್ಸರ್ ರ್ ಫಾತಿಮಾ ವಂದಿಸಿದರು. ಡಾ. ಇರ್ಫಾನ್ ಅಲಿ ನಿರೂಪಿಸಿದರು.

ಕಾರ್ಯಾಗಾರದ ಮೊದಲನೆಯ ಅವಧಿಯಲ್ಲಿ ಪೆÇ್ರ.ಎಸ್.ಎ ಅಹ್ಮದ್ “ಆರಂಭಿಕ ಹಂತಗಳು ಮತ್ತು ಮಾರ್ಗಸೂಚಿ ಡೇಟಾವನ್ನು ಸಿದ್ಧಪಡಿಸುವುದು ಮತ್ತು ನಿರ್ವಹಿಸುವುದು” ವಿಷಯದ ಕುರಿತು ಭೋಧನೆ ನೀಡಿದರು.

ಎರಡನೆಯ ಅವಧಿಯಲ್ಲಿ “ನಿಮ್ಮ ಸಂಶೋಧನಾ ಪೆÇ್ರಫೈಲ್ ಅನ್ನು ನಿರ್ಮಿಸುವುದು ಮತ್ತು ಹೆಚ್ಚಿಸುವುದು” ವಿಷಯದ ಬಗ್ಗೆ ಕರ್ನಾಟಕದ ಕೇಂದ್ರೀಯ ವಿವಿಯ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪೆÇ್ರ ರೋಮೆಟ್ ಉಪನ್ಯಾಸ ನೀಡಿದರು.

ಪ್ರತಿ ಅವಧಿ ಪ್ರಶ್ನೋತ್ತರ ಅವಧಿಯನ್ನು ಒಳಗೊಂಡಿತ್ತು.

ಈ ಕಾರ್ಯಾಗಾರದಲ್ಲಿ ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಭಾಗದ ಡೀನ್ ಡಾ. ನಿಶಾತ ಆರೀಫ್ ಹುಸೇನಿ, ವೈದ್ಯಕೀಯ ನಿಕಾಯದ ಡೀನ ಡಾ. ಸಿದ್ದೇಶ್ ಮತ್ತು ಇಂಜಿನಿಯರಿಂಗ ನಿಕಾಯದ ಡೀನ ಪೆÇ್ರ. ಅಜಮ ಮತ್ತಿತರರು ಹಾಜರಿದ್ದರು.

ಸಮಾರೋಪ ಸಮಾರಂಭ
ಕೆಬಿಎನ್ ಉನ್ನತಿಗೆ ಎಲ್ಲರ ಶ್ರಮ ಅವಶ್ಯಕ : ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ

ಖಾಜಾ ಬಂದಾನವಾಜ ವಿವಿ ಭಾರತ ದೇಶಾದ್ಯಂತ ಹೆಸರು ಮಾಡಬೇಕಂದರೆ ಎಲ್ಲ ಉಪನ್ಯಾಸಕರ ಶ್ರಮ ಅಗತ್ಯ. ನಿರಂತರ ಪ್ರಯತ್ನ್ ಹಾಗೂ ಆಸಕ್ತಿಯಿಂದ ಕೆಲಸ ಮಾಡಿದಲ್ಲಿ ಕೆಬಿಎನ್ ವಿವಿಯು ಮುಂಬರುವ ದಿನಗಳಲ್ಲಿ ಅತ್ಯುನ್ನತ ವಿವಿಯ ಪಟ್ಟಿಯಲ್ಲಿ ಸೇರಬಹುದು ಎಂದು
ಕೆಬಿಎನ್ ವಿಶ್ವವಿದ್ಯಾಲಯದ ಸಮ ಕುಲಪತಿ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು.
ಕರ್ಯಾಗಾರದ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇಂದಿನ ಕಾರ್ಯಾಗಾರದಲ್ಲಿ ಕಲಿತ ವಿಷಯಗಳನ್ನು ಪರಿಗಣಿಸಿ, ವಿವಿಯ ಉಪ ಕುಲಪತಿಯವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳನ್ನು ಕೈಗೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ವಿವಿಯ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾತ್ರವೂ ಮುಖ್ಯ. ನಾವೆಲ್ಲ ಒಟ್ಟಾಗಿ ಶ್ರಮಿಸೋಣ ಎಂದರು.

ವಿವಿಯ ಉಪ ಕುಲಪತಿ ಪೆÇ್ರೀ ಅಲಿ ರಜಾ ಮೂಸ್ವಿ ಕಾರ್ಯಾಗಾರ ಕುರಿತು ಮಾತನಾಡಿದರು.

ಡಾ ನಮ್ರತಾ ರಾವುತ, ಡಾ ಮೈನುದ್ದಿನ್ ಹಾಗೂ ರಮೇಶ್ ಕಾರ್ಯಾಗಾರ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಡಾ. ಬಷೀರ್ ವಂದಿಸಿದರು.ಡಾ ಇರ್ಫಾನ್ ಅಲಿ ನಿರೂಪಿಸಿದರು.

ಈ ಕಾರ್ಯಾಗಾರದಲ್ಲಿ ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಭಾಗದ ಡೀನ್ ಡಾ. ನಿಶಾತ ಆರೀಫ್ ಹುಸೇನಿ, ವೈದ್ಯಕೀಯ ನಿಕಾಯದ ಡೀನ ಡಾ. ಸಿದ್ದೇಶ್ ಮತ್ತು ಇಂಜಿನಿಯರಿಂಗ ನಿಕಾಯದ ಡೀನ ಪೆÇ್ರ. ಅಜಮ ಹಾಗೂ ಎಲ್ಲ ನಿಕಾಯದ್ ಪ್ರಧ್ಯಪಕರು ಹಾಜರಿದ್ದರು.