ಕೆಬಿಎನ್ ಆಸ್ಪತ್ರೆ : ಉಚಿತ ಅಸ್ತಮಾ ತಪಾಸಣೆ

ಕಲಬುರಗಿ:ಮೇ.3:ವಿಶ್ವ ಅಸ್ತಮಾ ದಿನಾಚರಣೆಯ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದ ವತಿಯಿಂದ ಮೆ 6ರಂದು ಉಚಿತ ಅಸ್ತಮಾ ( ಪಿ ಎಫ್ ಟಿ ) ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸೋಮವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆಯವರೆಗೆ ಮತ್ತು ಸಂಜೆ 4 ರಿಂದ 6ಘಂಟೆ ವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9036980130ಸಂಪರ್ಕಿಸಬಹುದು.
ಅಸ್ತಮಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೆ 8ರಂದು ವಿಶೇಷ ಉಪನ್ಯಾಸವನ್ನು ಕೂಡ ಆಯೋಜಿಸಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಡಾ. ಚಂದ್ರಕಲಾ ತಿಳಿಸಿದ್ದಾರೆ.