ಕೆಪಿ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಠಮಿ, ಶಿಕ್ಷಕರ ದಿನ ಆಚರಣೆ

ಬೀದರ:ಸೆ.8: ಕೆ. ಪಿ ವಿದ್ಯಾ ಸಂಸ್ಧೆಯಲ್ಲಿ ಇಂದು ಸರ್ವಪಲ್ಲಿ ರಾಧಕೃಷ್ಣರ ಜನ್ಮದಿನ ಶಿಕ್ಷಕರ ದಿನಾಚರಣೆ ಮತ್ತು ಕೃಷ್ಣ ಜನ್ಮಾಷ್ಠಮಿಯನ್ನು ಸಂಯುಕ್ತವಾಗಿ ಆಚರಿಸಿ ಶಿಕ್ಷಕರಿಗೆ ಗೌರವ ವಂದನೆಯನ್ನು ಸಲ್ಲಿಸಿ ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿಯವರು ಮಾತನಾಡಿ ಶಿಕ್ಷಕರು ರಾಷ್ಟ್ರ ನಿರ್ಮಾಣದ ಸಂಸ್ಕøತಿ, ಸಭ್ಯತೆ ಆಧ್ಯತ್ಮ ನಿರ್ಮಾಣದ ಶಿಲ್ಪಿಗಳು ಎಲ್ಲರೂ ರೂಪಗೊಂಡು ನಿರ್ಮಾಣವಾಗುವುದು ಶಾಲೆಗಳಲ್ಲಿ, ವಿಧ್ಯಾರ್ಥಿ ಎಡವಿದರೆ ಸುಧಾರಿಸಬಹುದು ಶಿಕ್ಷಕರು ಎಡವಿದರೆ ಒಂದು ತಲೆಮಾರು ಜನಾಂಗ ಹಾಳಾಗುತ್ತದೆ. ಇಂಥ ಮಹತ್ವದ ದಿನ ಶಿಕ್ಷಕರ ದಿನ ಮಾತೃ ದೇವ ಭವ, ಪೀತೃ ದೇವ ಭವ, ಗುರುದೇವ ಭವ ಎಂದ ದೇಶ ನಮ್ಮದ್ದು, ಅದ್ದಕ್ಕೆ ಶಿಕ್ಷಕರ ದಿನಾಚರಣೆಗೆ ಒಂದು ಮಹತ್ವ ಇದೆ. ಅದನ್ನು ನಾವೆಲ್ಲರು ಪಾಲಿಸುತ್ತೇವೆ.
ಇಂದು ಶ್ರೀ ಕೃಷ್ಣ ಜನ್ಮಾಷ್ಠಿಮಿಯು ಇದ್ದ ಕಾರ ಗೀತೆ ನಮ್ಮ ಸಂಸ್ಕøತಿ ಬದುಕಿಗೆ ದಾರಿ ದೀಪವಾಗಿದೆ. ಶ್ರೀ ಕೃಷ್ಣ ಲೀಲೆ ಜೀವನಕ್ಕೆ ಪ್ರೇರಣೆ ನೀಡಿ ಬದುಕಿಗೆ ದಾರಿ ತೋರಿಸುವ ದಾರಿದೀಪವಾಗಿದೆ ಎಲ್ಲರೂ “ಭಗವತ ಗೀತೆ” ಓದಬೇಕೆಂದು ಕೃಷ್ಣ ಜನ್ಮಾಷ್ಠಮಿಯ ದಿನದಂದು ನಾನು ವಿದ್ಯಾರ್ಥಿಗಳಲ್ಲಿ ಕೇಳಿಕೊಳ್ಳುತ್ತೇನೆಂದು ನುಡಿದರು.
ಈ ಸಂಧರ್ಭದಲ್ಲಿ ಶಿಕ್ಷಕರನ್ನು ವಂದಿಸಿದರು. ಕೃಷ್ಣ ಜನ್ಮಾಷ್ಠಮಿಯಲ್ಲಿ ಮಕ್ಕಳು ರಾಧಾಕೃಷ್ಣರ ವೇಷಭೂಷಗಳಲ್ಲಿ ಮಿಂಚಿದರು. ಈ ಸಂಧರ್ಭದಲ್ಲಿ ಮುಖ್ಯ ಗುರುಗಳಾದ ವಿಜಯಕುಮಾರ ಪಾಟೀಲ ಶಿಕ್ಷಕ ವೃಂದ ಮುದ್ದು ಮಕ್ಕಳು ಹರ್ಷೋಲ್ಲಾಸದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.