
ಬೀದರ:ಜು.3: ಪರಿಸರದಿಂದ ಮಾತ್ರ ಪ್ರಪಂಚ ಸುರಕ್ಷಿತವಾಗಿರಲು ಸಾಧ್ಯ, ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆರೋಗ್ಯ ಚೆನ್ನಾಗಿರಬೇಕದರೆ ಪರಿಸರ ಸ್ವಚ್ಛವಾಗಿರಬೇಕು. ಹಸಿರಿಕರಣವಾಗಿರಬೇಕು. ಎಲ್ಲಾ ಮಕ್ಕಳು ಪರಿಸರ ಪ್ರೇಮಿಗಳಾಗಿ ಗಿಡ ಮರವನ್ನು ಕಾಪಾಡಿ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟು ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ಕೆಪಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿ ಯವರು ಕರೆ ಕೊಟ್ಟರು.
ಕೆಪಿ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುವ ಕೆಪಿ ಪ್ರಾಥಮಿಕ ಪ್ರೌಢ ಕನ್ನಡ ಮತ್ತು ಇಂಗ್ಲೀಷ ಮಾಧ್ಯಮದಲ್ಲಿ ಇಂದು ವನ ಮಹೋತ್ಸವದ ನಿಮಿತ್ಯ ಸಂಸ್ಥೆಯ ಅಧ್ಯಕ್ಷ ಬಾಬು ವಾಲಿಯವರು ಸಸಿ ನೆಟ್ಟು ಮಕ್ಕಳಿಗೆ ಸಸಿಗಳು ವಿತರಿಸುವ ಮೂಲಕ ಆಚರಿಸಿದರು.
ಈ ಸಂಧರ್ಭದಲ್ಲಿ ಕೆ.ಪಿ ವಿದ್ಯಾಸಂಸ್ಥೆಯ ಮುಖ್ಯಗುರುಗಳಾದ ವಿಜಯಕುಮಾರ ಪಾಟೀಲ ಯರನಳ್ಳಿ, ಶಂಕರೆಮ್ಮ ಟೀಚರ್, ಮಹಾನಂದಾ ಪಾಟೀಲ ಸೇರಿದಂತೆ ಶಿಕ್ಷಕ ವೃಂದದವರು ಮಕ್ಕಳು ಉಪಸ್ಥಿತರಿದ್ದರು.