ಕೆಬಿಎನ್ ಆಸ್ಪತ್ರೆ : ಶುಶ್ರೂಷೆಯರ ದಿನಾಚರಣೆ

ಕಲಬುರಗಿ:ಮೇ.13: ಸ್ಥಳೀಯ ಸುಪ್ರಸಿದ್ಧ ಕೆಬಿನ್ ವಿಶ್ವ ವಿದ್ಯಾಲಯದ ಕೆಬಿಎನ್ ಆಸ್ಪತ್ರೆಯ ನರ್ಸಿಂಗ ವಿಭಾಗದಿಂದ ಸೋಮವಾರ ಶುಶ್ರೂಷೆಯರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೆಬಿಎನ ವಿವಿಯ ಮೆಡಿಕಲ ಡೀನ ಡಾ ಸಿದ್ದೇಶ ಸಿರವಾರ ಮಾತನಾಡುತ್ತ, ಆರೋಗ್ಯ ಕ್ಷೇತ್ರದಲ್ಲಿ ನರ್ಸ್ಗಳ ಮಹತ್ವವನ್ನು ವಿವರಿಸಿದರು. ವೈದ್ಯರು ಚಿಕೆತ್ಸೆ ನೀಡಿದ ನಂತರ ರೋಗಿಗಳ ಆರೈಕೆಯಲ್ಲಿ ದಾದಿಯರ ಪಾತ್ರ ಮುಖ್ಯ. ಅವರ ಸಹನೆ ಒಂದು ಸವಾಲೇ ಸರಿ ಎಂದು ಅವರ ಸಮರ್ಪಣೆಯನ್ನೂ ಶ್ಲಾಘಸಿದರು. ಅವರು ಯಾವುದೇ ಆಸ್ಪತ್ರೆಯ ಗುಣಮುಟ್ಟವನ್ನು ನಿರ್ಧಾರ ಮಾಡುವಲ್ಲಿ ಅವರ ಕೊಡುಗೆ ಹೊಂದಿದ್ದಾರೆ ಎಂದರು.

ನಾಡೋಜ ಪ್ರೊ. ಪಿ ಎಸ್ ಶಂಕರ ಇವರು ದಾದಿಯರ ಕಾರ್ಯ ವೈಖರಿ ಬಗ್ಗೆ ತಿಳಿವಳಿಕೆ ನೀಡಿದರು. ರೋಗಿಗಳು ಗುಣ ಮುಖರಾಗಲು ಸುಶ್ರೂಷೆಯರ ಸೇವೆಯಿಂದ ಸಾಧ್ಯ. ರೋಗಿಗಳ ಚೇತರಿಕೆ ಅವರ ಪರಮ ಉದ್ದೇಶ. ಅವರದು ನೋಬಲ ಪ್ರೊಫೆಷನ ಎಂದು ಅಭಿಪ್ರಾಯ ಪಟ್ಟರು.

ಈ ಕಾರ್ಯದಲ್ಲಿ ದಾದಿಯರಿಗೆ ಕೆಬಿಎನ ಮೆಡಿಕಲ ಸೂಪರಿಂಟೆಂಡೆಂಟ್ ಡಾ ಸಿದ್ಧಲಿಂಗ ಚೆಂಗಟಿ ಪ್ರಮಾಣ ವಚನ ಭೋಧಿಸಿದರು. ನರ್ಸಗಳಿಗೆ ಸಸ್ಯಗಳನ್ನು ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

ನರ್ಸಿಂಗ ಸೂಪರಿಂಟೆಂಡೆಂಟ್ ಶೋಭಾ ರಾಣಿ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ನರ್ಸಿಂಗ ಮೇಲ್ವಿಚಾರಕ ಡಾ. ಮುಜಾಹಿದ ಅಲಿ ವಂದಿಸಿದರು.

ಕೆಬಿಎನ ಆಸ್ಪತ್ರೆಯ ಸೆಮಿನಾರ ಹಾಲನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಬಿಎನ ಆಡಳಿತಧಿಕಾರಿ ಮತ್ತು ಸಹಾಯಕ ಕುಲಸಚಿವರಾದ ಡಾ ರಾಧಿಕಾ, ಡಾ ಸುಜಾತಾ, ಡಾ ಶಿಲ್ಪಾ ಮತ್ತು ಡಾ. ಸಚಿನ ಶಹಾ ಮುಂತಾದವರು ಸೇರಿದಂತೆ 120 ಜನ ಹಾಜರಿದ್ದರು.