ಕೆಪಿ ವಿದ್ಯಾ ಸಂಸ್ಥೆಯಲ್ಲಿ ಚನ್ನಬಸವ ಪಟ್ಟದೇವರ ಜಯಂತಿ ಆಚರಣೆ

ಬೀದರ:ಡಿ.23:ಗಡಿನಾಡಿನಲ್ಲಿ ಕನ್ನಡ ಜ್ಯೋತಿ ಬೆಳಗಿಸಿದ ಹಾಗೂ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸಿದ ಮತ್ತು ನೂತನÀ ಅನುಭವ ಮಂಟಪದ ಶಿಲ್ಪಿಗಳಾದ ಈ ಭಾಗದ ನಡೆದಾಡುವ ದೇವರು ಪರಮ ಪೂಜ್ಯ ಚನ್ನಬಸವ ಪಟ್ಟದೇವರ 134ನೇ ಜಯಂತಿ ಉತ್ಸವವನ್ನು ಕೆಪಿ ವಿದ್ಯಾ ಸಂಸ್ಥೆಯಲ್ಲಿ ಇಂದು ಆಚರಿಸಲಾಯಿತು.
ಕೆಪಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಭಾರತೀಯ ಬಸವ ಬಗಳದ ರಾಜ್ಯಾಧ್ಯಕ್ಷರಾದ ಬಾಬು ವಾಲಿ ಮಾತನಾಡಿ ಪರಮ ಪೂಜ್ಯ ಚನ್ನಬಸವ ಪಟ್ಟದೇವರ ಜಯಂತಿಯನ್ನು ಸರಕಾರ ಆಚರಣೆ ಮಾಡಬೇಕು ಇದಕ್ಕಾಗಿ ಈಗಾಗಲೇ ಸರಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದು ನುಡಿದರು. ಪಟ್ಟದೇವರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡುಗೈ ದಾನಿ ಗುರುನಾಥ ಕೊಳ್ಳುರು ಮಾತನಾಡಿ ಪರಮ ಪೂಜ್ಯ ಚನ್ನಬಸವ ಪಟ್ಟದೇವರ ಪರಿಶ್ರಮದಿಂದ ಇಂದು ಗಡಿನಾಡಿನಲ್ಲಿ ಬಸವ ತತ್ವ ಉಳಿದಿದೆ ಎಂದು ನುಡಿದರು.
ಈ ಸಂಧರ್ಭದಲ್ಲಿ ಕನ್ಯಕಾ ಪರಮೇಶ್ವರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ವಿಜಯಕುಮಾರ ಪಾಟೀಲ ಯರನಳ್ಳಿ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.